ಎಷ್ಟೇ ವಯಸ್ಸಿನವರಾದರೂ ಕನಿಷ್ಠ 6ರಿಂದ 9 ಗಂಟೆಯವರೆಗೆ ನಿದ್ರಿಸಲೇಬೇಕು. ಇಲ್ಲವಾದಲ್ಲಿ ಅನಾರೋಗ್ಯಕ್ಕೆ ಗುರಿಯಾಗಬೇಕಾಗುತ್ತದೆ. ನಿದ್ರೆ ಕಡಿಮೆಯಾದರೆ ಹಗಲಿನಲ್ಲಿ ಹೆಚ್ಚು ನಿದ್ರೆ ಬರುತ್ತದೆ.
ಅಷ್ಟೇ ಅಲ್ಲದೆ, ಸ್ಮೃತಿ ಶಕ್ತಿ ಕಡಿಮೆಯಾಗುವುದು, ಮನಸ್ಸು ಒತ್ತಡಕ್ಕೆ ಒಳಗಾಗಿ ಇತರರೊಂದಿಗೆ ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡುವುದು, ನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯು ಕಡಿಮೆಯಾಗುವುದು ಹಾಗೂ ವಾಹನಗಳಲ್ಲಿ ಸಂಚರಿಸುವಾಗ ಅಪಘಾತಕ್ಕೆ ಒಳಗಾಗುವುದು ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತವೆ.
ಈ ಐಡಿಯಾ ಮಾಡಿ, ನಿದ್ರೆ ಸಮಸ್ಯೆ ಬರಲ್ಲ..
ಪ್ರಸ್ತುತ ದಿನಗಳಲ್ಲಿ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ರಾತ್ರಿ ನಿದ್ದೆಯೇ ಹಲವರಿಗೆ ಸಾಹಸಮಯವಾಗಿ ಬಿಟ್ಟಿದೆ. ಆದ್ರೆ ಈ ಉಪಾಯ ನೀವು ಮಾಡಿದ್ರೆ ನಿದ್ದೆ ಸಮಸ್ಯೆನೇ ನಿಮ್ಮನ್ನು ಕಾಡುವುದಿಲ್ಲ.
★ಡಯೆಟ್ ಕಾರಣಕ್ಕೆ ಅಲ್ಪಾಹಾರ ಸೇವಿಸುವವರು ಕಡಿಮೆ ಕ್ಯಾಲೊರಿಯ ಹೆಚ್ಚು ಆಹಾರ ತಿನ್ನಿ.
★ತೊಗರಿಬೇಳೆ, ರಾಗಿಯ ಕುರುಕಲು ತಿಂಡಿ ಸವಿಯಿರಿ.
★ಊಟ ಕಮ್ಮಿ ತಿನ್ನುವವರು ಹಣ್ಣುಗಳನ್ನು ತಿನ್ನಿ.
★ಎಣ್ಣೆಯಲ್ಲಿ ಹುರಿಯದ ಆಹಾರಗಳನ್ನು ಸೇವಿಸಿ.
★ಮೊದಲು ಹಸಿವಿನ ಸಮಸ್ಯೆ ನಿವಾರಿಸಿ