ನಿತ್ಯ ಜೀವನದಲ್ಲಿ ವೀಳ್ಯದೆಲೆಯ ಔಷದೀಯ ಗುಣಗಳು ಮತ್ತು ಅದರ ಮಹತ್ವ

ಹಲವಾರು ಧಾರ್ಮಿಕ, ಸಾಮಾಜಿಕ ಸಂದರ್ಭಗಳಲ್ಲಿ ವೀಳ್ಯದೆಲೆಯನ್ನು ಸೌಂದರ್ಯ ಸಾಧನವಾಗಿ, ಬಾಂಧವ್ಯದ ಕುರುಹಾಗಿ, ಸನ್ಮಾನ ಮತ್ತು ಶುಭ ಹಾರೈಕೆಯ ದ್ಯೋತಕವಾಗಿ ಮತ್ತು ದೇವತೆಗಳಿಗೆ ಭಕ್ತಿಯಿಂದ ಸಮರ್ಪಿಸುವ ಗುರುತಾಗಿ ಸಹಸ್ರಾರು ವರ್ಷಗಳಿಂದ ಇಂದಿನವರೆಗೂ ಉಪಯೋಗಿಸಲ್ಪಡುತ್ತದೆ. ಮೊದಲು ದಕ್ಷಿಣ…

betel leaf vijayaprabha

ಹಲವಾರು ಧಾರ್ಮಿಕ, ಸಾಮಾಜಿಕ ಸಂದರ್ಭಗಳಲ್ಲಿ ವೀಳ್ಯದೆಲೆಯನ್ನು ಸೌಂದರ್ಯ ಸಾಧನವಾಗಿ, ಬಾಂಧವ್ಯದ ಕುರುಹಾಗಿ, ಸನ್ಮಾನ ಮತ್ತು ಶುಭ ಹಾರೈಕೆಯ ದ್ಯೋತಕವಾಗಿ ಮತ್ತು ದೇವತೆಗಳಿಗೆ ಭಕ್ತಿಯಿಂದ ಸಮರ್ಪಿಸುವ ಗುರುತಾಗಿ ಸಹಸ್ರಾರು ವರ್ಷಗಳಿಂದ ಇಂದಿನವರೆಗೂ ಉಪಯೋಗಿಸಲ್ಪಡುತ್ತದೆ.

ಮೊದಲು ದಕ್ಷಿಣ ಭಾರತದಲ್ಲಿ ಬೆಳೆಯಲು ಪ್ರಾರಂಭವಾಗಿ ನಂತರ ರಾಷ್ಟ್ರದ ಎಲ್ಲೆಡೆ ವ್ಯಾಪಿಸಿ ಇಂದು ಪೌರ್ವಾತ್ಯ ರಾಷ್ಟ್ರಗಳವರೆಗೆ ಹಬ್ಬಿದೆ. ವೀಳ್ಯದೆಲೆಯ ಬಗ್ಗೆ ವಿಕ್ರಮಾದಿತ್ಯನ ನವರತ್ನಗಳಲ್ಲಿ ಒಬ್ಬನಾದ ಕಾಳಿದಾಸನು ಹೊಗಳಿ ಬರೆದಿದ್ದಾನೆ. ಬುದ್ಧನ ಕಾಲದಲ್ಲಿ ವೀಳ್ಯದೆಲೆಯನ್ನು ಜಗಿಯುವ ಪದ್ಧತಿಯನ್ನು ಚೀನಿ. ಯಾತ್ರಿಕರು ಉಲ್ಲೇಖಿಸಿದ್ದಾರೆ. ಹಿಂದಿನ ಕಾಲದಲ್ಲಿ ಆಯುರ್ವೇದದಲ್ಲಿ ತಾಂಬೂಲ ಸೇವನೆಯನ್ನು ದಿನನಿತ್ಯ ಆರೋಗ್ಯಕ್ರಮದಲ್ಲಿ ಸೇರಿಸಿದ್ದಾರೆ. ಇದನ್ನು ಕೇವಲ ಆಹಾರದ ನಂತರ ಸೇವಿಸಲು ತಿಳಿಸಲಾಗಿದೆ.

ಎಲೆಯು ಹುಳುಕಲ್ಲು, ದುರ್ವಾಸನೆಯನ್ನು ತಡೆಯುತ್ತದೆ. ಇದರ ಜೊತೆಯಲ್ಲಿ ಅಡಕೆಯು ವಸಡುಗಳನ್ನು ಬಲಪಡಿಸಿ ಹಲ್ಲು ಹಾಳಾಗುವುದನ್ನು ತಡೆಯುತ್ತದೆ. ಎಲೆಯು ಲಾಲಾರಸವನ್ನು ಹೆಚ್ಚಿಸಿ ಪಿಷ್ಟವನ್ನು ಜೀರ್ಣಿಸಲು ಸಹಕಾರಿಯಾಗಿದೆ. ಎದೆಯಲ್ಲಿ ಕಫವನ್ನು ಕರಗಿಸಿ ಹೊರ ಹಾಕುವುದರಿಂದ ಶ್ವಾಸಕೋಶದಿಂದ ಉಗುಳಿನಲ್ಲಿ ಹೊರಕ್ಕೆ ಹಾಕಲಾಗುತ್ತದೆ. ಸುಣ್ಣದ ಅ೦ಶ ಬಾಯಿಯಲ್ಲಿ ಹೀರಿಕೊಳ್ಳುವುದರಿಂದ ಮೈಯಲ್ಲಿ ಬಿಸಿ ಅನುಭವವಾಗುತ್ತದೆ. ಎಲೆಯಲ್ಲಿರುವ ಸುಗಂಧ ಅಂಶ ನರಗಳ ಮೇಲೆ ಪ್ರಭಾವ ಬೀರುವುದರಿಂದ ಲೈಂಗಿಕ ಉತ್ಸುಕತೆ ಉಂಟಾಗುತ್ತದೆ.

Vijayaprabha Mobile App free

ವೀಳ್ಯದೆಲೆ ಉಪಯೋಗಗಳು

1. ಎಳೆಗೂಸಿನ ಕೆಮ್ಮಿಗೆ ಎಲೆಗೆ ಎಳ್ಳೆಣ್ಣೆ ಅಥವಾ ಹರಳೆಣ್ಣೆಯನ್ನು ಹಚ್ಚಿ ಬಿಸಿ ಮಾಡಿ ಎದೆಗೆ ಹಚ್ಚುವುದರಿಂದ ತೊಂದರೆ ದೂರವಾಗುತ್ತದೆ.

2. ಗಂಟಲು ಕೆರೆತವಿದ್ದಲ್ಲಿ ಎಲೆಯ ರಸಕ್ಕೆ ಸುಣ್ಣ ಮಿಶ್ರ ಮಾಡಿ ಗಂಟಲಿಗೆ ಹಚ್ಚಬಹುದು.

3. ಎಲೆಯ ರಸ (ಅರ್ಧ ಟೀ ಚಮಚ), ಶುಂಠಿ ರಸ (ಅರ್ಧ ಟೀ ಚಮಚ) ಮಿಶ್ರ ಮಾಡಿ, 1 ಟೀ ಚಮಚ ಜೇನಿನೊಂದಿಗೆ ಕುಡಿಯಲು ನೀಡುವುದರಿಂದ ಎದೆ ರೋಗಗಳು, ಶ್ವಾಸಕೋಶದ ತೊಂದರೆ ನಿವಾರಿಸುತ್ತದೆ.

4. 2 ಎಲೆಯ ರಸಕ್ಕೆ 4 ಕಾಳು ಮೆಣಸನ್ನು 1 ಕಪ್ ನೀರಿನಲ್ಲಿ ಕುದಿಸಿ ಮಕ್ಕಳಿಗೆ ಅಜೀರ್ಣವಾದಾಗ ನೀಡಬಹುದು.

5. ಎಲೆಯ ತೊಟ್ಟನ್ನು ಅರಳೆಣ್ಣೆಯಲ್ಲಿ ಅದ್ದಿ, ಮಲಪ್ರವೃತ್ತಿಯಾಗುವ ಪ್ರದೇಶಕ್ಕೆ ಹಚ್ಚುವುದರಿಂದ ಮಕ್ಕಳಲ್ಲಿಯ ಮಲಬದ್ಧತೆ ನಿವಾರಿಸುತ್ತದೆ.

ಇದನ್ನು ಓದಿ: ಸಕಲಕಲಾವಲ್ಲಭ ನಿಂಬೆ ಹಣ್ಣಿನ ಔಷದೀಯ ಗುಣಗಳು ಮತ್ತು ಅದರ ಮಹತ್ವ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.