1. ಹಸಿ ಮೂಲಂಗಿ ಹುಳುಗಳಿಗೆ ಕರಿ ಮೆಣಸಿನ ಪುಡಿ, ನಿಂಬೆ ರಸ, ಉಪ್ಪು ಸೇರಿಸಿ ಸೇವಿಸುವುದರಿಂದ ಗುಣ ಕಂಡು ಬರುವುದು.
2. ಕರಿಮೆಣಸು ಮತ್ತು ಜೇನು ತುಪ್ಪದೊಂದಿಗೆ ಪ್ರತಿ ದಿನವೂ ಮಾವಿನಕಾಯಿ ತಿನ್ನುತ್ತಿದ್ದರೆ (ಒಣಗಿಸಿ ಜೋಪಾನ ಮಾಡಿದ ಮಾವಿನ ಹೋಳುಗಳನ್ನು ಆ ಕಾಲದಲ್ಲಿ ಬಳಸಬಹುದು) ಪಿತ್ತಕೋಶವು ಜಾಗ್ರತವಾಗಿ ಹಿತ ರಸ ಅಧಿಕವಾಗಿ ಸೇವಿಸುವುದು. ಈ ಕಾರಣಗಳಿಂದ ಅರಿಶಿನ ಕಾಮಾಲೆ ತಲೆದೋರುವ ಸಂಭವವಿರುವುದಿಲ್ಲ.
3. ಒಂದು ಟೀ ಚಮಚ ನಿಂಬೆ ರಸವನ್ನು ಚೆನ್ನಾಗಿ ಮಾಗಿದ ಬಾಳೆ ಹಣ್ಣು ಮತ್ತು ಒಂದು ಊಟದ ಚಮಚ ಜೇನುತುಪ್ಪದೊಂದಿಗೆ ಪ್ರತಿದಿನ ಸೇವಿಸುತ್ತಿದ್ದರೆ ಗುಣ ಕಂಡು ಬರುವುದು.
4. ಸುಮಾರು ಏಳೆಂಟು ದಿನಗಳ ಕಾಲ ದೊಡ್ಡ ಪತ್ರೆ ಸೊಪ್ಪು ಸೇವಿಸುತ್ತಿದ್ದರೆ ಅರಿಶಿನ ಕಾಮಾಲೆ ರೋಗ ಗುಣವಾಗುವುದು. ಪ್ರತಿ ನಾಲೈದು ಎಲೆಗಳನ್ನು ಉಪ್ಪು ಸಹಿತ ಅಗೆದು ತಿನ್ನುವುದು ಅಗತ್ಯ.
ಇದನ್ನು ಓದಿ: ಕೀಲು ನೋವು, ಮೈ, ಕೈ, ನೋವುಗಳಿಗೆ ಇಲ್ಲಿದೆ ಮನೆ ಔಷಧಿ