Moolangi Health Benefits : ಮೂಲಂಗಿ (Radish) ಎಂದರೆ ಸಾಕು, ಅನೇಕರು ಮೂಗು ಮುರಿಯುತ್ತಾರೆ. ಆದರೆ ಇದರಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದರೆ ನೀವು ಅಚ್ಚರಿ ಪಡುತ್ತೀರಿ. ಹೌದು, ವಿಟಮಿನ್ ಸಿ, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳ ಆಗರವಾಗಿರುವ ಮೂಲಂಗಿ, ಚಳಿಗಾಲದಲ್ಲಿ ದೇಹಕ್ಕೆ ಅಮೃತವಿದ್ದಂತೆ.
ಇದನ್ನೂ ಓದಿ: Nipah virus | ಮಾರಣಾಂತಿಕ ನಿಫಾ ವೈರಸ್ ಪತ್ತೆ.. ಕರ್ನಾಟಕದಲ್ಲಿ ಹೈ ಅಲರ್ಟ್..! ನಿಫಾ ವೈರಸ್‌ನ ಲಕ್ಷಣಗಳೇನು?
Moolangi Health Benefits : ಮೂಲಂಗಿ ಪ್ರಮುಖ 4 ಆರೋಗ್ಯ ಲಾಭಗಳು ಇಲ್ಲಿವೆ ನೋಡಿ:

1. ಮಧುಮೇಹಕ್ಕೆ ರಾಮಬಾಣ (Diabetes Control)
ಶುಗರ್ ಕಾಯಿಲೆ ಇರುವವರಿಗೆ ಮೂಲಂಗಿ ಅತ್ಯುತ್ತಮ ಆಹಾರವಾಗಿದ್ದು, 2024ರ ಇತ್ತೀಚಿನ ಅಧ್ಯಯನಗಳ ಪ್ರಕಾರ, ಮೂಲಂಗಿಯ ಬೇರುಗಳಲ್ಲಿರುವ ಅಂಶಗಳು ರಕ್ತದಲ್ಲಿನ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ ಮೂಲಂಗಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಿ, ರಕ್ತದಲ್ಲಿ ಸಕ್ಕರೆ ಮಟ್ಟ ಏರದಂತೆ ತಡೆಯುತ್ತದೆ.
2. ಹೊಳೆಯುವ ಚರ್ಮಕ್ಕಾಗಿ (Glowing Skin)
ಮೂಲಂಗಿಯಲ್ಲಿ ನೀರಿನಂಶ ಹೆಚ್ಚಾಗಿರುವುದರಿಂದ ಇದು ಚರ್ಮವನ್ನು ಹೈಡ್ರೇಟ್ ಆಗಿ ಇಡಲಿದ್ದು, ಇದರಲ್ಲಿರುವ ವಿಟಮಿನ್-ಸಿ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ಮುಖದ ಮೇಲಿನ ಸುಕ್ಕುಗಳನ್ನು ತಡೆದು, ನೈಸರ್ಗಿಕವಾಗಿ ಮುಖಕ್ಕೆ ಕಾಂತಿ ನೀಡುತ್ತದೆ.
ಇದನ್ನೂ ಓದಿ: sesame seeds | 7 ದಿನ ಎಳ್ಳು ಸೇವಿಸಿ ಹೃದಯಾಘಾತಕ್ಕೆ ವಿದಾಯ ಹೇಳಿ!
3. ಜೀರ್ಣಕ್ರಿಯೆಗೆ ಸಹಕಾರಿ (Digestion)
ನೀವು ಗ್ಯಾಸ್ಟ್ರಿಕ್ ಅಥವಾ ಮಲಬದ್ಧತೆಯಿಂದ ಬಳಲುತ್ತಿದ್ದರೆ, ಊಟದ ಜೊತೆ ಹಸಿ ಮೂಲಂಗಿ ತಿನ್ನಿ. ಮೂಲಂಗಿ ಕರುಳಿನ ಆರೋಗ್ಯವನ್ನು ಹೆಚ್ಚಿಸಿ, ಅಜೀರ್ಣ ಮತ್ತು ಹೊಟ್ಟೆ ಉಬ್ಬರವನ್ನು ಕ್ಷಣಮಾತ್ರದಲ್ಲಿ ನಿವಾರಿಸುತ್ತದೆ.
4. ರೋಗನಿರೋಧಕ ಶಕ್ತಿ (Immunity Booster)
ಇದರಲ್ಲಿರುವ ‘ರಾಫನಿನ್’ (Raphanin) ಎಂಬ ಅಂಶವು ಬ್ಯಾಕ್ಟಿರಿಯಾ ವಿರೋಧಿ ಗುಣವನ್ನು ಹೊಂದಿದ್ದು, ಇದು ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವ ಮೂಲಕ, ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನಿಮ್ಮ ದೇಹಕ್ಕೆ ನೀಡುತ್ತದೆ.
ಇದನ್ನೂ ಓದಿ: ವಿತ್ ಸ್ಕಿನ್-ವಿಥೇಟ್ ಸ್ಕಿನ್ ಚಿಕನ್; ಇವೆರಡರಲ್ಲಿ ಯಾವುದು ಬೆಸ್ಟ್?




