Pneumonia : ಇಂದು ವಿಶ್ವ ನ್ಯೂಮೋನಿಯಾ ದಿನ; ನ್ಯೂಮೋನಿಯಾ ಲಕ್ಷಣಗಳೇನು? ಪತ್ತೆ ಹಚ್ಚುವುದು ಹೇಗೆ?

Pneumonia : ನ್ಯೂಮೋನಿಯಾ ಬಗ್ಗೆ ನೀವು ಕೇಳಿರಬಹುದು. ಇದು ಶ್ವಾಸಕೋಶಕ್ಕೆ ಹಾನಿಮಾಡುವ ಸೋಂಕಾಗಿದ್ದು ಬಾಯಿ/ಮೂಗಿನ ಮೂಲಕ ಶ್ವಾಸಕೋಶಗಳ ಒಳಕ್ಕೆ ಸೇರುವ ಸೂಕ್ಷ್ಮಜೀವಿಗಳಿಂದ ಸೋಂಕು ಉಂಟಾಗುತ್ತದೆ. 2009ರಲ್ಲಿ ನ್ಯೂಮೋನಿಯಾ ಕುರಿತು ಜಾಗತಿಕವಾಗಿ ಜಾಗೃತಿ ಹೆಚ್ಚಿಸಲು ಸ್ಟಾಪ್‌…

Pneumonia

Pneumonia : ನ್ಯೂಮೋನಿಯಾ ಬಗ್ಗೆ ನೀವು ಕೇಳಿರಬಹುದು. ಇದು ಶ್ವಾಸಕೋಶಕ್ಕೆ ಹಾನಿಮಾಡುವ ಸೋಂಕಾಗಿದ್ದು ಬಾಯಿ/ಮೂಗಿನ ಮೂಲಕ ಶ್ವಾಸಕೋಶಗಳ ಒಳಕ್ಕೆ ಸೇರುವ ಸೂಕ್ಷ್ಮಜೀವಿಗಳಿಂದ ಸೋಂಕು ಉಂಟಾಗುತ್ತದೆ.

2009ರಲ್ಲಿ ನ್ಯೂಮೋನಿಯಾ ಕುರಿತು ಜಾಗತಿಕವಾಗಿ ಜಾಗೃತಿ ಹೆಚ್ಚಿಸಲು ಸ್ಟಾಪ್‌ ನ್ಯುಮೋನಿಯಾ ಆರ್ಗ್‌ ಸಂಸ್ಥೆಯು ವಿಶ್ವ ನ್ಯುಮೋನಿಯಾ ದಿನವನ್ನು ಆರಂಭಿಸಿದ್ದು, ವರ್ಷಕ್ಕೆ ಸುಮಾರು 8 ಲಕ್ಷಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾಗುವ ಈ ಕಾಯಿಲೆ ವಿರುದ್ಧ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಸಂಸ್ಥೆ ಎಚ್ಚರಿಸಿದೆ.

ನ್ಯೂಮೋನಿಯಾ ಲಕ್ಷಣಗಳೇನು? (Pneumonia Symptoms)

ನ್ಯೂಮೋನಿಯಾ ಲಕ್ಷಣಗಳು ಆರಂಭದಲ್ಲಿ ಅಷ್ಟೇನೂ ತೀವ್ರವಾಗಿರುವುದಿಲ್ಲ. ನಂತರದ ದಿನಗಳಲ್ಲಿ ಜ್ವರ, ಚಳಿ ನಡುಕ, ಕೆಮ್ಮು, ಉಸಿರಾಡಲು ತೊಂದರೆ, ಉಸಿರಾಟದ ವೇಗ ಹೆಚ್ಚುವುದು, ಹೊಟ್ಟೆ ತೊಳೆಸುವಿಕೆ, ವಾಂತಿ ಮತ್ತು ಭೇದಿ ನ್ಯೂಮೋನಿಯಾ ಸಾಮಾನ್ಯ ಲಕ್ಷಣಗಳಾಗಿವೆ. ರೋಗದ ಮುಂದುವರಿದ ಹಂತಗಳಲ್ಲಿ ರೋಗಿಯು ಗೊಂದಲಕ್ಕೀಡಾಗಬಹುದು, ಉದ್ವಿಗ್ನಗೊಳ್ಳುವ ಸಾಧ್ಯತೆಯಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಐವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

Vijayaprabha Mobile App free

ಇದನ್ನೂ ಓದಿ: Mango Fruit | ಮಾವು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಗೊತ್ತಾ?

ನ್ಯುಮೋನಿಯಾ ಉಂಟಾಗಲು ಕಾರಣವೇನು? ಹೇಗೆ ಹರಡುತ್ತದೆ? (How is pneumonia spread)

ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ನ್ಯುಮೋನಿಯಾವು ಉಸಿರಾಡುವ ಗಾಳಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳಂತಹ ವ್ಯಾಪಕ ಶ್ರೇಣಿಯ ಸೂಕ್ಷ್ಮಾಣುಜೀವಿಗಳಿಂದ ಉಂಟಾಗುತ್ತದೆ. ಮಕ್ಕಳಲ್ಲಿ ನ್ಯುಮೋನಿಯಾ ಉಂಟು ಮಾಡುವ ಸಾಮಾನ್ಯ ಬ್ಯಾಕ್ಟೀರಿಯಾ ಎಂದರೆ ಸ್ಟ್ರೆಪ್ಟೊಕಾಕಸ್‌. ಇನ್ನು ಇದು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬೀಳುವ ಹನಿಗಳಿಂದ ಗಾಳಿಯ ಮೂಲಕ ಪ್ರಸಾರವಾಗುತ್ತದೆ. ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಹೆಚ್ಚು ಅಪಾಯಕಾರಿ ಖಾಯಿಲೆಯಾಗಿದೆ.

ನ್ಯುಮೋನಿಯಾ ರೋಗವನ್ನು ಪತ್ತೆ ಹಚ್ಚುವುದು ಹೇಗೆ? (How to diagnose pneumonia)

ನ್ಯುಮೋನಿಯಾ ರೋಗವನ್ನು ಪತ್ತೆ ಹಚ್ಚಲು ಮೊದಲಿಗೆ ವೈದ್ಯರು ರೋಗ ಲಕ್ಷಣಗಳ ಬಗ್ಗೆ ರೋಗಿಯಿಂದ ಮಾಹಿತಿ ಸಂಗ್ರಹಿಸುತ್ತಾರೆ. ನಂತರ ಎದೆಯನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸುತ್ತಾರೆ. ಕಫದ ಪರೀಕ್ಷೆ, ಎದೆಯ ಎಕ್ಸ್‌ರೇ, ರಕ್ತ ಪರೀಕ್ಷೆ ಮತ್ತು ಕಣ್ಣು ಪರೀಕ್ಷೆಗಳಿಂದ ವೈದ್ಯರು ಸಾಮಾನ್ಯವಾಗಿ ನ್ಯುಮೋನಿಯಾ ರೋಗವನ್ನು ಪತ್ತೆ ಹಚ್ಚುತ್ತಾರೆ. ವೈದ್ಯರು ಹೇಳಿದ ಜೀವನಿರೋಧಕ ಅಥವಾ ಆ್ಯಂಟಿ ಬಯೋಟಿಕ್‌ ಔಷಧಿಗಳನ್ನು ಸೇವಿಸಬೇಕು. ತೀವ್ರವಾಗಿ ಉಲ್ಬಣಗೊಂಡಿದ್ದರೆ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಬೇಕು.

ಇದನ್ನೂ ಓದಿ: Thyroid | ಥೈರಾಯ್ಡ್ ಎಂದರೇನು? ಥೈರಾಯ್ಡ್ ಸಮಸ್ಯೆ ಬರುವುದಕ್ಕೆ ಮೂಲ ಕಾರಣ ಏನು ಗೊತ್ತಾ? ಈ ಸಮಸ್ಯೆಗೆ ಪರಿಹಾರ

ನಿಮ್ಮ ಈ ಅಭ್ಯಾಸಗಳು ನ್ಯುಮೋನಿಯಾ ಹೆಚ್ಚಾಗಲು ಕಾರಣವಾಗಬಹುದು

ನ್ಯುಮೋನಿಯಾ ಎಂಬುದು ಮುಖ್ಯವಾಗಿ ಶ್ವಾಸಕೋಶಗಳ ಸೋಂಕಿನಿಂದ ಉಂಟಾಗುವ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ನಮ್ಮ ದೈನಂದಿನ ಕೆಲವು ಅಭ್ಯಾಸಗಳು ಇದರ ಅಪಾಯವನ್ನು ಹೆಚ್ಚಿಸಬಹುದು. ಯಾವೆಲ್ಲ ಕಾರಣದಿಂದ ನ್ಯುಮೋನಿಯಾ ಬಹಳ ಬೇಗ ಬರುತ್ತದೆ ಮತ್ತು ಇದಕ್ಕೆ ಪರಿಹಾರವೇನು ಎಂಬುದನ್ನು ಮಣಿಪಾಲ್ ಆಸ್ಪತ್ರೆಯ ವೈದ್ಯ ಮತ್ತು ಅಗಸ್ತ್ಯ ಚೆಸ್ಟ್ ಸೆಂಟರ್ ನ ವೈದ್ಯರಾಗಿರುವ ಶಿವರಾಜ್ ಕೆ.ವಿ ನೀಡಿರುವ ಸಲಹೆಗಳನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: Vistara Health

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.