ಚಿಕ್ಕ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡುತ್ತಿದ್ದೀರಾ? ಫೋನ್ ಕೊಡುವುದರಿಂದ ಹಲವು ಸಮಸ್ಯೆಗಳಿಗೆ ಕರಣವಾಗಹುದು.
ಹೌದು, ಇತ್ತೀಚಿನ ದಿನಗಳಲ್ಲಿ ಬಗೆಬಗೆಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಬರುತ್ತಿದ್ದು, ಹಲವು ಫೀಚರ್ಸ್ ಗಳನ್ನು ಹೊಂದಿರುವ ಫೋನ್ ಗಳನ್ನು ಚಿಕ್ಕ ಮಕ್ಕಳಿಗೆ ಫೋನ್ ಕೊಡುವುದರಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಕ್ಕಳ ಕೈಯಲ್ಲಿ ಇಂತಹ ಫೋನ್ ಇದ್ದರೆ ಅವರ ಚಲನ ಶಕ್ತಿ ಕಡಿಮೆಯಾಗಲಿದ್ದು, ಅಸಹನೆಯ ಸ್ಥಿತಿಗೆ ತಲುಪಬಹುದು ಎಂದಿದ್ದಾರೆ.
ಇನ್ನು, ಫೋನ್‌ಗಳು ಮಕ್ಕಳ ಆಲೋಚನಾ ಶಕ್ತಿಯನ್ನು ಕಡಿಮೆ ಮಾಡುವುದಲ್ಲದೆ, ಬೊಜ್ಜಿನ ಸಮಸ್ಯೆಗೂ ಕಾರಣವಾಗಲಿದೆ.
ಅಷ್ಟೇ ಅಲ್ಲದೆ, ಮಕ್ಕಳು ಫೋನ್‌ಗಳಿಗೆ ಅಂಟಿಕೊಳ್ಳುವುದು ಮತ್ತು ಇತರರೊಂದಿಗೆ ಮಾತನಾಡದ ಕಾರಣ ಸಂವಹನ ಕೌಶಲ್ಯದ ಕೊರತೆ ಉಂಟಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.