ತಜ್ಞರ ಪ್ರಕಾರ, ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ರೋಗಿಗಳು ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಇದಲ್ಲದೇ ರಾತ್ರಿಯ ಊಟವನ್ನು ಬೇಗ ತಿನ್ನುವುದು ಮತ್ತು ಸಮಯಕ್ಕೆ ಸರಿಯಾಗಿ ಮಲಗುವುದು ಕೂಡ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದು ನಿಮ್ಮ ಗ್ಲೂಕೋಸ್ ಮಟ್ಟಕ್ಕೆ ಅದ್ಭುತಗಳನ್ನು ಮಾಡುತ್ತದೆ.
ಇದನ್ನು ಓದಿ: ಗಮನಿಸಿ: ಮೂತ್ರಪಿಂಡಕ್ಕೆ ಹಾನಿಯಾದರೆ, ಕಿಡ್ನಿ ಸ್ಟೋನ್ ಆದರೆ ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳು ಇವೇ
ಹೌದು, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಈರುಳ್ಳಿ ರಸದಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು. ಇದನ್ನು ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು 50% ವರೆಗೆ ಕಡಿಮೆ ಮಾಡಬಹುದು ಎನ್ನಲಾಗಿದೆ.
ಇದನ್ನು ಓದಿ: ಪೋಷಕಾಂಶಗಳ ಕೊರತೆಯಾಗಿದೆ ಎಂದು ದೇಹವನ್ನು ನೈಸರ್ಗಿಕವಾಗಿ ಪರೀಕ್ಷಿಸುವುದು ಹೇಗೆ?
ಹೌದು, ಈರುಳ್ಳಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ಕ್ರೋಮಿಯಂ, ಅಲೈಲ್ ಡೈಸಲ್ಫೈಡ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಲ್ಲಿ ಸಾಮಾನ್ಯ ಸಮಸ್ಯೆಯಾದ ಮಲಬದ್ಧತೆ ಸಮಸ್ಯೆಯನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನು ಓದಿ: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ಯುವನಿಧಿ ಹೆಸರಿನಲ್ಲಿ ಪ್ರತಿ ತಿಂಗಳು 3000ರೂ ನಿರುದ್ಯೋಗ ಭತ್ಯೆ..!
ಹೃದಯಾಘಾತ ನಿಯಂತ್ರಣಕ್ಕೆ ಬೆಳ್ಳುಳ್ಳಿ ಸಹಕಾರಿ!
ಇನ್ನು, ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಕೂಡ ಸಾಮಾನ್ಯವಾಗಿದ್ದು, ಯುವಕರಲ್ಲೂ ಸಹ ಹೃದಯಾಘಾತ ಸಂಭವಿಸುತ್ತಿದೆ. ಇದಕ್ಕೆ ನಾವು ಅನುಸರಿಸುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ದತಿಯೇ ಕಾರಣ.
ಆದರೆ, ಬಾದಾಮಿ, ಸೇಬು ಹಣ್ಣು, ಗೋಡಂಬಿ, ಅಗಸೆಬೀಜ, ದ್ರಾಕ್ಷಿ, ವಾಲ್ ನಟ್ಸ್, ಸಿರಿದಾನ್ಯಗಳು ಸೇರಿದಂತೆ ಹೃದಯದ ಆರೋಗ್ಯವನ್ನು ಕಾಪಾಡುವ ಉಪಯುಕ್ತವಾದ ಆಹಾರ ಕ್ರಮವನ್ನು ಅನುಸರಿಸಿದರೆ ಸಂಭವಿಸುವ ಹೃದಯಾಘಾತದಿಂದ ಸ್ವಲ್ಪ ಪಾರಾಗಬಹುದು. ಅದರಂತೆ ಅಡುಗೆ ಮನೆಯಲ್ಲೇ ಸಿಗುವ ಬೆಳ್ಳುಳ್ಳಿ ಕೂಡ ಸಹಕಾರಿಯಾಗಿದೆ.
ಇದನ್ನು ಓದಿ: ಸ್ವಸಹಾಯ ಗುಂಪುಗಳಿಗೆ 10,000 ರೂ ಮತ್ತು 5 ಲಕ್ಷ ರೂ ಸಾಲ ಸೌಲಭ್ಯ; ಏನಿದು ಯುವಶಕ್ತಿ ಯೋಜನೆ, ಈ ಗುಂಪಿಗೆ ಸಿಗುವ ಸೌಲಭ್ಯಗಳೇನು?
ಹೌದು, ಬೆಳ್ಳುಳ್ಳಿ ಸೇವಿಸುವುದರಿಂದ ದೇಹದೊಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಹೃದಯಕ್ಕೆ ರಕ್ತದ ಹರಿವನ್ನು ಸುಧಾರಿಸಿ, ಹೃದಯಾಘಾತವನ್ನು ತಡೆಯುತ್ತದೆ.
ಬೆಳ್ಳುಳ್ಳಿ ಸೇವನೆಯಿಂದ ಶೀಘ್ರ ತೂಕ ಕಳೆದುಕೊಳ್ಳುವ ಅವಕಾಶವೂ ಇದ್ದು, ಅಧಿಕ ಬಿಪಿ ನಿಯಂತ್ರಣ ಮಾಡುತ್ತದೆ. ಅಷ್ಟೇ ಅಲ್ಲ, ಬೆಳ್ಳುಳ್ಳಿ ಸೇವನೆಯಿಂದ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಸಹ ಮಾಯವಾಗುತ್ತವೆ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಇನ್ಮುಂದೆ ಸಿಗಲಿದೆ ಎಟಿಎಂನಿಂದ ರೇಷನ್