ಕಣ್ಣಿನ ಆರೈಕೆ ಏಕೆ ಮುಖ್ಯವಾಗಿದೆ?
ಡಿಜಿಟಲ್ ಸಾಧನಗಳ ಮಿತಿಮೀರಿದ ಬಳಕೆಯಿಂದಾಗಿ ನಮ್ಮ ಕಣ್ಣುಗಳು ಒತ್ತಡಕ್ಕೊಳಪಡುತ್ತವೆ. ಅಲ್ಲದೆ, ಕಳಪೆ ಜೀವನಶೈಲಿ ಮತ್ತು ಅಭ್ಯಾಸಗಳಿಂದ ಎದುರಾಗುವ ಮಧುಮೇಹದಂತಹ ಕಾಯಿಲೆಗಳು ನಮ್ಮ ಕಣ್ಣುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.
ಬೆಳಿಗ್ಗೆ ಕಣ್ಣು ತೊಳೆಯುವುದು:-
ನಮ್ಮಲ್ಲಿ ಬಹುತೇಕರು ಬೆಳಿಗ್ಗೆ ಎದ್ದ ಕೂಡಲೇ ಮುಖದ ಮೇಲೆ ನೀರನ್ನು ಚಿಮುಕಿಸುತ್ತಾರೆ. ಈ ಅಭ್ಯಾಸವು ನಮ್ಮ ಕಣ್ಣುಗಳಿಗೆ ಪ್ರಯೋಜನಕಾರಿಯಾಗಲು, ನಾವು ಸರಳವಾದ ವಿಧಾನವನ್ನು ಅನುಸರಿಸಬೇಕು.
ಮೊದಲು ಬಾಯಿಯಲ್ಲಿ ನೀರು ತುಂಬಿಕೊಳ್ಳಿ. ಹೀಗೆ ಮಾಡುವುದರಿಂದ ಕಣ್ಣಿನ ಸ್ನಾಯು ಹಿಗ್ಗುತ್ತದೆ. ಈಗ ನಿಮ್ಮ ಕಣ್ಣುಗಳ ಮೇಲೆ ತಣ್ಣೀರು ಚಿಮುಕಿಸಿ. ಹೀಗೆ 1-2 ನಿಮಿಷಗಳವರೆಗೆ ಮಾಡಿ.
ರೋಸ್ ವಾಟರ್ ಐವಾಶ್:-
ಐವಾಶ್ ಕಪ್ ನಲ್ಲಿ ತಣ್ಣೀರನ್ನು ತೆಗೆದುಕೊಂಡು ಅದರಲ್ಲಿ ಶುದ್ಧ ರೋಸ್ ವಾಟರ್ ನ 15 ಹನಿಗಳನ್ನು ಹಾಕಿ. ಅದನ್ನು ಒಂದು ಕಣ್ಣಿನ ಮೇಲಿಟ್ಟು, ಕಣ್ಣು ತೆರೆದು ಸುತ್ತಲೂ ತಿರುಗಿಸಿ. ಹೀಗೆ ಕನಿಷ್ಠ 1 ನಿಮಿಷದವರೆಗೆ ಮಾಡಿ, ಆ ನೀರನ್ನು ಎಸೆದು ಬೇರೆ ನೀರಿನಿಂದ ಮತ್ತೊಂದು ಕಣ್ಣಿಗೆ ಅದನ್ನು ಪುನರಾವರ್ತಿಸಿ.
ಮನೆಯಲಿ ತಯಾರಿಸಿದ ಆರೋಗ್ಯಕರ ಪಾನೀಯ:-
ನೆನೆಸಿದ ಮತ್ತು ಸಿಪ್ಪೆ ಸುಲಿದ 7 ಬಾದಾಮಿ (ಗುರ್ಬಂಡಿ ಬಾದಾಮಿಗಳನ್ನು ಹೆಚ್ಚು ಶಿಫಾರಸು ಮಾಡಲಾಗಿದೆ) ತೆಗೆದುಕೊಳ್ಳಿ. ಈಗ 4 ಕರಿಮೆಣಸಿನ ಕಾಳುಗಳನ್ನು ತೆಗೆದುಕೊಂಡು, ಸಿಹಿಗಾಗಿ ಕಲ್ಲು ಸಕ್ಕರೆಯನ್ನು ಕೂಡ ಸೇರಿಸಬಹುದು. ಈಗ ಎಲ್ಲಾ ಪದಾರ್ಥಗಳನ್ನು ಪುಡಿಮಾಡಿ.
ಈಗ ಒಂದು ಪಾತ್ರೆಯಲ್ಲಿ 1 ಗ್ಲಾಸ್ ಹಸುವಿನ ಹಾಲನ್ನು ತೆಗೆದುಕೊಂಡು ಅದರಲ್ಲಿ ಆ ಮಿಶ್ರಣವನ್ನು ಹಾಕಿ, 10 ನಿಮಿಷಗಳವರೆಗೆ ಅದನ್ನು ಕುದಿಸಿ, ಕುದಿಸಿದ ಹಾಲನ್ನು ಸೋಸದೆ ಬಟ್ಟಲಿನಲ್ಲಿ ಸುರಿದು ಸೇವಿಸಿ, ಮುಂದಿನ 1 ಗಂಟೆಯವರೆಗೆ ಏನನ್ನೂ ತಿನ್ನಬೇಡಿ.
ಕೆಲಸದ ಸಮಯದ ದಿನಚರಿ:-
ನೀವು ಇಡೀ ದಿನ ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಿದ್ದರೆ, ಕೆಲವು ಸುಲಭ ಅಭ್ಯಾಸಗಳನ್ನು ಮಾಡಿ, ಗಂಟೆಗೊಮ್ಮೆ 1 ನಿಮಿಷ ವಿರಾಮ ತೆಗೆದುಕೊಳ್ಳಿ, ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಮುಚ್ಚಿ, ನೀರು ಕುಡಿಯುವುದು ಕೂಡ ಉತ್ತಮ. ಅಂಗೈಗಳನ್ನು ಉಜ್ಜಿಕೊಂಡು ಕಣ್ಣುಗಳ ಮೇಲೆ ಇರಿಸಿ. ಅಲ್ಲದೆ, ವಾಶ್‌ರೂಮ್‌ಗೆ ಹೋದಾಗಲೆಲ್ಲಾ ಕಣ್ಣುಗಳನ್ನು ಕೂಡ ತೊಳೆಯಿರಿ.
ಕಣ್ಣಿನ ಆರೈಕೆಗೆ ಮನೆ ಪದಾರ್ಥಗಳನ್ನು ಬಳಸಿ:-
ಮುಖವನ್ನು ತೊಳೆದುಕೊಂಡು, ವಿಟಮಿನ್ ಸಿ ಮತ್ತು ಕೆಫೀಕ್ ಆಮ್ಲದಿಂದ ಸಮೃದ್ಧವಾಗಿರುವ ಸೌತೆಕಾಯಿಯನ್ನು ಕಣ್ಣುಗಳ ಮೇಲಿಡಿ. ಇದರಿಂದ ಕಣ್ಣುಗಳು ನೈಸರ್ಗಿಕವಾಗಿ ತಂಪಾಗುತ್ತವೆ.
ಆಲೂಗೆಡ್ಡೆ ಬಳಸುವುದರಿಂದ ಕಣ್ಣಿನ ಕೆಳಗಿರುವ ಊತ ಕಡಿಮೆಯಾಗುತ್ತದೆ. ಆಲೂಗೆಡ್ಡೆ ಕ್ಯಾಟೆಕೋಲೇಸ್ ಎಂಬ ಕಿಣ್ವದಿಂದ ಸಮೃದ್ಧವಾಗಿದ್ದು, ಇದು ನೀರಿನ ಧಾರಣವನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಪಿಷ್ಟವನ್ನು ಕಡಿಮೆ ಮಾಡುತ್ತದೆ. ನೆನೆಸಿದ ರೆಫ್ರಿಜರೇಟೆಡ್ ಟೀ ಬ್ಯಾಗ್‌ಗಳನ್ನು ಬಳಸುವುದರಿಂದ ಉರಿಯೂತವನ್ನು ಕಡಿಮೆ ಮಾಡಬಹುದು.
ಕಣ್ಣಿನ ದೃಷ್ಟಿಗೆ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳು:-
- ಬರಿಗಾಲಿನಲ್ಲಿ ನಡೆಯಬೇಡಿ, ಇದು ಕಣ್ಣಿನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
- ಮಂದ ಬೆಳಕಿನಲ್ಲಿ ಮಲಗುವುದನ್ನು ತಪ್ಪಿಸಿ.
- ಬಿಸಿಲಿನಲ್ಲಿ ಸನ್ ಗ್ಲಾಸ್ ಧರಿಸಿ.
- ಲ್ಯಾಪ್‌ಟಾಪ್ ಮತ್ತು ಮೊಬೈಲ್ ಗಾಗಿ ಸ್ಕಿನ್ ಗಾರ್ಡ್ ಬಳಸಿ.
ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರಗಳು:-
- ನೆಲ್ಲಿಕಾಯಿ
- ಹೆಸರು ಬೇಳೆ
- ತುಪ್ಪ
- ಕ್ಯಾರೆಟ್