ಬ್ರೈನ್ ಸ್ಟ್ರೋಕ್ ನಿಂದ ರಕ್ಷಣೆಗೆ ಉತ್ತಮ ನೈಸರ್ಗಿಕ ವಿಧಾನಗಳು

ಬ್ರೈನ್ ಸ್ಟ್ರೋಕ್ ಎಂದರೇನು? ಬೈನ್ ಸ್ಟ್ರೋಕ್ ಅಥವಾ ಮೆದುಳಿನ ಪಾರ್ಶ್ವವಾಯು ಎಂಬುದನ್ನು ಸುಲಭವಾಗಿ ಹೇಳುವುದಾದರೆ, ಮೆದುಳಿನ ರಕ್ತ ಪೂರೈಕೆಯಲ್ಲಿನ ಅಡಚಣೆಯು ಆಮ್ಲಜನಕದ ಪೂರೈಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಹಾನಿಗೆ ಕಾರಣವಾಗುತ್ತದೆ. ಇದರಿಂದ…

brain-food-vijayaprabha-news

ಬ್ರೈನ್ ಸ್ಟ್ರೋಕ್ ಎಂದರೇನು?

ಬೈನ್ ಸ್ಟ್ರೋಕ್ ಅಥವಾ ಮೆದುಳಿನ ಪಾರ್ಶ್ವವಾಯು ಎಂಬುದನ್ನು ಸುಲಭವಾಗಿ ಹೇಳುವುದಾದರೆ, ಮೆದುಳಿನ ರಕ್ತ ಪೂರೈಕೆಯಲ್ಲಿನ ಅಡಚಣೆಯು ಆಮ್ಲಜನಕದ ಪೂರೈಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಹಾನಿಗೆ ಕಾರಣವಾಗುತ್ತದೆ. ಇದರಿಂದ ಮೆದುಳಿನ ಕಾರ್ಯಚಟುವಟಿಕೆಗೆ ತೊಂದರೆಯಾಗುತ್ತದೆ. ಬ್ರೇನ್ ಸ್ಟೋಕ್ ಸಾವು ಮತ್ತು ಅಂಗವೈಕಲ್ಯದ ಪ್ರಮುಖ ಕಾರಣಗಳಲ್ಲೊಂದಾಗಿದೆ.

ಪಾರ್ಶ್ವವಾಯುವಿಗೆ 25 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ 4 ವಯಸ್ಕರಲ್ಲಿ ಒಬ್ಬರು ತುತ್ತಾಗುತ್ತಾರೆ. ಪ್ರತಿ ವರ್ಷ ವಿಶ್ವದಲ್ಲಿ ಲಕ್ಷಾಂತರ ಜೀವಗಳನ್ನು ಇದು ಬಲಿ ತೆಗೆದುಕೊಳ್ಳುತ್ತದೆ.

Vijayaprabha Mobile App free

ಬ್ರೈನ್ ಸ್ಟ್ರೋಕ್ ಯಾವಾಗ ಸಂಭವಿಸುತ್ತದೆ?

ಪಾರ್ಶ್ವವಾಯು ಅನಿರೀಕ್ಷಿತವಾಗಿ ಸಂಭವಿಸಬಹುದು. ಸ್ಕೋಕ್ ಮೆದುಳಿನಲ್ಲಿ ರಕ್ತದ ಹರಿವಿನ ಅಡಚಣೆಯಾಗಿದೆ ಎಂಬುದನ್ನು ನೆನಪಿಡಿ. ಇದು ಸಾಮಾನ್ಯವಾಗಿ ಅನಾರೋಗ್ಯಕರ ಜೀವನಶೈಲಿಯ ಕಾರಣದಿಂದ ಉಂಟಾಗುತ್ತದೆ. ಆದಾಗ್ಯೂ, ಆರೋಗ್ಯಕರ ಜೀವನಶೈಲಿ ಮತ್ತು ತಳಿಶಾಸ್ತ್ರವು ಅಂತಹ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಮತ್ತು ಬ್ರೈನ್ ಸ್ಟ್ರೋಕ್ :-

ಕೊರೋನಾದಿಂದಾಗಿ ಜೀವನಶೈಲಿಯಲ್ಲಾದ ಬದಲಾವಣೆಗಳಿಂದ ಪಾರ್ಶ್ವವಾಯು ಅಪಾಯ ಹೆಚ್ಚಾಗಿದೆ. ವಯಸ್ಸಾದವರಲ್ಲಿ ದೀರ್ಘಕಾಲದ ಅಂಗವೈಕಲ್ಯಕ್ಕೆ ಪಾರ್ಶ್ವವಾಯು ಪ್ರಮುಖ ಕಾರಣವಾಗಿದೆ. ಆದಾಗ್ಯೂ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಅದನ್ನು ತಪ್ಪಿಸಬಹುದು.

ವಯಸ್ಸು ಅಥವಾ ಕುಟುಂಬದ ಇತಿಹಾಸವನ್ನು ಲೆಕ್ಕಿಸದೆಯೇ, ಯಾರೇ ಆಗಲಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು.

ಅನಾರೋಗ್ಯಕರ ಆಹಾರ ಮತ್ತು ಬ್ರೈನ್:-

ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸುವುದು ಬಹಳ ಮುಖ್ಯವಾಗಿದೆ. ಏಕೆಂದರೆ, ಇದು ಪಾರ್ಶ್ವವಾಯು ಅಪಾಯವನ್ನು ಶೇ.80ರಷ್ಟು ಕಡಿಮೆ ಮಾಡುತ್ತದೆ. ಫೈಬರ್, ಕ್ಯಾಲೋರಿಗಳು, ಪ್ರೋಟೀನ್ ಗಳು, ಖನಿಜಗಳು, ವಿಟಮಿನ್ ಗಳು ಮತ್ತು ಪರ್ಯಾಯ ಪೋಷಕಾಂಶಗಳ ಸರಿಯಾದ ಪ್ರಮಾಣದಲ್ಲಿ ಸಮತೋಲಿತ ಆಹಾರವು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

ಸೋಡಿಯಂ, ಉಪ್ಪು, ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿದರೆ ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪಾರ್ಶ್ವವಾಯು ಅಪಾಯವಿದ್ದಲ್ಲಿ, ಮಾಂಸ ಸೇವನೆಯನ್ನು ಕಡಿಮೆ ಮಾಡಬೇಕು ಮತ್ತು ಮೊಟ್ಟೆಯ ಹಳದಿ ಭಾಗವನ್ನು ತಿನ್ನಬಾರದು.

ಧೂಮಪಾನ ಮತ್ತು ಬ್ರೈನ್ ಸ್ಟ್ರೋಕ್:-

ತಂಬಾಕು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ 7000 ವಿಷಕಾರಿ ರಾಸಾಯನಿಕಗಳನ್ನು ಹೊಂದಿಡೇ. ಅಲ್ಲದೆ, ಇದು ದೇಹದಲ್ಲಿನ ಜೀವಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ಸಿಗರೇಟಿನ ಹೊಗೆಯು ಕೊಲೆಸ್ಟ್ರಾಲ್ ಮಟ್ಟವನ್ನು ಬದಲಾಯಿಸುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ಧೂಮಪಾನ ತ್ಯಜಿಸುವುದರ ಲಾಭಗಳು:-

  • ಆಮ್ಲಜನಕದ ಮಟ್ಟ ಸುಧಾರಿಸುತ್ತದೆ.
  • ರುಚಿ ಮತ್ತು ವಾಸನೆಯ ಸಾಮರ್ಥ್ಯ ಸುಧಾರಿಸುತ್ತದೆ.
  • ರಕ್ತಪರಿಚಲನೆ ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ.

ನಿಷ್ಕ್ರಿಯತೆ & ಬ್ರೈನ್ ಸ್ಟ್ರೋಕ್:-

ಇತ್ತೀಚೆಗೆ ಯುವ ಪೀಳಿಗೆಯಲ್ಲಿ ದೈಹಿಕವಾಗಿ ನಿಷ್ಕ್ರಿಯರಾಗಿರುವುದು ಮತ್ತು ಬಿಡುವಿನ ವೇಳೆಯಲ್ಲಿ ಕುಳಿತುಕೊಳ್ಳುವ ಚಟುವಟಿಕೆಗಳನ್ನು ಮಾಡುವುದು ಸಾಮಾನ್ಯವಾಗಿದೆ.

ನಿಷ್ಕ್ರಿಯ ಜೀವನಶೈಲಿಯು ರಕ್ತದ ಹರಿವನ್ನು ಕಡಿಮೆ ಮಾಡುವ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತವು ನಮ್ಮ ಮೆದುಳಿಗೆ ಆಮ್ಲಜನಕ ಮತ್ತು ಗ್ಲಕೋಸ್ ಅನ್ನು ನೀಡುತ್ತದೆ. ರಕ್ತಪರಿಚಲನೆಯು ದುರ್ಬಲಗೊಂಡಾಗ, ಮೆದುಳು ಹಾನಿಗೊಳಗಾಗಬಹುದು ಮತ್ತು ಮೆದುಳಿನ ಸ್ಟೋಕ್ ಕೂಡ ಸಂಭವಿಸಬಹುದು.

ಸೋಮಾರಿ ಜೀವನಶೈಲಿಯ ಪರಿಣಾಮ:-

  • ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ.
  • ಸ್ನಾಯು ಬಲ ಕಡಿಮೆಯಾಗುತ್ತದೆ.
  • ಮೂಳೆ ಸಾಂದ್ರತೆಯ ಮೇಲೆ ಪರಿಣಾಮ ಬೀರುತ್ತದೆ.
  • ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
  • ಒಟ್ಟಾರೆ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಆಸ್ಕೋಹಾಲ್ ಮತ್ತು ಬ್ರೈನ್ ಸ್ಟ್ರೋಕ್:-

ಅತಿಯಾದ ಆಸ್ಕೊಹಾಲ್ ಸೇವನೆಯಿಂದಾಗಿ ಸ್ಟೋಕ್ ಅಪಾಯ ಹೆಚ್ಚಾಗಿರುವುದು ಕಂಡುಬಂದಿದೆ. ಅತಿಯಾದ ಆಲ್ನೋಹಾಲ್ ಸೇವನೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಾಗುತ್ತದೆ ಮತ್ತು ಮೆದುಳಿಗೆ ಹೆಚ್ಚಿನ ಒತ್ತಡವನ್ನು ನೀಡುತ್ತದೆ.

ಆಸ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದರಿಂದ ನೇರವಾಗಿ ಪಾರ್ಶ್ವವಾಯುವಿಗೆ ಕಾರಣವಾಗುವ ಅಧಿಕ ರಕ್ತದೊತ್ತಡ ಸಮಸ್ಯೆ ಮತ್ತು ಕೊಲೆಸ್ಟ್ರಾಲ್ ಏರಿಳಿತಗಳನ್ನು ಕಡಿಮೆ ಮಾಡುತ್ತದೆ.

ನಿರ್ಲಕ್ಷ್ಯ ಮತ್ತು ಬ್ರೈನ್ ಸ್ಟ್ರೋಕ್:-

ಯಾವುದೇ ಮಾರಣಾಂತಿಕ ಕಾಯಿಲೆಗೆ ರಕ್ತದೊತ್ತಡ, ಕೊಲೆಸ್ಟ್ರಾಲ್ ಅಥವಾ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಅಸಮತೋಲನ ಕಾರಣವಾಗಿರುತ್ತದೆ. ಪಾರ್ಶ್ವವಾಯುವಿನ ಸಾಧ್ಯತೆಯನ್ನು ಕಡಿಮೆ ಮಾಡಲು ನಿಯಮಿತವಾಗಿ ಬಿಪಿ, ಶುಗರ್ ಮಟ್ಟವನ್ನು ಪರೀಕ್ಷಿಸಬೇಕು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.