ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಗೆಲುವು; ಪಾದಾರ್ಪಣೆ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪಡೆದ ಟೀಮ್ ಇಂಡಿಯಾ ಬೌಲರ್ 

ಕೊಲ್ಕತ್ತಾ : ಭಾರತ- ವೆಸ್ಟ್ ಇಂಡಿಸ್‌ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಗೆಲುವು ದಾಖಲಿಸಿದ್ದು, ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಿಂಡಿಸ್‌ ನೀಡಿದ…

ಕೊಲ್ಕತ್ತಾ : ಭಾರತ- ವೆಸ್ಟ್ ಇಂಡಿಸ್‌ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಗೆಲುವು ದಾಖಲಿಸಿದ್ದು, ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ವಿಂಡಿಸ್‌ ನೀಡಿದ 158 ರನ್‌ಗಳ ಟಾರ್ಗೆಟ್‌ ಬೆನ್ನಟ್ಟಿದ ಭಾರತ ತಂಡ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 162 ರನ್‌ಗಳಿಸುವ ಮೂಲಕ ಜಯದ ನಗೆಬೀರಿದೆ. ಇನ್ನು, ಟೀಂ ಇಂಡಿಯಾ ಪರ ನಾಯಕ ರೋಹಿತ್‌ ಶರ್ಮಾ 40, ಇಶಾನ್‌ ಕಿಶನ್‌ 35 & ಸೂರ್ಯಕುಮಾರ್‌ ಯಾದವ್‌ 34 ರನ್‌ಗಳಿಸಿ ಮಿಂಚಿದರು. ವಿಂಡಿಸ್ ಪರ ರೇಷ್ಟೋನ್ ಚೇಜ್ 2, ಅಲೆನ್ ಮತ್ತು ಕಾಟ್ರೆಲ್ ತಲಾ 1 ವಿಕೆಟ್ ಪಡೆದರು.

ಇನ್ನು, ಇದಕ್ಕೂ ಮುಂಚೆ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವಿಂಡಿಸ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 157 ರನ್‌ಗಳಿಸಿತು. ವೆಸ್ಟ್ ಇಂಡಿಸ್‌ ಪರ ನಿಕೊಲಸ್‌ ಪೂರನ್‌ 67 ರನ್‌ ಮತ್ತು ಕೈಲಿ ಮೇಯರ್‌ 31 ರನ್‌ ಗಳಿಸಿದರೆ ಭಾರತದ ಪರ ಹರ್ಷಲ್‌ ಪಟೇಲ್‌ & ರವಿ ಬಿಶ್ನೋಯ್‌ ತಲಾ 2 ವಿಕೆಟ್‌ ಪಡೆದು ಮಿಂಚಿದರು.

Vijayaprabha Mobile App free

ಭಾರತ ಪರ ಪಾದಾರ್ಪಣೆ ಪಂದ್ಯದಲ್ಲೇ ಉತ್ತಮ ಬೌಲಿಂಗ್ ಮಾಡಿ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದ ರವಿ ರವಿ ಬಿಶ್ನೋಯ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.