ಓಮಿ ಕಾಳಿನ ಉಪಯೋಗಗಳು:-
1) ಓಮಿನ ಕಾಳನ್ನು ಬಾಯಿಗೆ ಹಾಕಿಕೊಂಡು ಜಗಿದು ತಿನ್ನುವುದರಿಂದ ಬಾಯಿಯ ದುರ್ನಾತ ದೂರವಾಗಿ ದಂತಕ್ಷಯ ನಿವಾರಣೆ ಆಗುವುದರ ಜೊತೆಗೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
2) ಓಮಿನ ಕಾಳಿನ ಕಷಾಯ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಅಡುಗೆ ಸೋಡಾ ಬೆರೆಸಿ ಮಕ್ಕಳಿಗೆ ಕುಡಿಯುವುದರಿಂದ ಅಜೀರ್ಣ ಹೊಟ್ಟೆ ಉಬ್ಬರ ಉಪಶಮನವಾಗುತ್ತದೆ.
3) ಓಮಿನ ಕಷಾಯ ತಯಾರಿಸಿ ಅದಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುತ್ತಿದ್ದರೆ ಶೀತದ ಗಂಟಲು ನೋವು ಗುಣವಾಗುವುದು.,
4) ಓಮಿನ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿದ ಮೂಗೇಟು ನಿಂದ ನೋಯುತ್ತಿರುವ ಭಾಗಕ್ಕೆ ಹಚ್ಚಿ ಉಜ್ಜಿದರೆ ನೋವು ನಿವಾರಣೆಯಾಗುವುದು.
5) ಅರಿಶಿನ ಪುಡಿ ಯೊಂದಿಗೆ ಓಮಿನ ಕಾಳನ್ನು ನುಣ್ಣಗೆ ಅರೆದು ತುರಿ ಕಜ್ಜಿಯ ಮೇಲೆ ಹಚ್ಚುವುದರಿಂದ ಬೇಗನೆ ಗುಣವಾಗುವುದು.
ಇದನ್ನು ಓದಿ: ಬೆಳ್ಳುಳ್ಳಿ ಗಾತ್ರದಲ್ಲಿ ಚಿಕ್ಕದಾದರು ಕೆಲಸ ಮಾತ್ರ ಬೆಟ್ಟದಷ್ಟು; ಔಷಧೀಯ ಗುಣಗಳ ಆಗರ ಈ ಬೆಳ್ಳುಳ್ಳಿ…?