ಈ ಕೊರೋನಾ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ನಿದ್ರಿಸದಿರುವುದು, ಅತಿಯಾದ ಕೆಲಸ ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಗದ ಕಾರಣ ಮಾನಸಿಕ ಒತ್ತಡದಿಂದ ಬಳಲುವ ಸಾಧ್ಯತೆಯಿದೆ.
ಇದು ನಮ್ಮ ಏಕಾಗ್ರತೆಯ ಕೊರತೆ, ಆಲೋಚನೆಗಳಲ್ಲಿನ ಅಸ್ಪಷ್ಟತೆ, ಖಿನ್ನತೆ, ಮರೆವು.. ಸೇರಿ ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಮನೋವೈದ್ಯರು ‘ಬ್ರೈನ್ ಫಾಗ್’ ಎಂದು ಪರಿಗಣಿಸಿದ್ದು, ಇದನ್ನು ನಿವಾರಿಸಲು ರಾತ್ರಿ ಬೇಗ ಮಲಗಿ, ಹೆಚ್ಚು ನಿದ್ರೆ ಮಾಡುವಂತೆ ತಜ್ಞರು ಸೂಚಿಸುತ್ತಾರೆ.
ಉತ್ತಮ ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್!:
>> ಉತ್ತಮ ಆರೋಗ್ಯಕ್ಕೆ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ನೀರು ಕುಡಿಯಬೇಕು.
>> ಹೆಚ್ಚು ಮಲಗುವ ಅಭ್ಯಾಸ ಮಾಡಬಾರದು.
>> ಪ್ರತಿನಿತ್ಯ ಯೋಗ, ಧ್ಯಾನ, ವ್ಯಾಯಾಮ ಮಾಡಬೇಕು.
>> ಧೂಮಪಾನದ ಚಟ ತ್ಯಜಿಸುವುದಲ್ಲದೆ, ತಲೆಗೆ ಕೆಲಸ ಕೊಡುವ ಆಟಗಳನ್ನು ಆಡಿರಿ.
>> ಮೊಟ್ಟೆ, ದ್ವಿದಳ ಧಾನ್ಯ, ಸೂಪ್, ಹಣ್ಣುಗಳು ಸೇರಿದಂತೆ ಪೌಷ್ಠಿಕ ಆಹಾರ ಸೇವಿಸಿ.
>> ಆಗಾಗ ಕೈಗಳನ್ನು ತೊಳೆಯುವುದಲ್ಲದೆ, ಸಾಮಾಜಿಕ ಅಂತರ ಮರೆಯದಿರಿ.
>> ಉಪ್ಪು ನೀರಿನ ದ್ರಾವಣದಿಂದ ಗಂಟಲು ಸ್ವಚ್ಛಗೊಳಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.