ದೇಹದ ಸುದೃಢತೆಗೆ ಪೌಷ್ಟಿಕಾಂಶ ಆಹಾರಗಳ ಸೇವನೆ:
1. ಕಡಲೆ100 ಗ್ರಾಂ, ತೊಗರಿ 100 ಗ್ರಾಂ, ಹೆಸರು 100 ಗ್ರಾಂ. ಉದ್ದು 100 ಗ್ರಾಂ. ಗೋಧಿ 100 ಗ್ರಾಂ, ಹುರುಳಿ 100 ಗ್ರಾಂ. ಬಟಾಣಿ 100 ಗ್ರಾಂ, ಸೋಯಾಬಿನ್ 100 ಗ್ರಾಂ, ಜೋಳ 100 ಗ್ರಾಂ ಶೇಂಗಾ ಬೀಜ (ಮೊಳಕೆ ಬರಿಸಿದರೆ ಒಳ್ಳೆಯದು) ಎಲ್ಲವನ್ನು ಕೆಂಪಗೆ ಹುರಿದು, ನುಣ್ಣಗೆ ಪುಡಿ ಮಾಡಿ. ಕಾಳುಗಳ ಅರ್ಧ ಭಾಗದಷ್ಟು ಪಾಲಿಶ್ ಅಕ್ಕಿ ತೌಡನ್ನು ಕೆಂಪಗೆ ತುಪ್ಪದಲ್ಲಿ ಹುರಿದು 1 ಒಣ ಕೊಬ್ಬರಿ ತುರಿದು, ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ, ಎಲ್ಲವನ್ನು ಕಲಸಿ, ಚೆನ್ನಾಗಿ ಮಿಶ್ರ ಮಾಡಿಟ್ಟು, ಸಂಗ್ರಹಿಸಿಟ್ಟುಕೊಂಡು, ತಿನ್ನುವಾಗ ಹಾಲು ಹಾಕಿ ಉಂಡೆ ಮಾಡಿ ಸೇವಿಸಬಹುದು ಅಥವಾ ಹಾಗೆಯೇ ತಿನ್ನಬಹುದು.
2. ಬಾದಾಮಿ 1/4 ಕೆ.ಜಿ, ಕಲ್ಲು ಸಕ್ಕರೆ 1/2 ಕೆ.ಜಿ. ಉತ್ತುತ್ತೆ 1/2 ಕೆ.ಜಿ. ಗಸಗಸೆ 100 ಗ್ರಾಂ, ಗೇರು ಬೀಜ 1/2 ಕೆ.ಜಿ. ದ್ರಾಕ್ಷಿ 1/2 ಕೆ.ಜಿ, ಒಣ ಕೊಬ್ಬರಿ-1 ಎಲ್ಲವನ್ನು ಚೆನ್ನಾಗಿ ಆರಿಸಬೇಕು. ಗಸಗಸೆ ಕೆಂಪಗೆ ಹರಿದು ಪುಡಿಮಾಡಿ, ಕೊಬ್ಬರಿ ತುರಿದು ತುರಿದು ಉತ್ತುತ್ತೆ ಪುಡಿ ಮಾಡಿ, ಬಾದಾಮಿ, ಕಲ್ಲುಸಕ್ಕರೆ, ಗೇರು ಬೀಜಗಳನ್ನು ಅರ್ಧ ಜಜ್ಜಿ. ಎಲ್ಲಾ ಸೇರಿಸಿ ಕೊಬ್ಬರಿ ತುರಿ ಹಾಕಿ ಡಬ್ಬಿಗೆ ಹಾಕಿಟ್ಟುಕೊಂಡು ತಿನ್ನುವಾಗ, 1 ಚಮಚ ತುಪ್ಪ ಹಾಕಿಕೊಂಡು ತಿಂದರೆ ಒಳ್ಳೆಯದು ಜೊತೆಗೆ ಬಿಸಿಹಾಲು ಕುಡಿಯಬೇಕು. ಮೇಲೆ ಹೇಳಿದ ಪೌಷ್ಟಿಕ ಆಹಾರವನ್ನು ಕ್ರಮದಂತೆ ತೆಗೆದುಕೊಂಡರೆ ದೇಹವು ಪುಷ್ಟಿಕರವಾಗಿ ಅಶಕ್ತತೆಯು ಮಾಯವಾಗುವುದು.
ಇದನ್ನು ಓದಿ: ತುರಿಕೆಗೆ ಇಲ್ಲಿದೆ ಉತ್ತಮ ಮನೆ ಔಷದಿ