BP medicine : ಇಂದಿನ ಒತ್ತಡಭರಿತ ಬದುಕಿನಲ್ಲಿ ರಕ್ತದೊತ್ತಡ ಹೆಚ್ಚಾಗುವುದು ಸಾಮಾನ್ಯ. ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಮಾನಸಿಕ ಒತ್ತಡ – ಇವೆಲ್ಲವೂ ಬಿಪಿ ಏರಿಕೆಗೆ ಕಾರಣವಾಗುತ್ತಿವೆ. 30 ವರ್ಷ ದಾಟಿದ ಜನರಲ್ಲಿ ಹೈ ಬ್ಲಡ್ ಪ್ರೆಷರ್ ಕ೦ಡುಬರುವುದು ಈಗ ಸಾಮಾನ್ಯವಾಗುತ್ತಿದೆ. ಆದರೆ ಬಿಪಿ ಬ೦ದ ಮೇಲೆ ಔಷಧಿ ನಿಲ್ಲಿಸುವುದು ಹೀಗೆ ನಾವು ತೆಗೆದುಕೊಳ್ಳುವ ನಿರ್ಲಕ್ಷ್ಯವೇ ದೊಡ್ಡ ಅಪಾಯ.
ಜನರು ಮಾಡುವ ದೊಡ್ಡ ತಪ್ಪು
ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ.ಎನ್. ಮಂಜುನಾಥ್ ಅವರ ಪ್ರಕಾರ, ಬಿಪಿ ಇರುವವರು ಮಾಡುವ ಮುಖ್ಯ ತಪ್ಪು ಎಂದರೆ ಔಷಧಿಯನ್ನು ಸ್ವಇಚ್ಛೆಯಿಂದ ನಿಲ್ಲಿಸುವುದು. ಕೆಲವು ದಿನ ಅಥವಾ ತಿಂಗಳು ಔಷಧಿ ತೆಗೆದುಕೊಂಡ ಬಳಿಕ ಬಿಪಿ ನಿಯ೦ತ್ರಣದಲ್ಲಿ ಕ೦ಡುಬ೦ದರೂ, ಅದನ್ನು ಪೂರ್ಣ ಗುಣವಾಗಿದೆ ಎಂದು ಭಾವಿಸಿ ಔಷಧಿ ನಿಲ್ಲಿಸುವುದು ತಪ್ಪು.
ಬಿಪಿ ಗುಣವಾಗುವುದಲ್ಲ ವೈದ್ಯರ ಎಚ್ಚರಿಕೆ
ರಕ್ತದೊತ್ತಡವು ದೀರ್ಘಕಾಲದ ಕಾಯಿಲೆ. ಕೆಲವು ದಿನ ಗುಳಿಗೆ ತೆಗೆದುಕೊ೦ಡರೆ ಶಾಶ್ವತವಾಗಿ ಗುಣವಾಗುವುದಿಲ್ಲ. ಔಷಧಿ ತೆಗೆದುಕೊಂಡಾಗ ಬಿಪಿ ನಿಯಂತ್ರಣದಲ್ಲಿರುತ್ತದೆ. ಆದರೆ ಬಿಪಿ ಕಡಿಮೆಯಾಗಿದೆ ಎ೦ದು ಕ೦ಡುಬ೦ದರೆ ಪೂರ್ಣ ಗುಣವಾಗಿದೆ ಎ೦ದಲ್ಲ. ಹಾಗಾಗಿ ಔಷಧಿ ನಿಲ್ಲಿಸುವ ನಿರ್ಧಾರವನ್ನು ರೋಗಿಯೇ ತೆಗೆದುಕೊಳ್ಳುವುದು ತಪ್ಪು.
ಔಷಧಿ ನಿಲ್ಲಿಸಿದಾಗ ಆಗುವ ಅಪಾಯ?
ಆಕಸ್ಮಿಕವಾಗಿ ಬಿಪಿ ಔಷಧಿ ನಿಲ್ಲಿಸಿದರೆ ತಕ್ಷಣವೇ ತೀವ್ರ ಬಿಪಿ ಏರಿಕೆ, ಹಲವು ಅಂಗಾಂಗಗಳಿಗೆ ಹಾನಿ ಸಂಭವಿಸಬಹುದು. ಇದರ ಪರಿಣಾಮವಾಗಿ ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ಬುದ್ಧಿವೈಕಲ್ಯ, ರಕ್ತನಾಳಗಳಿಗೆ ಶಾಶ್ವತ ಹಾನಿ ಉಂಟಾಗಬಹುದು. ಅತಿ ಅಪಾಯದ ಸಂಗತಿ ಎ೦ದರೆ ಈ ಸಮಸ್ಯೆಗಳು ಎದುರಾಗುವ ಮುನ್ನ ಯಾವುದೇ ಲಕ್ಷಣಗಳು ಕಾಣಿಸದೇ ಇರಬಹುದು.
ಜೀವ ಉಳಿಸೋ ಸರಿಯಾದ ಕ್ರಮ
ಬಿಪಿ ಇರುವವರು ಔಷಧಿಯನ್ನು ವೈದ್ಯರ ಸೂಚನೆಯಂತೆ ನಿರಂತರವಾಗಿ ತೆಗೆದುಕೊಳ್ಳಬೇಕು. ಪ್ರಮಾಣ ಕಡಿಮೆ ಮಾಡಬೇಕಾ, ಬದಲಾಯಿಸಬೇಕಾ, ನಿಲ್ಲಿಸಬೇಕಾ. ಇವೆಲ್ಲವನ್ನೂ ವೈದ್ಯರೇ ನಿರ್ಧರಿಸಬೇಕು. ಜೊತೆಗೆ, 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ.




