ಬೆಳಗಿನ ಆಹಾರ ಎಷ್ಟು ಉಪಯುಕ್ತ:
* ಪ್ರತಿದಿನ ಬೆಳಿಗ್ಗೆ ನೀವು ಪೌಷ್ಟಿಕ ಉಪಹಾರವನ್ನು ಸೇವಿಸುವುದರಿಂದ ದೇಹದ ಚಯಾಪಚಯ ಕ್ರಿಯೆಯನ್ನು ಕ್ರಮವಾಗಿರಿಸುತ್ತದೆ.
* ಬೆಳಗಿನ ಆಹಾರ ಸೇವಿಸುವುದರಿಂದ ದೇಹದಲ್ಲಿ ಹೆಚ್ಚಿನ ಶಕ್ತಿ ಉತ್ಪತ್ತಿಯಾಗುವುದಲ್ಲದೆ, ತೂಕ ಹೆಚ್ಚಿಸುವಲ್ಲಿ ತೊಂದರೆ ಇರುವ ಜನರು ಬೆಳಿಗ್ಗೆ ಉಪಾಹಾರ ಸೇವಿಸಬೇಕು.
* ಇನ್ನು ಮೆಮೊರಿ ಶಕ್ತಿಯೂ ( ಬುದ್ದಿ ಶಕ್ತಿಯನ್ನು) ಹೆಚ್ಚಾಗಲು ಪ್ರತಿದಿನ ನಿಯಮಿತವಾಗಿ ಬೆಳಗ್ಗೆ ಪೌಷ್ಟಿಕ ಆಹಾರ ಸೇವಿಸಬೇಕು.
ಬುದ್ಧಿ ಶಕ್ತಿ ಹೆಚ್ಚಿಸುವ ಆಹಾರಗಳು:
* ಬೀನ್ಸ್ ಅಲ್ಲಿ ಫೈಬರ್ ಅಧಿಕವಾಗಿದ್ದು, ವಿಟಮಿನ್ ಬಿ ಸಮೃದ್ಧವಾಗಿದ್ದು, ಬೀನ್ಸ್ ಸೇವಿಸುವುದರಿಂದ ನೀವು ಇಡೀ ದಿನ ಕಾರ್ಯನಿರತವಾಗಿರಲು ಉತ್ತಮವಾಗಿದೆ.
* ಮೊಟ್ಟೆಯಲ್ಲಿ ಹೆಚ್ಚಿನ ಪ್ರೋಟೀನ್ ಇರುವುದಲ್ಲದೆ ಕೋಲೀನ್ ಎಂಬ ಅಂಶವನ್ನು ಹೊಂದಿದ್ದು, ಇದರ ಸೇವನೆ ಮಾಡುವುದರಿಂದ ಮೆಮೊರಿ ವೃದ್ಧಿಗೆ ಸಹಾಯ ಮಾಡುತ್ತದೆ.
* ಇನ್ನು ಹಾಲು, ಮೊಸರು, ಬೆಣ್ಣೆಯಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ ಅಂಶ ಅಧಿಕವಾಗಿದ್ದು, ಇವುಗಳನ್ನು ಸೇವಿಸುವುದರಿಂದ ಮೆದುಳಿನ ಅಂಗಾಂಶ, ನರಪ್ರೇಕ್ಷಕಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.