ನಿದ್ರಾಹೀನತೆ(ಅನಿದ್ರೆ) ನಿವಾರಣೆಗೆ ಮನೆಮದ್ದು:
1. ಬೇವಿನ ಎಲೆಗಳನ್ನು ಹಾಲಿನಲ್ಲಿ ಅರೆದು ಅಂಗಾಲಿಗೆ ಹಚ್ಚುವುದು.
2. ಹಿಪ್ಪಲಿ ಕೊತ್ತಂಬರಿ ಬೀಜ, ಲವಂಗ, ಕಲ್ಲುಸಕ್ಕರೆ. ಶುಂಠಿಗಳ ಸಮಭಾಗ ಚೂರ್ಣವನ್ನು 10 ಗುಂಜಿಯಂತೆ ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಸೇವಿಸಬೇಕು.
3. ರಾತ್ರಿ ಮಲಗುವಾಗ ಕದ್ದವಾದ 4 ಚಮಚ ಎಳ್ಳೆಣ್ಣೆಯನ್ನು 1/2 ಲೋಟ ಹಾಲಿನಲ್ಲಿ ಸೇವಿಸಬೇಕು.
4. 1 ಸೇರು ಕೊತ್ತಂಬರಿ ಸೊಪ್ಪಿನ ರಸಕ್ಕೆ, 2 ಸೇರು ಸಕ್ಕರೆ ಸೇರಿಸಿ ಪಾಕ ಮಾಡಿ ಶರಬತ್ತು ಮಾಡಿಟ್ಟುಕೊಂಡು, 2 ಹೊತ್ತು ಸೇವಿಸಿದರೆ ಅನಿದೆ ಪರಿಹಾರವಾಗುವುದು. ಇದಕ್ಕೆ 1/4 ಕುಂಕುಮ ಕೇಸರಿ, ಸ್ವಲ್ಪ ಪಚ್ಚ ಕರ್ಪುರವನ್ನು ನುಣ್ಣಗೆ ಅರೆದು ಸೇವಿಸಿದರೆ ಒಳ್ಳೆಯದು.
5. ಬ್ರಾಹ್ಮೀಬೇರು, ಬಸಳೆಬೇರು, ಪುದಿನಾ ಬೇರುಗಳನ್ನು ಅರೆದು ತಲೆಗೆ ಪಟ್ಟು ಹಾಕಿ 1-2 ಘಂಟೆ ಬಿಟ್ಟು ಸ್ನಾನ ಮಾಡುವುದು. ಹೀಗೆ 1 ವಾರ ಮಾಡಬೇಕು.
6. ಹಿಂದೆಲಗದ ಗುಲಾಬಿ ಪಾಕ :
ಹಿಂದೆಲಗದ ರಸ 12 ತೋಲವನ್ನು, 24 ತೊಲ ಸಕ್ಕರೆಯಲ್ಲಿ ಬೆರಸಿ, ಒಲೆಯಮೇಲಿಟ್ಟು ಮಂದಾಗ್ನಿಯಿಂದ ಕಾಯಿಸಿ, ತಂತು ಪಾಕ (ಎಳೆ) ಕ್ಕೆ ಬಂದಕೂಡಲೇ 6 ತೊಲ ಪನ್ನೀರು ಗುಲಾಬಿ ದಳಗಳನ್ನು ಹಾಕಿ, ಚೆನ್ನಾಗಿ ಮಿಶ್ರ ಮಾಡಿಟ್ಟುಕೊಳ್ಳುವುದು. ಇದನ್ನು 2 ಹೊತ್ತು ಒಂದೊಂದು ತೊಲ ಸೇವಿಸಬೇಕು. ಇದಕ್ಕೆ ಟ್ರೈನ್ ಟಾನಿಕ್ ಎಂದು ಹೆಸರು. ಮಕ್ಕಳಿಗೆ ಕೂಡಾ ಕೊಡಬಹುದು.
7. ನಾರು ತೆಗೆದ ವೀಳ್ಯದೆಲೆಯ ರಸವನ್ನು ಪಾಕಮಾಡಿ ಪನ್ನೀರುಗುಲಾಬಿ ದಳಗಳನ್ನು ಹಾಕಿ ಸೇವಿಸುವುದು.
8. ಹಾಲಿಗೆ ಒಂದು ಚಿಟಿಕೆ ಚಕ್ಕೆ ಪುಡಿ ಹಾಕಿ ಕುಡಿಯಬೇಕು.
9. ಉನ್ಮಾದ ರೋಗದವರಿಗೆ ಬಿಳೀ ಈರುಳ್ಳಿ ರಸವನ್ನು ತೆಗೆದು ಆಗಿಂದಾಗ್ಗೆ ಕಣ್ಣಿಗೆ ಹಚ್ಚಬೇಕು.
ಇದನ್ನು ಓದಿ: ಮಾನಸಿಕ ಒತ್ತಡ, ಡಿಪ್ರೆಶನ್, ಖಿನ್ನತೆಯಿಂದ ಹೊರಬರಲು ಉತ್ತಮ ಮನೆ ಔಷಧಿ