ಉಸಿರಾಟದ ಸಮಸ್ಯೆಗೆ ಮನೆಮದ್ದುಗಳು:
ಆಳವಾದ ಉಸಿರಾಟ:- ಉಸಿರಾಟದಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವವರು ಹೊಟ್ಟೆಯ ಮೂಲಕ ಆಳವಾಗಿ ಉಸಿರಾಡುವುದರಿಂದ ಈ ತೊಂದರೆಯಿಂದ ಮುಕ್ತಿ ಪಡೆಯಬಹುದು.
ಮನೆಯಲ್ಲಿ ಆಳವಾದ ಉಸಿರಾಟವನ್ನು ಪ್ರಯತ್ನಿಸಲು ಹೀಗೆ ಮಾಡಿ:
- ನೆಲದ ಮೇಲೆ ಮಲಗಿ ಕೈಗಳನ್ನು ಹೊಟ್ಟೆಯ ಮೇಲೆ ಇರಿಸಿ.
- ಮೂಗಿನ ಮೂಲಕ ಆಳವಾಗಿ ಉಸಿರಾಡಿ.
- ಕೆಲ ಸೆಕೆಂಡುಗಳವರೆಗೆ ಉಸಿರನ್ನು ಹಿಡಿದಿಟ್ಟುಕೊಳ್ಳಿ.
- ಬಾಯಿಯ ಮೂಲಕ ನಿಧಾನವಾಗಿ ಉಸಿರಾಡಿ.
ಮೂಗು-ತುಟಿಗಳ ಮೂಲಕ ಉಸಿರಾಟ:-
ಇದು ಉಸಿರಾಟದ ವೇಗವನ್ನು ನಿಧಾನಗೊಳಿಸುವ ಮೂಲಕ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆತಂಕದ ಕಾರಣದಿಂದಾಗಿ ಉಸಿರಾಟದ ತೊಂದರೆ ಉಂಟಾದಾಗ ಹೀಗೆ ಮಾಡುವುದು ಒಳ್ಳೆಯದು.
ಮೂಗು-ತುಟಿಗಳ ಮೂಲಕ ಉಸಿರಾಡಲು ಹೀಗೆ ಮಾಡಿ:
- ಭುಜಗಳನ್ನು ಸಡಿಲಿಸಿ ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳಿ.
- ತುಟಿಗಳನ್ನು ಒಟ್ಟಿಗೆ ಒತ್ತಿ, ಅವುಗಳ ನಡುವೆ ಸಣ್ಣ ಅಂತರವನ್ನು ಇರಿಸಿ.
- ಈಗ ಒಂದೆರಡು ಸೆಕೆಂಡುಗಳವರೆಗೆ ಮೂಗಿನ ಮೂಲಕ ಉಸಿರಾಡಿ
- ಕೊನೆಯಲ್ಲಿ ತುಟಿಗಳ ಮೂಲಕ ನಿಧಾನವಾಗಿ ಉಸಿರನ್ನು ಬಿಡಿ ಹಾಗೂ ಇದನ್ನು ಪುನರಾವರ್ತನೆ ಮಾಡಿ.
ಆರಾಮದಾಯಕ ಜಾಗವನ್ನು ಹುಡುಕಿ:-
ನಿಲ್ಲಲು ಅಥವಾ ಮಲಗಲು ಆರಾಮದಾಯಕವಾದ ಸ್ಥಳವನ್ನು ಕಂಡುಕೊಳ್ಳುವುದು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಆತಂಕ ಅಥವಾ ಅತಿಯಾದ ಪರಿಶ್ರಮದಿಂದ ಉಸಿರುಗಟ್ಟುವಿಕೆ ಉಂಟಾದಾಗ ಇದು ವಿಶೇಷವಾಗಿ ಸಹಾಯಕವಾಗಿದೆ.
- ಹೀಗೆ ಉಸಿರಾಡಲು ಪ್ರಯತ್ನಿಸಿ:
- ಕುರ್ಚಿಯ ಮುಂಭಾಗದಲ್ಲಿ ಕುಳಿತುಕೊಳ್ಳಿ.
- ನಿಮ್ಮ ಹಿಂಭಾಗಕ್ಕೆ ಆಸರೆಯನ್ನು ಪಡೆದುಕೊಳ್ಳಿ.
- ಪಾದಗಳ ಭಾರವನ್ನು ಕಡಿಮೆ ಮಾಡಲು ಮೇಜಿನ ಮೇಲೆ ಕೈಗಳನ್ನಿಟ್ಟು ನಿಂತುಕೊಳ್ಳುವುದು.
ಬ್ಲಾಕ್ ಕಾಫಿ :- ಬ್ಲ್ಯಾಕ್ ಕಾಫಿಯಲ್ಲಿರುವ ಕೆಫೀನ್ ಶ್ವಾಸನಾಳದ ಸ್ನಾಯುಗಳಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತದೆ. ಆಸ್ತಮಾದಿಂದ ಬಳಲುತ್ತಿರುವವರಿಗೆ ಇದು ಸಾಕಷ್ಟು ಪರಿಣಾಮಕಾರಿಯಾಗಿದೆ ಎಂಬುದು ಸಾಬೀತಾಗಿದೆ. ಬ್ಲಾಕ್ ಕಾಫಿ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಉಸಿರಾಟದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ, ನೀವು ಬ್ಲಾಕ್ ಕಾಫಿ ಸೇವಿಸುವುದು ಸರಿಯಲ್ಲ ಎಂದಾದಲ್ಲಿ ಅದರಿಂದ ದೂರವಿರುವುದು ಉತ್ತಮ.
ಶುಂಠಿ :- “ತಾಜಾ ಶುಂಠಿ ಅಥವಾ ಶುಂಠಿ ಚಹಾ ಸೇವಿಸುದು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಶುಂಠಿಯು ಉಸಿರಾಟದ ಸೋಂಕಿನಿಂದ ಉಂಟಾಗುವ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ದೊರೆಯುವ ಈ ಮೂಲಿಕೆಯು ಶ್ವಾಸಕೋಶಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.”
ಉಗಿ ಉಸಿರಾಡುವುದು:- ಶೀತದಿಂದ ಬಳಲುತ್ತಿರುವಾಗ ನಿಮಗೆ ಉಸಿರಾಡಲು ಕಷ್ಟವಾಗುತ್ತಿದ್ದರೆ ಉಗಿಯನ್ನು ಉಸಿರಾಡಿ. ಹೀಗೆ ಮಾಡುವುದು ಸುಗಮವಾಗಿ ಉಸಿರಾಡಲು ಸಹಾಯವಾಗುತ್ತದೆ.
ಫ್ಯಾನ್ ಹತ್ತಿರ ಕುಳಿತುಕೊಳ್ಳಿ:- “ತಂಪಾದ ಗಾಳಿಯು ಉಸಿರಾಟದ ಸಮಸ್ಯೆಯಿಂದ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಉಸಿರಾಟದಲ್ಲಿ ತೊದರೆಯಾಗುತ್ತಿರುವಾಗ ಫ್ಯಾನ್ ಹತ್ತಿರ ಕುಳಿತುಕೊಳ್ಳಿ. ಉಸಿರಾಡುವಾಗ ಗಾಳಿಯ ಬಲವನ್ನು ಅನುಭವಿಸುವುದು ನಿಮ್ಮನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ:-
- ಧೂಮಪಾನವನ್ನು ತ್ಯಜಿಸಿ ಹಾಗೂ ತಂಬಾಕಿನ ಹೊಗೆಯಿಂದ ದೂರವಿರಿ.
- ಮಾಲಿನ್ಯಕಾರಕಗಳು, ಅಲರ್ಜಿನ್ಗಳು ಮತ್ತು ಟಾಕ್ಸಿನ್ ಗಳಿಂದ ದೂರವಿರಿ.
- ಬೊಜ್ಜು ಅಥವಾ ಅಧಿಕ ತೂಕ ಹೊಂದಿದ್ದರೆ ತೂಕ ಕಳೆದುಕೊಳ್ಳುವುದು ಉತ್ತಮ.
- ಎತ್ತರದ ಪ್ರದೇಶಗಳಲ್ಲಿ ಶ್ರಮವನ್ನು ತಪ್ಪಿಸಿ.
- ಚೆನ್ನಾಗಿ ತಿಂದು, ಸಾಕಷ್ಟು ನಿದ್ದೆ ಮಾಡುವ ಮೂಲಕ ಆರೋಗ್ಯವಾಗಿರಿ.