ಕೀಲು ನೋವು, ಮೈ, ಕೈ, ನೋವುಗಳಿಗೆ ಇಲ್ಲಿದೆ ಮನೆ ಔಷಧಿ

1. ನಿಂಬೆ ರಸ ಮತ್ತು ಅಪ್ಪಟ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಸೇರಿಸಿ ಕೀಲು ನೋವು ಇರುವ ಸ್ಥಳಕ್ಕೆ ಹಚ್ಚಿ ಮಾಲೀಸು ಮಾಡುವುದರಿಂದ ನೋವು ಪರಿಹಾರವಾಗುತ್ತದೆ. 2. ಧಡೂತಿ ಶರೀರದವರು ಪ್ರತಿದಿನ ನಾಲ್ಕು ಟೀ ಚಮಚ ಹಳೆಯದಾದ…

joints pain vijayaprabha

1. ನಿಂಬೆ ರಸ ಮತ್ತು ಅಪ್ಪಟ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಸೇರಿಸಿ ಕೀಲು ನೋವು ಇರುವ ಸ್ಥಳಕ್ಕೆ ಹಚ್ಚಿ ಮಾಲೀಸು ಮಾಡುವುದರಿಂದ ನೋವು ಪರಿಹಾರವಾಗುತ್ತದೆ.

2. ಧಡೂತಿ ಶರೀರದವರು ಪ್ರತಿದಿನ ನಾಲ್ಕು ಟೀ ಚಮಚ ಹಳೆಯದಾದ ಜೇನು ತುಪ್ಪವನ್ನು ಸೇವಿಸುತ್ತಿದ್ದರೆ ಶರೀರದ ತೂಕ ಇಳಿಯುವುದು ಮತ್ತು ದೈಹಿಕ ಶಕ್ತಿ ಹೆಚ್ಚಾಗಿ ಮರಗಳಲ್ಲಿ ಹೊಸ ಚೈತನ್ಯ ತುಂಬಿ ಕೊಳ್ಳುವುದು.

3, ಒಣದ್ರಾಕ್ಷಿಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಶುದ್ಧ ರಕ್ತ ವೃದ್ಧಿಯಾಗುವುದು ಹಾಗೂ ಮೂಳೆಗಳು ಶಕ್ತಿಯುತವಾಗುತ್ತದೆ.

Vijayaprabha Mobile App free

4. ಹರಳೆಣ್ಣೆಯನ್ನು ಶರೀರಕ್ಕೆ ಹಚ್ಚಿ ಕೊಂಡು ಸ್ವಲ್ಪ ಕಾಲ ಬಿಸಿಲಿನಲ್ಲಿ ಶಕ್ತಿ ಸ್ನಾನ ಮಾಡಿ ಬಿಸಿನೀರಿನ ಅಭ್ಯಂಜನ ಮಾಡುವುದರಿಂದ ಮೈ ಕೈ ನೋವು ದೂರವಾಗಿ ಚೆನ್ನಾಗಿ ನಿದ್ರೆ ಆವರಿಸುವುದು.

5. ಉಳುಕಿರುವ ಮತ್ತು ಪೆಟ್ಟು ಬಿದ್ದು ಊದಿಕೊಂಡಿರುವ ಸ್ಥಾನಕ್ಕೆ ಬಿಸಿ ನೀರಿನ ಶಾಖ ಕೊಡುವುದರಿಂದ ನೋವು ನಿವಾರಣೆ ಆಗುವುದು.

6. ಸುಮಾರು ಒಂದು ಅಂಗುಲ ಉದ್ದದ ಅರಿಶಿನ ಕೊನೆಯನ್ನು ನುಣ್ಣಗೆ ಪುಡಿ ಮಾಡಿ ಈ ಪುಡಿಯನ್ನು ಒಂದು ಬಟ್ಟಲು ಮೊಸರಿನಲ್ಲಿ ಚೆನ್ನಾಗಿ ಚೆನ್ನಾಗಿ ಕದಡಿ ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಸಂಧಿವಾತ ಗುಣವಾಗುತ್ತದೆ.

ಇದನ್ನು ಓದಿ: ಹಲ್ಲಿನಿಂದ ಸೌಂದರ್ಯ ವೃದ್ಧಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.