Gastric Problem : ಸುಮಾರು 18% ಭಾರತೀಯರು ವಿವಿಧ ರೀತಿಯ ಜಠರಗರುಳಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮತ್ತು ಸುಮಾರು 30% ವಯಸ್ಕರಲ್ಲಿ ಆಮ್ಲೀಯತೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳಿವೆ ಎಂದು ನಿಮಗೆ ತಿಳಿದಿದೆಯೇ?
ಹೌದು, ಗ್ಯಾಸ್ಟ್ರಿಕ್ ಸಮಸ್ಯೆಗಳು ಹೆಚ್ಚು ಗಂಭೀರ ಸಮಸ್ಯೆಗಳಾಗಿ ಬದಲಾಗುವವರೆಗೂ ಅವುಗಳನ್ನು ಕಡೆಗಣಿಸಲಾಗುತ್ತದೆ. ಜನರು ಈ ಪರಿಸ್ಥಿತಿಗಳನ್ನು ನಿರ್ಲಕ್ಷಿಸುತ್ತಾರೆ, ಆದರೆ ವಾಸ್ತವದಲ್ಲಿ, ಈ ಸಮಸ್ಯೆಗಳು ಅನಾರೋಗ್ಯಕರ ಆಹಾರ ಪದ್ಧತಿ ಅಥವಾ ಜೀವನಶೈಲಿಯ ಅಭ್ಯಾಸಗಳನ್ನು ಸೂಚಿಸುತ್ತವೆ, ಅದು ಅಂತಿಮವಾಗಿ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು.
ಅದೃಷ್ಟವಶಾತ್, ವೈದ್ಯಕೀಯ ಚಿಕಿತ್ಸೆಯ ಜೊತೆಗೆ, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅನೇಕ ಮನೆಮದ್ದುಗಳು ಲಭ್ಯವಿದೆ. ಈ ಲೇಖನದಲ್ಲಿ, ಗ್ಯಾಸ್ಟ್ರಿಕ್ ಸಮಸ್ಯೆಗಳು ಮತ್ತು ಅವುಗಳ ಚಿಕಿತ್ಸೆಗಾಗಿ ಲಭ್ಯವಿರುವ ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ…
ಓಂ ಕಾಳು:
ಓಂ ಕಾಳುಗಳು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಓಂಕಾಳುಗಳನ್ನು ಹಾಗೇ ಬಾಯಲ್ಲಿ ಹಾಕಿಕೊಂಡು ಜೊತೆಗೆ ಚಿಟಿಕೆ ಉಪ್ಪು ಸೇರಿಸಿಕೊಂಡು ಜಗಿದು ತಿನ್ನಬಹುದು ಅಥವಾ ಒ೦ದು ಪಾತ್ರೆಯಲ್ಲಿ ನೀರನ್ನು ಬಿಸಿಯಾಗಲು ಇಟ್ಟು ಅದರಲ್ಲಿ ಓಂ ಕಾಳುಗಳನ್ನು ಸೇರಿಸಿ ಚಹಾ ತಯಾರು ಮಾಡಿ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ.
ಶುಂಠಿ ಚಹಾ – Ginger tea
ಶುಂಠಿ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದಾಗಿದ್ದು, ಯಾವಾಗ ನಿಮಗೆ ಅಜೀರ್ಣತೆಯಾಗಿ ವಾಕರಿಕೆ, ವಾಂತಿ ಇಂತಹ ಸಮಸ್ಯೆಗಳು ಕಂಡುಬರುತ್ತವೆ. ಅಂತಹ ಸಂದರ್ಭದಲ್ಲಿ ಗ್ಯಾಸ್ಟ್ರಿಕ್ ನಿವಾರಣೆಗೆ ನೀವು ಶುಂಠಿ ಚಹಾ ತಯಾರು ಮಾಡಿ ಕುಡಿಯಬಹುದು.
ಸೋಂಪು
ಹೊಟ್ಟೆ ಉಬ್ಬರ ಮತ್ತು ಅಜೀರ್ಣತೆ ಸಮಸ್ಯೆಗೆ ಸೋಂಪು ಕಾಳುಗಳು ರಾಮಬಾಣವಾಗಿ ಕೆಲಸ ಮಾಡಲಿದ್ದು, ಇವುಗಳಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವ ಗುಣವಿದೆ. ಹೀಗಾಗಿ ನೀರಿನಲ್ಲಿ ಸೋಂಪು ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಅಸ್ವಸ್ಥತೆಯನ್ನು ದೂರ ಮಾಡಿಕೊಳ್ಳಬಹುದು.
ಜೀರಾ ಮಜ್ಜಿಗೆ
ಕರುಳಿನ ಭಾಗದಲ್ಲಿ ಉತ್ತಮ ಬ್ಯಾಕ್ಟಿರಿಯಾಗಳು ಅಭಿವೃದ್ಧಿಯಾದರೆ, ಅದರಿಂದ ನಮ್ಮ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಸಹಾಯ ಮಾಡುವುದು ಮಜ್ಜಿಗೆ ಮತ್ತು ಬ್ಲಾಕ್ ಸಾಲ್ಟ್ ಮಜ್ಜಿಗೆ ಕುಡಿಯುವ ಸಂದರ್ಭದಲ್ಲಿ ಇದಕ್ಕೆ ಸ್ವಲ್ಪ ಜೀರಿಗೆ ಪುಡಿಯನ್ನು ಕೂಡ ಮಿಕ್ಸ್ ಮಾಡಿ ಕುಡಿಯಬಹುದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುತ್ತದೆ.
ಲಿಂಬೆ ನೀರು – Lemon water
ಊಟಕ್ಕೂ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆಹಣ್ಣನ್ನು ಹಿಂಡಿ ಅದನ್ನು ಕುಡಿಯುವುದರಿಂದ ನಿಮ್ಮ ಜೀರ್ಣಾ೦ಗ ವ್ಯವಸ್ಥೆ ಬಹಳ ಚೆನ್ನಾಗಿರುತ್ತದೆ ಮತ್ತು ಇದಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತವೆ.
ಪುದೀನಾ ಚಹಾ – Peppermint tea
ಇದು ನಮ್ಮ ಹೊಟ್ಟೆ ಉಬ್ಬರ ಮತ್ತು ಹೊಟ್ಟೆಯ ಸೆಳೆತವನ್ನು ದೂರ ಮಾಡುತ್ತದೆ. ನೀರಿನಲ್ಲಿ ಪುದಿನ ಎಲೆಗಳನ್ನು ಹಾಕಿ 5 ರಿಂದ 10 ನಿಮಿಷಗಳ ಕಾಲ ಕುದಿಸಿ ಆನಂತರ ಸೇವಿಸಿದರೆ ಅಜೀರ್ಣತೆ ಸಮಸ್ಯೆ ದೂರವಾಗುತ್ತದೆ ಮತ್ತು ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.