ಸುಟ್ಟ ಕಲೆಗೆ ಹಾಗೂ ಗಾಯಕ್ಕೆ ಮನೆ ಔಷದಿ:
1. ಬೆಳಿಗ್ಗೆ ಎಳ್ಳೆಣ್ಣೆ ಹಚ್ಚಿ ತಿಕ್ಕಿ 5 ನಿಮಿಷ ಸೂರ್ಯ ಸ್ನಾನ ಮಾಡಬೇಕು.(ಬಿಸಿಲಿಗೆ ಮೈ ಒಡ್ಡುವುದು), ನಂತರ ಜಲ ಸ್ನಾನ ಮಾಡಬೇಕು. ಆಮೇಲೆ ರಾತ್ರಿ ಮಲಗುವಾಗ ಮಂಜಿಷ್ಟ ಬೇರನ್ನು ಮಜ್ಜಿಗೆಯಲ್ಲಿ ತೇಯ್ದು ಗಾಯಗಳಿಗೆ ಲೇಪಿಸಬೇಕು
2. ಒಣ ಕೊಬ್ಬರಿಯನ್ನು ಸುಟ್ಟಾಗ ಆದ ಕರಕಲಾದ ಕೊಬ್ಬರಿಯನ್ನು, ಕೊಬ್ಬರಿ ಎಣ್ಣೆಯಲ್ಲಿ ತೇಯ್ದು ಸುಟ್ಟಗಾಯಕ್ಕೆ, ಸುಟ್ಟಗಾಯ ಮಾಗುತ್ತಾ ಬಂದಾಗ ಹಚ್ಚಿದರೆ ಕಲೆ ಮಾಯವಾಗುವುದು.
3. ಸುಟ್ಟಗಾಯಕ್ಕೆ ಕೂಡಲೇ ಸಾಗವಾನಿ (ತೇಗ) ಎಣ್ಣೆ ಹಚ್ಚಬೇಕು.ಸಾಗುವಾನಿ ಎಲೆಯನ್ನು ಕೊಬ್ಬರಿ ಎಣ್ಣೆ ಹಾಕಿ ಕಾಯಿಸಿದರೆ ಕೆಂಪಗಾಗುತ್ತದೆ. ಅದನ್ನು ಪಾರಿವಾಳದ ಗರಿಯಿಂದ ಗಾಯಕ್ಕೆ ಹಚ್ಚಬೇಕು. ಈ ಔಷಧಿ ಮಾಡಿದರೆ ಕಲೆ ಕೂಡಾ ಉಳಿಯುವುದಿಲ್ಲ. ಸುಟ್ಟ ಕೂಡಲೇ ಪಟೆತಟೇ ಗಿಡದ ಎಲೆ ಜಜ್ಜಿ ರಸ ತೆಗೆದು ಸುಟ್ಟ ಜಾಗದ ಮೇಲೆ ಹಿಂಡಿದರೆ ಜೊಕ್ಕೆ ಕೂಡಾ ಬರುವುದಿಲ್ಲ. ಕೂಡಲೇ ಉರಿ ತಣ್ಣಗಾಗುತ್ತದೆ.
4. ಸುಟ್ಟ ಕೂಡಲೇ ಕೋಳಿಮೊಟ್ಟೆಯನ್ನು ಒಡೆದು ಹಚ್ಚಬೇಕು. ಇದರಿಂದ ಬೊಕ್ಕೆಗಳು ಏಳುವುದಿಲ್ಲ.
ಇದನ್ನು ಓದಿ: ಮುಖದ ಮೊಡವೆ, ಬೊಕ್ಕೆಗಳಿಗೆ ಹೋಗಲಾಡಿಸಲು ಇಲ್ಲಿದೆ ಮನೆ ಔಷದಿ