ಶರೀರದ ಉಷ್ಣಕ್ಕೆ ಮನೆಮದ್ದು:
1. ಉಷ್ಣದಿಂದ ದೇಹದ ಭಾಗ ( ತೊಡೆ ಸಂದು, ಕೈಕಾಲು ಸಂದು, ಮೊಲೆ, ಮೂತ್ರದ್ವಾರ ) ಕರಗಿದಾಗ ಸಪ್ಪೆತುಪ್ಪ ವನ್ನು ಕರಗಿದ ಜಾಗಕ್ಕೆ ಹಚ್ಚುವದರಿಂದ ಕರಗುವಿಕೆ ಗುಣವಾಗುವುದು.
2. ಉಷ್ಟಕ್ಕೆ ಅಗಳುಶುಂಠಿ, ಸುಗಂಧೀ ಬೇರಿನ ಕಷಾಯ, ಬಿಳಿಸುರಳಿ ಗೆಡ್ಡೆ ಲೇಹ್ಯ, ತಂಡುಲೋದಕವನ್ನು ಸೇವಿಸಿದರೆ ಉಷ್ಣ ಶಮನವಾಗುತ್ತದೆ.
3. ಲೋಳೆಸರ 1/2 ದಡಿ. (ಅದರ ಹೊಳಕನ್ನು ತೆಗೆದು ಚೆನ್ನಾಗಿ ನೀರಿನಲ್ಲಿ ತೊಳೆದು) ಕಲ್ಲುಸಕ್ಕರೆ. ಕಲ್ಲುನಾರು, ಆಕಳದಾರೋಷ್ಣ ಹಾಲು (ಇಲ್ಲದೇ ಹೋದಲ್ಲಿ ಕಾಯಿಸಿ ಆರಿಸಿದ ಹಾಲು). ಈ ಮೇಲಿನವುಗಳನ್ನು ನುಣ್ಣಗೆ ತಿರುವಿ ಹಾಲಿಗೆ ಹಾಕಿ 3-4 ದಿನ ಬೆಳಿಗ್ಗೆ ತೆಗೆದುಕೊಂಡರೆ ತುಂಬಾ ತಂಪು.
4. ಯಾವುದೇ ಉಷ್ಣದಿಂದಾದ ಕಾಯಿಲೆಗೆ ಅಗಳು. ಶುಂಠಿಯ ಔಷಧಿಯನ್ನು ಮಾಡಿದರೆ ಬಲು ಶೀಘ್ರವಾಗಿ ದೇಹವು ತಂಪಾಗುತ್ತದೆ. ಅತಿಯಾದ ಉಷ್ಣವನ್ನು ಶಮನಗೊಳಿಸುತ್ತದೆ.
5. ಕ್ಷೀರಬಲ ತೈಲ, ದಾಸವಾಳದ ತೈಲವನ್ನು ತಲೆಗೆ ಮೈಗೆ ಹಚ್ಚಿ, ಅಭ್ಯಂಜನ ಮಾಡುವುದರಿಂದ ದೇಹ ತಂಪಾಗುವುದು. ಶರೀರದ ಉಷ್ಣತೆಯನ್ನು ಕಡಿಮೆ ಮಾಡುವುದು.
6. ಅಗಳು ಶುಂಠಿಯ ಸೇವನೆಯಿಂದ ಉಷ್ಠ ಪರಿಹಾರವಾಗುವುದು.
ಇದನ್ನು ಓದಿ: ದೇಹದ ದುರ್ಬಲತೆ, ಅಶಕ್ತಿಗೆ ಉತ್ತಮ ಮನೆ ಔಷದಿ