ಮೊಡವೆಗಳಿಗೆ, ಮುಖದ ಮೇಲಿನ ಕಲೆಗಳಿಗೆ ಮನೆ ಔಷಧಿ
1. ನಿಂಬೆ ಹಣ್ಣಿನ ಸಿಪ್ಪೆ ಅಥವಾ ಎಳೆಯ ನಿಂಬೆ ಎಲೆಗಳನ್ನು – ಅರಿಶಿನದೊಂದಿಗೆ ನುಣ್ಣಗೆ ಅರೆದು ಮುಖಕ್ಕೆ ಲೇಪಿಸಿಕೊಂಡರೆ ಮೊಡವೆಗಳು ಮಾಯವಾಗುತ್ತವೆ.
2. ಶುದ್ಧವಾದ ಹಾಲನ್ನು ಚೆನ್ನಾಗಿ ಕುದಿಸಿ ಒಂದು ಗ್ಲಾಸು ಹಾಲಿಗೆ ಒಂದು ನಿಂಬೆ ರಸವನ್ನು ಹಿಂಡಿ ಒಂದು ಟೀ ಚಮಚ ಗ್ಲಿಸರಿನ್ ಸೇರಿಸಿ ಅರ್ಧ ಗಂಟೆಯ ನಂತರ ಮಿಶ್ರಣವನ್ನು ಮೊಡವೆಗಳಿಗಾಗಲೀ, ಒಡೆದು ಹೋದ – ಕಾಲುಗಳಿಗಾಗಲೀ ಹಚ್ಚಿದರೆ ಗುಣ ಕಂಡು ಬರುವುದು.
3. ಚಳಿಗಾಲದಲ್ಲಿ ಮುಖ ಒಡೆದಿದ್ದರೆ ಹಾಲು ಸೇರಿಸಿ ನೀರಿನೊಂದಿಗೆ ಮುಖ ತೊಳೆಯುತ್ತಿದ್ದರೆ ಗುಣವಾಗುತ್ತದೆ.
4. ಸೇಬಿನ ತಿರುಳನ್ನು ಚೆನ್ನಾಗಿ ಅರೆದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಮೊಡವೆಗಳು ನಿವಾರಣೆಯಾಗಿ ಮುಖದ ಹೊಳಪು ಹೆಚ್ಚಾಗುವಂತೆ ಮಾಡುತ್ತದೆ.
5. ಪ್ರತಿದಿನವೂ ಎಳೆನೀರಿನಿಂದ ಮುಖ ತೊಳೆದು ಕೊಳ್ಳುತ್ತಿದ್ದರೆ ಮೊಡವೆಗಳು ಮಾಯವಾಗುತ್ತವೆ, ಮುಖ ಕಾಂತಿಯುಕ್ತವಾಗುವುದು.
6. ಪರಂಗಿ ಹಣ್ಣಿನ ಹೋಳಿನಿಂದ ಚರ್ಮವನ್ನು ತಿಕ್ಕುತ್ತಿದ್ದರೆ, ಚರ್ಮದ ಮೇಲಿನ ಕಲೆಗಳು ನಿವಾರಣೆಯಾಗುತ್ತದೆ.
7. ಮೊಡವೆ ಗುಳ್ಳೆ ಇರುವವರು ದಿನನಿತ್ಯ ಊಟ ಮಾಡಿದ ನಂತರ ಕೈ ತೊಳೆದ ನಂತರ ಮುಖಕ್ಕೆ ಕೈ ಒರೆಸಿಕೊಂಡರೆ ಮೊಡವೆ ಗುಳ್ಳೆಗಳು ಮಾಯವಾಗುತ್ತವೆ.
ಇದನ್ನು ಓದಿ: ಅರಿಶಿನ ಕಾಮಾಲೆ ನಿವಾರಣೆಗೆ