ಮುಖದ ಮೊಡವೆ, ಬೊಕ್ಕೆಗಳಿಗೆ ಹೋಗಲಾಡಿಸಲು ಇಲ್ಲಿದೆ ಮನೆ ಔಷದಿ

ಮುಖದ ಮೊಡವೆ, ಬೊಕ್ಕೆಗಳಿಗೆ ಮನೆ ಔಷದಿ: 1. ಈರುಳ್ಳಿಯ ರಸವನ್ನು ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆಯಬೇಕು. 2. ಜಾಯಿಕಾಯಿಯನ್ನು ಹಾಲಿನಲ್ಲಿ ತೇಯ್ದು ದಿನಕ್ಕೆ 2-3 ಬಾರಿ ಹಚ್ಚಬೇಕು. 3. ಹಾಲು ಕುದಿಯುವಾಗ ಬಗ್ಗಿ ಮುಖಕ್ಕೆ…

acne and blisters vijayaprabha

ಮುಖದ ಮೊಡವೆ, ಬೊಕ್ಕೆಗಳಿಗೆ ಮನೆ ಔಷದಿ:

1. ಈರುಳ್ಳಿಯ ರಸವನ್ನು ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆಯಬೇಕು.

2. ಜಾಯಿಕಾಯಿಯನ್ನು ಹಾಲಿನಲ್ಲಿ ತೇಯ್ದು ದಿನಕ್ಕೆ 2-3 ಬಾರಿ ಹಚ್ಚಬೇಕು.

Vijayaprabha Mobile App free

3. ಹಾಲು ಕುದಿಯುವಾಗ ಬಗ್ಗಿ ಮುಖಕ್ಕೆ ಅದರ ಉಗಿ ತಾಗುವಂತೆ ಮಾಡಿ ನಂತರ ಮುಖದಮೇಲಿನ ಹಬೆಯ ನೀರನ್ನು ತಿಕ್ಕಬೇಕು.

4. ಹಾಲಿನ ಕೆನೆ, ಲಿಂಬೆ ರಸ, ಅಥವಾ ಲಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ಹಚ್ಚಬೇಕು.

5. ನಿತ್ಯ ಬೆಳಿಗ್ಗೆ, ರಾತ್ರಿ ಕಾಮಕಸ್ತೂರಿಯ ಸೊಪ್ಪಿನ ರಸವನ್ನು ಮುಖಕ್ಕೆ ಹಚ್ಚಿ ಕೊಳ್ಳುವುದು.

6. ಬಾಷ್ಪ ಸ್ನಾನವು (ಉಗಿಯ ಸ್ನಾನ) ಮೊಡವೆಗೂ,ಮುಖಕಾಂತಿಗೂ ಮತ್ತು ಶರೀರದ ಕಾಂತಿಗೂ ಕೂಡ ಒಳ್ಳೆಯದು.

7. ಬೇವು ಮತ್ತು ಹೊಂಗೆ ತೊಗಟೆಯ ಕಷಾಯ ಕುದಿಯುವಾಗ, ಅದರ ಹಬೆಗೆ ಮುಖವನ್ನು ಹಿಡಿಯುವುದು. ಕಷಾಯದ ಜೊತೆ ಸ್ವಲ್ಪ ಲಿಂಬೆ ರಸವನ್ನೂ ಸೇರಿಸಬಹುದು.

8. ಶಂಖವನ್ನು ಲಿಂಬೆ ರಸದಲ್ಲಿ ತೇಯ್ದು ಹೆಚ್ಚುವುದು.

9. ರಾತ್ರಿ ಲವಂಗವನ್ನು ನೀರಿನಲ್ಲಿ ತೇಯ್ದು ಹಚ್ಚುವುದು.

10. ಒಳ್ಳೆಯ ತೊಗರಿಬೇಳೆ 2 ತೊಲ.ಕರ್ಪೂರ 1/4 ತೊಲದ ಚೂರ್ಣ ಮಾಡಿಟ್ಟುಕೊಂಡು ನಿತ್ಯ ರಾತ್ರಿ ಹಾಲಿನ ಕೆನೆಯಲ್ಲಿ ಲೇಪಿಸುವುದು. ಇದೇರೀತಿ ತೊಗರೀ ಬೇಳೆ,ಬಟಾಣಿ ಕಾಳನ್ನು ಚೂರ್ಣಿಸಿ ನಿತ್ಯರಾತ್ರಿ ಹಾಲಿನ ಕೆನೆಯಲ್ಲಿ ಲೇಪಿಸುವುದು.

11.ಕಾಳುಮೆಣಸಿನ ನಯವಾದ ಪುಡಿಯನ್ನು ಹಾಲಿನ ಕೆನೆಯಲ್ಲಿ ಕಲಸಿ ಲೇಪಿಸುವುದರಿಂದ ಮೊಡವೆಗಳು ಮಾಯವಾಗುತ್ತವೆ.

ಇದನ್ನು ಓದಿ: ಆಲಸ್ಯ, ಸೋಮಾರಿತನ ಹೋಗಲಾಡಿಸಲು ಹೀಗೆ ಮಾಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.