ಚರ್ಮದ ಅಲರ್ಜಿಗೆ ಮನೆ ಔಷಧಿ:
1. 1 ಚಮಚ ರೋಸ್ ವಾಟರ್, ಗಸಗಸೆ ಸ್ವಲ್ಪ, ಗುಲಾಬಿ ದಳ, ಲಿಂಬೇ ರಸ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಎಲ್ಲೆಲ್ಲಿ ತುರಿಕೆ ಇದೆಯೋ ಅಲ್ಲಲ್ಲಿ ಸವರಿ, 1 ಘಂಟೆ ಕಾಲ ಬಿಟ್ಟು ತೊಳೆಯಬೇಕು. ರೋಸ್ ವಾಟರ್ ಸಿಕ್ಕದಿದ್ದರೆ 1 ಚಿಟಿಕೆ ಅರಸಿನ ಹಾಕಿ ಜಾಸ್ತಿ ಗುಲಾಬಿ ದಳ ಹಾಕಬೇಕು.
2. 1 ಲೋಟ ನೀರಿಗೆ 2 ಎಲಕ್ಕಿ, 4 ಬೆಳ್ಳುಳ್ಳಿ, 1 ವೀಳ್ಯದೆಲೆ, ಪುದಿನಾ 4 ಕುಡಿ, 1/4 ಚಮಚ ಅರಸಿನ ಹಾಕಿ ಕುದಿಸಿ, ಸೋಸಿ ಅಲರ್ಜಿ ಆದಾಗ ಬಿಸಿಬಿಸಿ ತೆಗೆದುಕೊಳ್ಳಬೇಕು. ಯಾವ ವೇಳೆಯಲ್ಲಾದರು ಕುಡಿಯಬಹುದು.
3. ಬೇವಿನ ಎಣ್ಣೆಯನ್ನು ಬಾಣಲೆಗೆ ಹಾಕಿ ಕಾಯಿಸಿ, ಅದಕ್ಕೆ 1/2 ಚಮಚ ಉಪ್ಪು, 1 ಚಮಚ ಕರ್ಪೂರದ ಪುಡಿ, 1/2 ಪಪ್ಪಾಯಿ ಎಲೆ, ಲಿಂಬೆ ರಸ ಹಾಕಿ, ಚೆನ್ನಾಗಿ ಕಾಯಿಸಿ ತುರಿಕೆ
ಜಾಗಕ್ಕೆ ಹಚ್ಚಬೇಕು. ನಂತರ ಸ್ನಾನ ಮಾಡಬೇಕು.
4. ಕರಿಬೇವು 5 ಎಲೆ, ಕೃಷ್ಣ ತುಳಸಿ 5 ಎಲೆ ನುಣ್ಣಗೆ ಅರೆದು, ಅರಸಿನ, ಗಂಧ ಸೇರಿಸಿ ಚೆನ್ನಾಗಿ ಮೈಗೆ ಹಚ್ಚಬೇಕು.
5. 3-4 ತುಳಸೀ ಎಲೆ, 2-3 ಬೆಳ್ಳುಳ್ಳಿಯನ್ನು, 1 ಲೋಟ ನೀರಿಗೆ ಹಾಕಿ ಕುದಿಸಿ, ಆ ನೀರನ್ನು ಬೆಳಿಗ್ಗೆ ಮುಂಚೆ ಕುಡಿಯಬೇಕು.
ಇದನ್ನು ಓದಿ: ಔಷಧಿಗಳ ಆಗರ ಈ ಲಾವಂಚ