ನೆಗಡಿ ಕಡಿಮೆ ಮಾಡಲು ಸಲಹೆ:
ಸೋಂಪಿನ ಕಾಲನ್ನು ಪುಡಿ ಮಾಡಿ, ಒಂದು ಬಟ್ಟೆಗೆ ಹಾಕಿ ವಾಸನೆ ಮೂಸಿದರೆ ಶೀತ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿಯನ್ನು ಬೆಂಕಿಯಲ್ಲಿ ಸುಟ್ಟು, ಅನ್ನದಲ್ಲಿ ತಿಂದರೂ ಕೂಡ ಶೀತ ಕಡಿಮೆಯಾಗುತ್ತದೆ.
10 ಗ್ರಾಂ ಶುಂಠಿ ಪುಡಿಯನ್ನು 20 ಗ್ರಾಂ ಬಿಸಿನೀರಿನೊಂದಿಗೆ ಬೆರೆಸಿ ಮಲಗುವ ಮುನ್ನ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.
ಮೂರು ವೀಳ್ಯದೆಲೆಗೆ ಹರಳೆಣ್ಣೆ ಬಳಿದು, ಸ್ವಲ್ಪ ಬಿಸಿ ಮಾಡಿ ಇದನ್ನು ಎದೆ, ಹೊಟ್ಟೆ, ತಲೆ ಮೇಲೆ ಸ್ವಲ್ಪ ಹೊತ್ತು ಇಟ್ಟುಕೊಂಡರೆ ನೆಗಡಿಯಿಂದ ಮುಕ್ತಿ ಪಡೆಯಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.