ಜೀರಿಗೆ ನೀರಿನ ಸೇವನೆಯಿಂದ ಆರೋಗ್ಯ ವೃದ್ಧಿ:
ಜೀರಿಗೆ ನೀರಿನ ಸೇವನೆಯಿಂದ ಆರೋಗ್ಯ ವೃದ್ಧಿ ಪ್ರತಿನಿತ್ಯ ಅಡುಗೆಗೆ ಬಳಸುವಂತಹ ಹಲವು ಪದಾರ್ಥಗಳಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಇದರಲ್ಲಿ ಜೀರಿಗೆ ಕೂಡ ಒಂದು.
ಜೀರಿಗೆ ನೀರನ್ನು ಸೇರಿಸಿ ಕುಡಿಯುವುದರಿಂದ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಹಸಿವು ತಡೆಯಲು ಸಹಕಾರಿಯಾಗಿದೆ. ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆ ನಿವಾರಿಸುತ್ತದೆ. ಉರಿಯೂತದಿಂದ ಎದುರಾಗುವ ಸ್ಥೂಲಕಾಯತೆಯನ್ನು ದೂರವಾಗಿಸುತ್ತದೆ.
ಪ್ರತಿದಿನ ಸಂಜೆ ಗ್ರೀನ್ ಟೀ ಸೇವಿಸುವುದರಿಂದ ಆಗುವ ಪ್ರಯೋಜನಗಳಿವು:
ಪ್ರತಿದಿನ ಸಂಜೆ ಗ್ರೀನ್ ಟೀ ಸೇವಿಸುವುದರಿಂದ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ.ದೇಹದ ಕೊಬ್ಬು ಕರಗಿಸಲು ನೆರವಾಗುತ್ತದೆ.
ಗ್ರೀನ್ ಟೀ ಕ್ಯಾನ್ಸರ್ ಬರದಂತೆ ತಡೆಯುವುದಲ್ಲದೆ, ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
ಗ್ರೀನ್ ಟೀ ಕುಡಿಯುವುದರಿಂದ ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡುವುದಲ್ಲದೆ ತಲೆನೋವು ನಿವಾರಣೆಯಾಗುತ್ತದೆ.
ಗ್ರೀನ್ ಟೀ ಕುಡಿಯುವುದರಿಂದ ಹೊಟ್ಟೆ ನೋವಿನ ಶಮನವಾಗುತ್ತದೆ. ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಇದನ್ನು ಓದಿ: ನಿದ್ದೆ ಬಗ್ಗೆ ಗೊತ್ತಿರಲೇಬೇಕಾದ ವಿಚಾರ; ನಿದ್ರಾಹೀನತೆಗೆ ಕಾರಣಗಳು ಇಲ್ಲಿವೆ..!