Health benefits of spinach : ಹಸಿರು ತರಕಾರಿಯಾಗಿರುವ ಪಾಲಕ್ ಸೊಪ್ಪು ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿದ್ದು ಕಡಿಮೆ ಕ್ಯಾಲೋರಿ ಹೊಂದಿರುವಂತಹ ಸಸ್ಯವಾಗಿದೆ. ಇದರಲ್ಲಿ ವಿಟಮಿನ್, ಪ್ರೊಟೀನ್, ಮಿನರಲ್, ಕಬ್ಬಿಣದ ಅಂಶಗಳು ಹೇರಳವಾಗಿರುತ್ತವೆ. ಆಹಾರವಾಗಿ ಮತ್ತು ಔಷಧವಾಗಿಯೂ ಉಪಯೋಗಿಸಬಹುದಾದ ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ.
ಮಧುಮೇಹ ನಿರ್ವಹಣೆ
ಮಧುಮೇಹ ರೋಗಿಗಳು ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ, ಮಧುಮೇಹ ನಿಯಂತ್ರಣವಾಗುತ್ತದೆ. ಸೊಪ್ಪಿನಲ್ಲಿರುವ ಆಲ್ಪಾ ಲಿಪೊಯಿಕ್ ಎಂಬ ಆಮ್ಲವು ಗ್ಲಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ರೋಗಿಗಳಲ್ಲಿ ಆಕ್ಸಿಡೇಟಿವ್, ಒತ್ತಡ ಪ್ರೇರಿತ ಬದಲಾವಣೆಗಳನ್ನು ತಡೆಯುತ್ತದೆ.
ಕ್ಯಾನ್ಸರ್ ತಡೆಗಟ್ಟುವಿಕೆ
ಪಾಲಕ್ ಸೊಪ್ಪಿನಲ್ಲಿ ಕ್ಲೋರೋಫಿಲ್ ಅಂಶ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರಮುಖವಾಗಿ ಇದರಲ್ಲಿ ಕ೦ಡು ಬರುವ೦ತಹ ಪ್ಲೇವನಾಯ್ಡ್ ಅಂಶಗಳು ಮತ್ತು ಆಂಟಿಆಕ್ಸಿಡೆಂಟ್ ಅಂಶಗಳು ಕ್ಯಾನ್ಸರ್ ವಿರೋಧಿ ಆಹಾರವಾಗಿ ಪರಿವರ್ತಿಸುತ್ತದೆ. ಯಾವುದೇ ಪ್ರಕಾರದ ಕ್ಯಾನ್ಸರ್ ಗೆ ಪಾಲಕ್ ಸೊಪ್ಪು ಪರಿಹಾರವಾಗಿ ಕೆಲಸ ಮಾಡುತ್ತದೆ.
ಮೂಳೆ ಬಲವೃದ್ದಿ
ಪಾಲಕ್ ಸೊಪ್ಪಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಪ್ರಮುಖವಾಗಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್ ಅಂಶಗಳು ಇರುವುದರಿಂದ ಅಡುಗೆಗೆ ಪಾಲಕ್ ಸೊಪ್ಪನ್ನು ಹೆಚ್ಚಾಗಿ ಬಳಸಿದರೆ, ಮೂಳೆಗಳ ಬಲವೃದ್ದಿಗೂ ಉತ್ತಮವಾಗಿರುತ್ತದೆ. ವಯಸ್ಸಾದ ಮೇಲೆ ಆಸ್ಟಿಯೋಪೋರೋಸಿಸ್ ನಂತಹ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತದೆ.
ಕಣ್ಣಿನ ಆರೋಗ್ಯ
ಪಾಲಕ್ ಸೊಪ್ಪಿನಲ್ಲಿ ಝೀಕ್ಸಾಂಥಿನ್, ಲುಟೀನ್ ಮತ್ತು ಬೀಟಾ-ಕ್ಯಾರೋಟಿನ್ ಅಂಶಗಳು ಹೇರಳವಾಗಿವೆ. ಸಮೀಪ ದೃಷ್ಟಿ, ದೂರದೃಷ್ಟಿ ಸಮಸ್ಯೆ ಎದುರಿಸುತ್ತಿರುವವರು ಹೆಚ್ಚಾಗಿ ಬಳಸಿದರೆ ಕಣ್ಣುಗಳ ದೃಷ್ಟಿದೋಷವನ್ನು ಸರಿಪಡಿಸುತ್ತದೆ. ಕ್ಯಾರೆಟ್, ಪಾಲಕ್ ಸೊಪ್ಪು ಮಿಶ್ರಣದ ಜ್ಯೂಸ್ ಸೇವನೆ ಮಾಡಿದರೆ ರಾತ್ರಿ ಕುರುಡು, ಕಣ್ಣುಗಳಲ್ಲಿ ಪೊರೆ ಕಾಣಿಸುವ ತೊ೦ದರೆಗಳು ದೂರವಾಗುತ್ತವೆ.
ಗರ್ಭಿಣಿಯರಿಗೆ ಉಪಯುಕ್ತ
ಪಾಲಕ್ ಸೊಪ್ಪಿನ ಜ್ಯೂಸ್ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಗರ್ಭಿಣಿಯರು ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಗರ್ಭಕೋಶದಲ್ಲಿ ಮಗುವಿನ ಬೆಳವಣಿಗೆ ಉತ್ತಮವಾಗುತ್ತದೆ ಮತ್ತು ಗರ್ಭಪಾತವಾಗುವ ಸಾಧ್ಯತೆ ಇರುವುದಿಲ್ಲ. ಬಾಣಂತಿಯರಿಗೆ ಹಾಲಿನ ಉತ್ಪತ್ತಿ ಮತ್ತು ಗುಣಮಟ್ಟವನ್ನು ಪಾಲಕ್ ಸೊಪ್ಪು ಜಾಸ್ತಿ ಮಾಡುತ್ತದೆ.