ಉತ್ತಮ ನಿದ್ದೆ ಮಾಡುವುದು ಹೃದಯರಕ್ತನಾಳದ ಆರೋಗ್ಯಕ್ಕೆ ಉತ್ತಮ ಎಂದು ಅಮೆರಿಕದ ಹಾರ್ಟ್ ಅಸೋಸಿಯೇಷನ್ ತಿಳಿಸಿದೆ. ಉತ್ತಮ ನಿದ್ದೆ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದು, ಹೃದಯರಕ್ತನಾಳದ ಖಾಯಿಲೆಗಳು ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಒಳ್ಳೆಯ ನಿದ್ದೆ ಮಾಡಿದರೆ ತೂಕ, ರಕ್ತದೊತ್ತಡ ಅಥವಾ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಈಗಾಗಿ ದಿನದ 24 ಗಂಟೆಯಲ್ಲಿ 7-8 ಗಂಟೆ ನಿದ್ದೆ ಮಾಡಿ. ಇನ್ನು ಬೆಳಗ್ಗೆದ್ದ ಕೂಡಲೇ ಫೋನ್ ನೋಡಬೇಡಿ. ದಿನವೆಲ್ಲಾ ಒತ್ತಡದಿಂದಲೇ ಆರಂಭವಾಗುತ್ತದೆ.
ಉತ್ತಮ ನಿದ್ದೆಗಾಗಿ ಏನು ಸೇವಿಸಬೇಕು?
*ಪ್ರತಿನಿತ್ಯ ರಾತ್ರಿ ಹಾಲು ಕುಡಿಯುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ
*ರಾತ್ರಿ ಮಲಗುವ ಮೊದಲು ಒಂದು ಹಿಡಿ ಚರಿ ಹಣ್ಣನ್ನು ಸೇವನೆ ಮಾಡಿ
*ಬಾಳೆಹಣ್ಣು ಸೇವನೆ ಮಾಡುವುದರಿಂದ ನಿದ್ರೆ ಕೂಡಾ ಸುಧಾರಿಸುತ್ತದೆ
*ಉತ್ತಮ ನಿದ್ರೆಗಾಗಿ ರಾತ್ರಿ ಬಾದಾಮಿ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ
*ನಿದ್ರೆಯ ಸಮಸ್ಯೆ ಇರುವವರು ಕೆಫೀನ್, ಸೇವನೆ ತಪ್ಪಿಸಿ
*ಉತ್ತಮ ನಿದ್ರೆಗಾಗಿ ಹರ್ಬಲ್ ಟೀ ಸೇವನೆ ಮಾಡಬಹುದು