ವಾಕರಿಕೆಗೆ ಉತ್ತಮ ಮನೆ ಮದ್ದು:
1. ಒಂದು ಚಮಚ ತುಲಸೀ ರಸಕ್ಕೆ ಅರ್ಧ ಚಮಚ ಏಲಕ್ಕಿಪುಡಿ ಹಾಕಿ ನೆಕ್ಕಿದರೆ ಯಾವುದೇ ತರಹದ ವಾಕರಿಕೆ ಇದ್ದರೂ ಉಂಟಾಗುವುದಿಲ್ಲ. ಗುಣವಾಗುತ್ತದೆ. ವಾಕರಿಗೆಯ ವಿಕಾರವೇ ಉಂಟಾಗುವುದಿಲ್ಲ.
2. ಲಿಂಬೇ ರಸದಲ್ಲಿ ಸ್ವಲ್ಪ ಜೇನು ಬೆರೆಸಿ ನೆಕ್ಕಿಸಿದರೆ ವಾಂತಿ ನಿಲ್ಲುತ್ತದೆ. ಸಕ್ಕರೆಯನ್ನು ಬೇಕಾದರೆ ಬೆರೆಸಿ ಕುಡಿಯಬಹುದು.
3. ದ್ರಾಕ್ಷಿ, ಅರಳು, ಬಿಳಿ ಜೀರಿಗೆ ಸಕ್ಕರೆ ಸಮಭಾಗ ಚೂರ್ಣಿಸಿ, ಮೂರು ಬೆರಳಿಗೆ ಬಂದಷ್ಟು ಪುಡಿಯನ್ನು ಹಳೇ ನೀರಿನಲ್ಲಿ ಕದರಿ ಕುಡಿದರೆ ವಾಂತಿ ನಿಲ್ಲುವುದು.
4, ಬಿಳೀ ಜೀರಿಗೆ 1 ತೊಲವನ್ನು, ಹೊಸ ಬಿಳಿ ಬಟ್ಟೆಯಲ್ಲಿ ಗಂಟು ಕಟ್ಟಿ, ತುಪ್ಪದಲ್ಲಿ ತೋಯಿಸಿ, ಉರಿ ಹಚ್ಚಿ ಸುಡಬೇಕು. ಬೂದಿಯಾದ ನಂತರ ಆ ಜೀರಿಗೆ ಭಸ್ಮವನ್ನು, ಜೇನು ತುಪ್ಪದಲ್ಲಿ ಬೆರೆಸಿ, ಸೇವಿಸಿದಲ್ಲಿ ಸರ್ವಪೈತ್ಯ ವಾಂತಿ ನಿಲ್ಲುವುದು.
5. ಬಿಸಿ ಹಾಲಿಗೆ 1 ಲೋಟಕ್ಕೆ 1/2 ಕಡಿ ಲಿಂಬೇ ಹಣ್ಣು ಹಿಂಡಿದಾಗ ಅದು ಒಡೆಯುತ್ತದೆ. ಅದನ್ನು ಸೋಸಿ ಸಕ್ಕರೆ ಹಾಕಿ ಕುಡಿದರೆ ವಾಂತಿ ನಿಲ್ಲುವುದು.
6. ಏಲಕ್ಕಿ ಸಿಪ್ಪೆ1 ಮುಷ್ಟಿಯನ್ನು ತೆಗೆದುಕೊಂಡು ನುಣ್ಣಗೆ ಅರೆದು ಕಾದಾರಿದ ನೀರಿನಲ್ಲಿ ಬೆರಸಿ ಹಣಿಯಲು ಬಿಡಬೇಕು. ಈ ಹಣಿಗೆ ಹಾಲು ಸಕ್ಕರೆ ಬೆರೆಸಿ ಕುಡಿದರೆ ಪಿತ್ತವಿಕಾರದ ವಾಂತಿ ನಿಲ್ಲುವುದು.
ಇದನ್ನು ಓದಿ: ಸುಟ್ಟ ಕಲೆಗೆ ಹಾಗೂ ಗಾಯಕ್ಕೆ ಮನೆ ಔಷದಿ