ಕಿವಿ ನೋವಿಗೆ ಉತ್ತಮ ಮನೆ ಔಷದಿ:
1. ನೆಗಡಿಯಿಂದ ಅಥವಾ ಕಿವಿಯೊಳಗೆ ನೀರು ಸೇರಿ ನೋಯುತ್ತಿದ್ದರೆ ತುಳಸೀ ಎಲೆ ಜಜ್ಜಿ ರಸ ತೆಗೆದು ರಸವನ್ನು 2-4 ಹನಿಯಷ್ಟು ಕಿವಿಗೆ ಹಾಕಿಕೊಂಡರೆ ಕಿವಿ ನೋವು ಕಡಿಮೆಯಾಗುವುದು.
2. ಲಿಂಬೆಯ ಸೊಪ್ಪು 3-4 ತಂದು ಜಜ್ಜಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಹಾಕಿ, ಚೆನ್ನಾಗಿ ಕಾಯಿಸಿ ಆರಿದ ಮೇಲೆ 2-3 ಹನಿ ಕಿವಿಗೆ ಹಾಕಬೇಕು. ಹೀಗೆ 3-4 ದಿನ ಮಾಡಿದರೆ ಗುಣವಾಗುತ್ತದೆ. ಸೀತಾಳೆ ದಂಡೆಯ 1 ಎಲೆ ತಂದು, ಮುಂಬೂದಿಯಲ್ಲಿ ಹದವಾಗಿ ಸುಟ್ಟು, ಅದರ ರಸ ತೆಗೆದು, 1-2 ಹನಿ ಕಿವಿಗೆ ಹಾಕಿದರೆ ಕಿವಿ ನೋವು ಕಡಿಮೆಯಾಗುವುದು. ರಸ ತೆಗೆಯುವಾಗ ಎಲೆಯಲ್ಲಿ ಬೂದಿಯಂಶ ಇರದಂತೆ ಚೆನ್ನಾಗಿ ಸ್ವಚ್ಛ ಮಾಡಿ ರಸ ತೆಗೆಯಬೇಕು.
3. ಥಂಡಿಯಿಂದ ಕಿವಿ ನೋವು ಬಂದರೆ 1 ಬೆಳ್ಳುಳ್ಳಿ ಬೇಳೆ ಜಜ್ಜಿ, ಎಣ್ಣೆ ಹಾಕಿ ಕಾಯಿಸಿ. ಆರಿದ ನಂತರ ಕಿವಿಗೆ ಹಾಕಬೇಕು. ಬೆಳ್ಳುಳ್ಳಿ 1 ದಳ ತೆಗೆದು ತಲೆ ಚೂಟಿ ಹತ್ತಿಯನ್ನು ಸುತ್ತಲೂ ಸುತ್ತಿ ಕಿವಿಯೊಳಗೆ ಚೂಟದ ಭಾಗ ಇರುವಂತೆ ಇಟ್ಟುಕೊಂಡರೆ ಥಂಡಿಯಿಂದಾದ ಕಿವಿನೋವು ಗುಣವಾಗುತ್ತದೆ.
4. ಸಹದೇವಿ ಸೊಪ್ಪಿನ ಎಣ್ಣೆ ಕಿವಿಗೆ ಬಹಳ ಒಳ್ಳೆಯದು. ಸೊಪ್ಪನ್ನು ಜಜ್ಜಿ ರಸ ತೆಗೆದು ಎಣ್ಣೆ ಹಾಕಿ ಕಾಯಿಸಬೇಕು. ಇದಕ್ಕೆ ಸಮೂಲ ಹಾಕಬೇಕು.
ವಿಶೇಷ ಸೂಚನೆ: ಕಿವಿಗೆ ಎಣ್ಣೆ ಬಿಡುವಾಗ ತಣ್ಣಗಿರುವ ಅಥವಾ ತೀರ ಬಿಸಿಯಾಗಿರುವ ಎಣ್ಣೆ ಹಾಕಲೇ ಬಾರದು. ಸುಖೋಷ್ಠವಾದ ತೈಲವನ್ನು ಹಾಕಬೇಕು.
ಇದನ್ನು ಓದಿ: ಊಟದ ಬಳಿಕ ಮಾಡಬಾರದ 4 ಕಾರ್ಯಗಳು