ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಮಬಾಣ; ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿ

ಇತ್ತೀಚೆಗೆ ಮಧುಮೇಹ ಸಾಮಾನ್ಯ ಕಾಯಿಲೆಯಾಗಿದ್ದು, ಜೀವನಶೈಲಿ, ಸಮರ್ಪಕ ದೈಹಿಕ ಚಟುವಟಿಕೆಗಳ ಕೊರತೆ ಹೀಗೆ ನಾನಾ ಕಾರಣಗಳಿಂದ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದ್ದು, ಯುವಕರು ಕೂಡ ದೀರ್ಘಕಾಲದ ಶುಗರ್‌ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ ಸಕ್ಕರೆ ಕಾಯಿಲೆಗಳನ್ನು ಯೋಗಾಸನಗಳ…

diabetes

ಇತ್ತೀಚೆಗೆ ಮಧುಮೇಹ ಸಾಮಾನ್ಯ ಕಾಯಿಲೆಯಾಗಿದ್ದು, ಜೀವನಶೈಲಿ, ಸಮರ್ಪಕ ದೈಹಿಕ ಚಟುವಟಿಕೆಗಳ ಕೊರತೆ ಹೀಗೆ ನಾನಾ ಕಾರಣಗಳಿಂದ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದ್ದು, ಯುವಕರು ಕೂಡ ದೀರ್ಘಕಾಲದ ಶುಗರ್‌ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಆದರೆ ಸಕ್ಕರೆ ಕಾಯಿಲೆಗಳನ್ನು ಯೋಗಾಸನಗಳ ಮೂಲಕ ಕಂಟ್ರೋಲ್‌ ಮಾಡಬಹುದು. ವಿಪರೀತ ಕರಣಿ ಆಸನ, ಬದ್ಧಕೋನಾಸನ, ಪಶ್ಚಿಮೋತ್ಥಾನಾಸನ, ಸಲಂಭ ಸರ್ವಾಂಗಾಸನ ಮತ್ತು ಸುಪ್ತ ಮತ್ಸ್ಯೇಂದ್ರಾಸನವನ್ನು ನಿಯಮಿತವಾಗಿ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು.

ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿ:

Vijayaprabha Mobile App free

diabetes vijayaprabha news

ಇನ್ನು, ಮಧುಮೇಹಕ್ಕೆ ಒಳಗಾಗಿರುವವರು ಹಸಿರು ಸೊಪ್ಪು, ತರಕಾರಿ, ಹಣ್ಣು, ಕಾಳು, ಮೀನು ಮತ್ತು ಬೇಳೆ ಬಳಸಿ ತಯಾರಿಸಿದ ಸಮೃದ್ಧವಾದ ಉಪಾಹಾರವನ್ನು ಸೇವಿಸಬೇಕು.

ಇಡ್ಲಿಗೆ ಕ್ಯಾರೆಟ್ ಅಥವಾ ಬೀಟ್ರೂಟ್ ತುರಿ ಸೇರಿಸುವುದು ಉತ್ತಮ. ವಿವಿಧ ರೀತಿಯ ಬೇಳೆಕಾಳುಗಳನ್ನು ಸೇರಿಸಿ ವಡೆ ತಯಾರಿಸಿ. ಇದಕ್ಕೆ ಕ್ಯಾರೆಟ್, ಸೊಪ್ಪನ್ನು ಬೆರೆಸಿದರೆ ಇನ್ನೂ ಚೆನ್ನಾಗಿರುತ್ತದೆ.

ಪೂರಿ ತಿನ್ನುವ ಬದಲು ಮೆಂತ್ಯ ಸೊಪ್ಪನ್ನು ಬೆರೆಸಿ ಚಪಾತಿ ಮಾಡಿ. ಮೊಟ್ಟೆ ಹಾಗೂ ಬ್ರೌನ್ ಬ್ರೆಡ್ ಜೊತೆ ಮಾಡಿಕೊಂಡು ಸೇವಿಸಿ.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯನ್ನು ಜಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

ಮಧುಮೇಹ ಅಥವಾ ಬಿಪಿ ಸಮಸ್ಯೆ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಹಿ ಬೇವಿನ ಒಂದು ಎಲೆಯನ್ನು ಜಗಿಯಿರಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.