ಎದೆ ಹಾಲು ಹೆಚ್ಚಿಸಲು ಮೆಂತ್ಯೆ ಸೊಪ್ಪು ಸಹಕಾರಿ:
ಮಗುವಿಗೆ ಹಾಲುಣಿಸುವ ತಾಯಂದಿರ ಎದೆಹಾಲು ಹೆಚ್ಚಿಸಲು ಮೆಂತ್ಯ ಸಸ್ಯವು ಸಹಕಾರಿಯಾಗಿದೆ. ಮೆಂತ್ಯವನ್ನು ಗಿಡಮೂಲಿಕೆ ಚಹಾದಲ್ಲಿ ಬಳಸಲಾಗುತ್ತಿದ್ದು, ಈ ಸೊಪ್ಪನ್ನು ಮಿತವಾಗಿ ಬಳಸಿದಾಗ ಸುರಕ್ಷಿತವೆಂದು ಹೇಳಲಾಗುತ್ತದೆ.
ಮುಟ್ಟಿನ ತೊಂದರೆ ಇದ್ದರೆ, ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಗೆ, ಪೌಷ್ಠಿಕಾಂಶದ ಮೂಲಿಕೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಫೆನ್ನೆಲ್ ಸಸ್ಯ ಜನ್ಯವು ತಾಯಂದಿರ ಎದೆಹಾಲು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೆಂತೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು:
★ ಮೆಂತ್ಯೆ ಸೊಪ್ಪು ಹೃದಯದ ಆರೋಗ್ಯವನ್ನು ಕಾಪಾಡುವುದಲ್ಲದೆ, ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ
★ ಮೆಂತ್ಯೆ ಸೊಪ್ಪು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುವುದಲ್ಲದೆ, ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
★ಮೆಂತ್ಯೆ ಸೇವನೆಯಿಂದ ಪಿತ್ತಜನಕಾಂಗದ ಸಮಸ್ಯೆಗಳನ್ನು ತಡೆಯುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುವುದಲ್ಲದೆ, ಚರ್ಮವನ್ನು ಪ್ರಕಾಶಮಾನಗೊಳಿಸುತ್ತದೆ.
★ ಮೆಂತ್ಯೆ ಸೊಪ್ಪು ಮಧುಮೇಹವನ್ನು ನಿಯಂತ್ರಿಸುವುದಲ್ಲದೆ, ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.