ದಪ್ಪ ಆಗಲು ಡ್ರೈಫ್ರೂಟ್ಸ್ ಸೇವಿಸಿ:
ಕಡಲೆ ಬೀಜ: ಇದರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ & ಕ್ಯಾಲೋರಿ ಅಂಶವಿದ್ದು, ಬಹಳ ವೇಗವಾಗಿ ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.
ಒಣದ್ರಾಕ್ಷಿ: ಇದರಲ್ಲಿ ತಾಮ್ರದ ಅಂಶ, ಮೆಗ್ನೀಷಿಯಂ, ಮ್ಯಾಂಗನೀಸ್, ವಿಟಮಿನ್ ಅಂಶ ಹೆಚ್ಚಾಗಿ ಸಿಗುವ ಕಾರಣ, ಇದರ ಸೇವನೆಯಿಂದ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ.
ಬಾದಾಮಿ: ದೇಹದ ತೂಕ ಹೆಚ್ಚಾಗಲು ಬಾದಾಮಿ ಸಹಕಾರಿಯಾಗಿದ್ದು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ವಿಟಮಿನ್ ಸಿ ಹೆಚ್ಚು ಸೇವಿಸದಿರಿ:
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಬಹಳ ಮುಖ್ಯ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದರ ಸೇವನೆ ಹೆಚ್ಚಾದರೆ ಅದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹೌದು ವಿಟಮಿನ್ ಸಿ ಹೆಚ್ಚು ಸೇವಿಸಿದರೆ ವಾಂತಿ, ಹೊಟ್ಟೆನೋವು, ತಲೆನೋವು ಹಾಗೂ ನಿದ್ರಾಹೀನತೆ ಸಮಸ್ಯೆಗಳು ಕಾಡುತ್ತದೆ. ವಿಟಮಿನ್ ಸಿ ಮಾತ್ರೆಗಳನ್ನು ಊಟಕ್ಕೆ ಪರ್ಯಾಯವಾಗಿ ಸೇವಿಸುವುದು ಒಳ್ಳೆಯದಲ್ಲ. ಇನ್ನು ಗ್ಯಾಸ್ಟ್ರಿಕ್ ಸಮಸ್ಯೆ ಹೊಂದಿರುವವರು ವಿಟಮಿನ್ ಸಿ ಸೇವಿಸಿದರೆ ಎದೆಯುರಿ ಅಸ್ವಸ್ಥತೆಗೆ ಕಾರಣವಾದೀತು.
ಇದನ್ನು ಓದಿ: ತೂಕ ಕಡಿಮೆಗೆ ಗುಲಾಬಿ ಸಹಕಾರಿ; ಲವಂಗ ಟೀ ಸೇವನೆಯಿಂದ ಮೂಳೆಗಳ ಅರೋಗ್ಯ ಸುಧಾರಣೆ