ಕೆಲವರು ಡಯೆಟ್ ಕಾರಣಕ್ಕೋ, ಹಸಿವಾಗದಿರುವುದಕ್ಕೋ ಮುಂಜಾನೆಯ ಉಪಹಾರವನ್ನು ಸೇವಿಸುವುದಿಲ್ಲ. ಬೆಳಿಗ್ಗೆ ಯಾವುದೇ ಕಾರಣಕ್ಕೂ ಬ್ರೇಕ್‌ಫಾಸ್ಟ್ ತಪ್ಪಿಸಬಾರದು. ತಪ್ಪಿಸಿದರೆ ನಾನಾ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ರೆ ಬೆಳಗಿನ ಉಪಾಹಾರ ಸೇವಿಸದೇ ಇದ್ದರೆ ಅನೇಕ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು.
ಬೆಳಗಿನ ಉಪಾಹಾರ ತ್ಯಜಿಸುವುದರಿಂದ ಮೈಗ್ರೇನ್ ಸಮಸ್ಯೆ ಬರಬಹುದು.
ಹದಿಹರೆಯದವರು ಬೆಳಗಿನ ಉಪಾಹಾರವನ್ನು ತ್ಯಜಿಸುವುದು ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.
ರಕ್ತಹೀನತೆಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಹೆಚ್ಚು.
ಹೃದ್ರೋಗ ಮತ್ತು ಹೃದಯಾಘಾತದ ಸಾಧ್ಯತೆಗಳು ಇವೆ.
ಬೆಳಗಿನ ಉಪಾಹಾರ ಸೇವಿಸುವುದರಿಂದ ಈ ಆರೋಗ್ಯ ಸಮಸ್ಯೆ ತಪ್ಪಿಸಬಹುದು..!
ಹೃದಯದ ತೊಂದರೆಗಳು ಉಂಟಾಗುವುದಿಲ್ಲ,
ಚಯಾಪಚಯವು ಸಮತೋಲಿತವಾಗಿರುತ್ತದೆ.
ಆರೋಗ್ಯಕರ ತೂಕಕ್ಕೆ ಸಹಕಾರಿ.
ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ರಕ್ತದೊತ್ತಡದ ಮಟ್ಟವನ್ನು ಸ್ಥಿರವಾಗಿಡಲು ಸಹಕಾರಿ.
ಡ್ರೈಫ್ರೂಟ್ಸ್, ಮೊಳಕೆಬಂದ ಕಾಳುಗಳನ್ನು ತಿನ್ನುವುದು ಸಹ ಒಳ್ಳೆಯದು.