ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಬದಲಾವಣೆಯಿಂದಾಗಿ ಹೃದಯದ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿದ್ದು, ಹೃದಯಾಘಾತ ಬರುವ ಮೊದಲೇ ಕೆಲವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ.
ಅದನ್ನು ತಿಳಿದುಕೊಂಡರೆ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಬಹುದು. ಹೃದಯ ಸ್ನಾಯುವಿನ ಒಂದು ಬಾಗವು ಸಾಕಷ್ಟು ರಕ್ತ ಪಡೆಯಲು ಸಾಧ್ಯವಾಗದೇ ಇದ್ದಾಗ ಹೃದಯಾಘಾತ ಸಂಭವಿಸುತ್ತೆದೆ. ಅಧಿಕ ರಕ್ತದೋತ್ತಡ ಮತ್ತು ಕೊಲೆಸ್ಟ್ರಾಲ್ ಇರುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ.
Heart Attack ಆದಾಗ ಏನ್ ಮಾಡಬೇಕು?
★ ಸಮೀಪದ ಆಸ್ಪತ್ರೆಗೆ ಕರೆ ಮಾಡಿ, Ambulance ವ್ಯವಸ್ಥೆ ಮಾಡಿಕೊಳ್ಳಿ
★ ರೋಗಿಗೆ ಆಸ್ಪಿರಿನ್ ಮಾತ್ರೆ ಕೊಟ್ಟು ಚೀಪಲು ಹೇಳಿ
★ ಆಸ್ಪಿರಿನ್ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ
★ ರೋಗಿ ಪ್ರಜ್ಞೆ ಕಳೆದುಕೊಂಡರೆ CPR (ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ ) ನೀಡುವ ಕ್ರಮ ಅನುಸರಿಸಿ
★ CPR ಅಂದರೆ ಒಂದು ಹಸ್ತದ ಹಿಂಭಾಗದಲ್ಲಿ ಇನ್ನೊಂದನ್ನು ಇರಿಸಿ ರೋಗಿಯ ಎದೆಯ ನಡುಭಾಗವನ್ನು ನಿಧಾನವಾಗಿ ಒತ್ತುವ ಪ್ರಕ್ರಿಯೆ