ಬೇಸಿಗೆಯ ದಿನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸಿಕೊಳ್ಳುವ ವಂತಹದು ಬೆವರು ಸಾಲೆ. ಇದು ಸೌಂದರ್ಯ ವರ್ಧಕ ವಾದರೂ ತಪ್ಪಲ್ಲ. ಚರ್ಮದ ಮೇಲೇಳುವ ಈ ಗುಳ್ಳೆಗಳು ಕೆರೆತ ವನ್ನುಂಟು ಮಾಡುತ್ತವೆ. ಬೆವರು ಗ್ರಂಥಿಗಳು ಸರಿಯಾಗಿ ಕೆಲಸ ಮಾಡಿದ್ರೆ ಈ ಬೆವರುಸಾಲೆ ಗಳು ಹುಟ್ಟಿಕೊಳ್ಳುತ್ತವೆ. ಬಿಸಿಲು ಹಾಗೂ ತೇವಾಂಶಭರಿತ ವಾತಾವರಣಕ್ಕೆ ಅತಿಯಾಗಿ ಮೈಯೊಡ್ಡಿದಾಗ ಇದು ಹುಟ್ಟುವ ಸಂಭವ ಹೆಚ್ಚು.
ಅವುಗಳ ನಿವಾರಣೆಗೆ ಯಾವುದೇ ಅಲೋಪಥಿಕ್ ಔಷಧ ಸೇವನೆ ಬೇಡ. ಊಟದಲ್ಲಿ ಹೆಚ್ಚಿಗೆ ಹಸಿರು ತರಕಾರಿ ಸೊಪ್ಪನ್ನು ಉಪಯೋಗಿಸಬೇಕು.
ಒಳ್ಳೆಯ ವಾತಾವರಣದಲ್ಲಿ ಅಲೆದಾಡಬೇಕು, ದಿನಾಲೂ ‘ಸಿ’ ಜೀವಸತ್ವದ ಪದಾರ್ಥ ಸೇವನೆ ಉಪಯುಕ್ತ ನಿಂಬೆ ಹಣ್ಣಿನ ಪಾನಕ ಸೇವನೆ ಒಳ್ಳೆಯದು. ಪೈನಾಪಲ್ ರಸದೊಡನೆ ಎಳೆನೀರನ್ನು ಸೇರಿಸಿ ಸೇವಿಸಿ.
ವಿಪರೀತ ಬೆವರು ಸಾಲೆಯಾದಾಗ ಸ್ನಾನದಲ್ಲಿ ಯಾವುದೇ ಸೋಪನ್ನು ಬಳಸಬೇಡಿ, ಅನ್ನ ಮಾಡುವ ಮುಂಚೆ ಅಕ್ಕಿ ತೊಳೆದ ನೀರನ್ನು ತೆಗೆದುಕೊಂಡು ಚನ್ನಾಗಿ ಬೆವರುಸಾಲೆಗೆ ತಿಕ್ಕಿ ತೊಳೆಯಿರಿ.
ಶ್ರೀಗಂಧದ ಪುಡಿಗೆ ರೋಸ್ ವಾಟರ್ ಬೆರೆಸಿ ಪೇಸ್ಟನ್ನು ಬೆವರು ಸಾಲೆಯಾದ ಭಾಗಗಳಿಗೆ ಹಚ್ಚಿ, ಜೋಳದ ಗಂಜಿ ರೋಜ ವಾಟರ್ ಸೇರಿಸಿ ಬೆವರು ಸಾಲೆಗೆ ಹಚ್ಚಿ ನಂತರ ತಣ್ಣೀರಿನಿಂದ ತೊಳೆಯಿರಿ.
ಸ್ನಾನ ಮಾಡುವಾಗ ಕುದಿಯುವ ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಸ್ನಾನ ಮಾಡಿರಿ, ಕೋಮಲವಾದ ವಸ್ತ್ರದಿಂದ ಒರೆಸಿಕೊಂಡು ನಂತರ ಜೀರಿಗೆಯನ್ನು ಪುಡಿಮಾಡಿ ಶುದ್ಧವಾದ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಅದನ್ನು ಬೆವರು ಸಾಲೆಗೆ ಲೇಪಿಸಿ, ಹೀಗೆ ಚರ್ಮದ ಪದರನ್ನು ನಯಗೊಳಿಸು ಬೆವರುಸಾಲೆ ಗಳು ಕಡಿಮೆಯಾಗುವ.
ಸಾಮಾನ್ಯವಾಗಿ ಬೆವರುಸಾಲೆ ಆದರೆ ಅದರ ಕೆರೆತವನ್ನು ಸಹಿಸಲಾಗದಾಗ ಉಗುರಿನಿಂದ ಕೆರೆದುಕೊಳ್ಳುವುದು ವಾಡಿಕೆ, ದಯವಿಟ್ಟು ಹಾಗೆ ಮಾಡದಿರಿ, ಕೆರೆತದಿಂದ ರಕ್ತಸಿಕ್ತ ವಾಗಬಹುದು. ಉಗುರು ನಂಜಿನಿಂದ ಗಾಯವಾಗಬಹುದು. ಅದಕ್ಕಾಗಿ ಬೆವರುಸಾಲೆ ಸಾಮಾನ್ಯವಾಗಿ ಸರ್ವರಿಗೂ ಬರಬಹುದಾದ ಒಂದು ಕಾಲಮಾನದ ವೈಪರಿತ್ಯ ನಾವೆಂದಾದರೂ ಅದನ್ನು ಅಸಡ್ಡೆ ಮಾಡುವುದು ಬೇಡ.
ಇದನ್ನು ಓದಿ: ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬೇಕೇ? ಸುಕ್ಕು ಬರದಂತೆ ಚರ್ಮವನ್ನು ರಕ್ಷಿಸಿಕೊಳ್ಳಲು ಹೀಗೆ ಮಾಡಿ