ಮೂಲಂಗಿ ಉಪಯೋಗಗಳು:-
1) ಹಸಿ ಮೂಲಂಗಿ ಹುಳುಗಳಿಗೆ ಕಾಳು ಮೆಣಸಿನ ಪುಡಿ, ಉಪ್ಪು ಪುಡಿ ಮತ್ತು ನಿಂಬೆ ರಸವನ್ನು ಮಿಶ್ರಮಾಡಿ ತಿಂದರೆ ದೃಷ್ಟಿಮಾಂದ್ಯ, ಕಾಮಾಲೆ, ಅಜೀರ್ಣ, ಮಲಬದ್ಧತೆ ನಿವಾರಣೆಯಾಗುತ್ತದೆ.
2)ಹಸಿಯಾದ ಮೂಲಂಗಿಯನ್ನು ತುರಿದು ಉಪ್ಪು, ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
3) ಹಸಿ ಮೂಲಂಗಿಯನ್ನು ಊಟದ ಜೊತೆಯಲ್ಲಿ ಉಪಯೋಗಿಸುವುದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
ಕೆಂಪು ಮೂಲಂಗಿ ಉಪಯೋಗಗಳು:-
1) ಕೆಂಪು ಮೂಲಂಗಿ ಜ್ಯೂಸ್ ತೆಗೆದು ಅದಕ್ಕೆ ನಿಂಬೆರಸ ಮತ್ತು ಸಕ್ಕರೆ ಹಾಕಿ ಸೇವಿಸುತ್ತಾ ಬಂದರೆ ಕೆಮ್ಮು, ದಮ್ಮು, ಸಂಧಿವಾತ ರೋಗಗಳು ಗುಣವಾಗುವುವು.
2) ಕೆಂಪು ಮೂಲಂಗಿ ಹಲ್ವ ಮಾಡಿಕೊಂಡು ತಿಂದರೆ ವೀರ್ಯದ ವೃದ್ಧಿಯಾಗಿ ಸಂಭೋಗ ಶಕ್ತಿ ಹೆಚ್ಚುತ್ತದೆ.
3) ಹಸಿ ಕೆಂಪು ಮೂಲಂಗಿಯನ್ನು ಅಗಿದು ತಿನ್ನುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತವೆ ಹಾಗೂ ವಸಡು ಗಳಿಂದ ಉಂಟಾಗುವ ರಕ್ತಸ್ರಾವ ನಿಂತು ಹೋಗುತ್ತದೆ.
4) ಹೆಚ್ಚಾಗಿ ಕೆಂಪು ಮೂಲಂಗಿಯನ್ನು ಸೇವಿಸುತ್ತಿದ್ದರೆ ಅಜೀರ್ಣ ಉಂಟಾಗುವ ಭಯವಿರುವುದಿಲ್ಲ.
ಇದನ್ನು ಓದಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೋಳ್ಳಲು ಸೌತೆಕಾಯಿ ಮತ್ತು ಪಡವಲಕಾಯಿಯ ಪ್ರಯೋಜನಗಳೇನು ಗೊತ್ತೇ?