ಬೂದುಕುಂಬಳಕಾಯಿ ಉಪಯೋಗಗಳು:-
1) ಬೂದು ಕುಂಬಳಕಾಯಿ ಮಜ್ಜಿಗೆ ಹುಳಿಯನ್ನು ದಿನವೂ ಆಹಾರದೊಂದಿಗೆ ಸೇವಿಸುವುದರಿಂದ ಶರೀರದ ಅತಿ ಉಷ್ಯ ಅಂಗೈ ಅಂಗಾಲು ಉರಿ, ಕಣ್ಣುರಿ, ಮೂತ್ರದಲ್ಲಿ ಉರಿಯನ್ನು ಉಪಶಮನ ಗೊಳಿಸುವುದು.
2) ಬೂದು ಕುಂಬಳಕಾಯಿ ಕೂಷ್ಮಾಂಡ ಲೇಹ್ಯ ವನ್ನು ದಿನವೂ ಹಾಲಿನೊಂದಿಗೆ ಕ್ರಮವಾಗಿ ಸೇವಿಸುತ್ತಾ ಬಂದರೆ ಮೈತೂಕ ಹೆಚ್ಚಿನ ತೆಳ್ಳಗಿರುವವರು ದಪ್ಪಗಾಗುತ್ತಾರೆ.
ಸಿಹಿ ಕುಂಬಳಕಾಯಿ ಉಪಯೋಗಗಳು:-
1) ಮಧುಮೇಹ ರೋಗಿಗಳಿಗೆ ಇದೊಂದು ಉತ್ತಮ ಮದ್ದು. ಅದನ್ನು ಆಹಾರದೊಂದಿಗೆ ಸೇವಿಸುತ್ತಾ ಬಂದರೆ ಮೂತ್ರದಲ್ಲಿಯ ಸಕ್ಕರೆ ಅಂಶ ಕಡಿಮೆಯಾಗುತ್ತದೆ.
2) ಬೊಜ್ಜು ದೇಹದವರು ಸಿಹಿ ಕುಂಬಳಕಾಯಿಯನ್ನು ಅಡಿಗೆಯಲ್ಲಿ ಸೇವಿಸುವುದರಿಂದ ಅವರ ಮೈ ತೂಕ ಕಡಿಮೆಯಾಗುತ್ತದೆ.
3) ಕಜ್ಜಿ ಇಸುಬು ಮೊದಲಾದ ಚರ್ಮವ್ಯಾಧಿ ಉಳ್ಳವರು ಸಿಹಿ ಕುಂಬಳ ಚಿಗುರೆಲೆಗಳನ್ನು ತಂದು ಜಜ್ಜಿ ರಸ ಹಿಂಡಿ ಆ ರಸವನ್ನು ಕಜ್ಜಿ ಇಸುಬು ಗಳ ಮೇಲೆ ದಿನವೂ ಲೇಪಿಸಿದರೆ ಚರ್ಮರೋಗ ನಿವಾರಣೆಯಾಗುತ್ತದೆ.
ಇದನ್ನು ಓದಿ: ಮನೆಯಲ್ಲಿ ಏಲಕ್ಕಿ ಮತ್ತು ಲವಂಗ ಇದ್ರೆ, ಎಷ್ಟೆಲ್ಲಾ ಕಾಯಿಲೆಗಳನ್ನು ನಿಯಂತ್ರಿಸಬಹುದು ಗೊತ್ತೇ..?