ಪ್ರತಿದಿನ ಜೇನುತುಪ್ಪ ಸೇವಿಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಾಗುವ ಪ್ರಯೋಜನಗಳೇನು ಗೊತ್ತಾ…?

ಜೇನುತುಪ್ಪದ ಪ್ರಯೋಜನಗಳು:- 1)ಜೇನುತುಪ್ಪದ ಸೇವಿಸುವುದರಿಂದ ಕಣ್ಣಿಗೆ ಹಿತವಾಗುತ್ತದೆ ಅಲ್ಲದೆ ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. 2) ದಿನ ಎರಡು ಚಮಚ ಜೇನು ತುಪ್ಪವನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುವುದು ಮತ್ತು ಶರೀರದಲ್ಲಿ ನರಗಳಿಗೆ ಹೆಚ್ಚು ಬಲ ಬರುವುದು. 3)…

Honey

ಜೇನುತುಪ್ಪದ ಪ್ರಯೋಜನಗಳು:-

1)ಜೇನುತುಪ್ಪದ ಸೇವಿಸುವುದರಿಂದ ಕಣ್ಣಿಗೆ ಹಿತವಾಗುತ್ತದೆ ಅಲ್ಲದೆ ಬುದ್ಧಿಶಕ್ತಿ ವೃದ್ಧಿಯಾಗುತ್ತದೆ.

2) ದಿನ ಎರಡು ಚಮಚ ಜೇನು ತುಪ್ಪವನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುವುದು ಮತ್ತು ಶರೀರದಲ್ಲಿ ನರಗಳಿಗೆ ಹೆಚ್ಚು ಬಲ ಬರುವುದು.

Vijayaprabha Mobile App free

3) ಜೇನುತುಪ್ಪವನ್ನು ನಿಯಮಿತವಾಗಿ ಪ್ರತಿನಿತ್ಯವೂ ಉಪಯೋಗಿಸುವುದರಿಂದ ಕಫ ನಿವಾರಣೆಯಾಗುವುದು.

4) ಹಾಲಿನೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಆಯುಷ್ಯ ಪ್ರಮಾಣ ಹೆಚ್ಚಾಗುವುದು.

5) ರಾತ್ರಿ ವೇಳೆ ಮಲಗುವ ಸಮಯದಲ್ಲಿ ಮೂರು ಟೀ ಚಮಚ ಜೇನು ತುಪ್ಪವನ್ನು ಪ್ರತಿದಿನ ಸೇವಿಸುತ್ತಿದ್ದರೆ ಬಹುಮೂತ್ರ ರೋಗ ಗುಣವಾಗುವುದು

6) ಜೇನುತುಪ್ಪ ವನ್ನು ಕ್ರಮವಾಗಿ ಸೇವಿಸಿದರೆ ಕ್ಷಯರೋಗಿಗಳ ಮತ್ತು ಮಧುಮೇಹ ರೋಗಿಗಳ ಶಾರೀರಿಕ ಕ್ರಿಯೆ ಸಲೀಸಾಗಿ ರೋಗ ಉಲ್ಬಣವಾಗುವುದಿಲ್ಲ,

7) ದಡೂತಿ ಶರೀರದವರು ನಾಲ್ಕು ಟೀ ಚಮಚ ಹಳೆಯದಾದ ಜೇನುತುಪ್ಪ ವನ್ನು ಸೇವಿಸಿದರೆ ಶರೀರದ ತೂಕ ಇಳಿಯುವುದು, ದೈಹಿಕ ಶಕ್ತಿ ಹೆಚ್ಚಾಗುವುದು ಮತ್ತು ನರಗಳಲ್ಲಿ ಹೊಸ ಚೈತನ್ಯ ಉಂಟಾಗುವುದು.

8) ಬಾಯಿ ಹುಣ್ಣಿಗೆ ಜೇನುತುಪ್ಪ ವನ್ನು ಎರಡು ದಿನಗಳವರೆಗೆ ಹಚ್ಚುವುದರಿಂದ ಬೇಗನೆ ಗುಣವಾಗುವುದು.

9) ಜೇನುತುಪ್ಪವನ್ನು ಸುಟ್ಟ ಗಾಯಕ್ಕೆ ಹಚ್ಚುತ್ತಿದ್ದರೆ ಉರಿ ಕಡಿಮೆಯಾಗಿ ಗಾಯ ಬೇಗ ವಾಸಿಯಾಗುವುದು.

10) ಜೇನುತುಪ್ಪ ವನ್ನು ಪ್ರತಿನಿತ್ಯವೂ ಸೇವಿಸುವುದರಿಂದ ಅನಿರೀಕ್ಷಿತ ವೀರ್ಯ ಸ್ವಲನವಾಗುವುದಿಲ್ಲ, ತೃಪ್ತಿಯಿಂದ ಸಂಭೋಗ ಸುಖ ಪಡೆಯಬಹುದು,

11) ತುಳಸಿ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಮೂರು ದಿನಗಳ ಕಾಲ ಮಕ್ಕಳಿಗೆ ಕುಡಿಯುವುದರಿಂದ ಕೆಮ್ಮು ಮತ್ತು ಜ್ವರದ ನಿವಾರಣೆಯಾಗುತ್ತದೆ.

12) ಸುಣ್ಣ ಮತ್ತು ಜೇನು ತುಪ್ಪವನ್ನು ಕಲಸಿ ಉಳುಕಿದ ಭಾಗಕ್ಕೆ , ಊತ ದಿಂದ ನೋಯುತ್ತಿರುವ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗಿ ಊತ ಇಳಿಯುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.