ಏಲಕ್ಕಿಯ ಔಷದಿಯ ಗುಣಗಳು:-
1) ಏಲಕ್ಕಿ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಅದಕ್ಕೆ ಜೇನುತುಪ್ಪ ಸೇರಿಸಿಕೊಂಡು ದಿನವೂ ಕುಡಿಯುತ್ತಿದ್ದರೆ ಉರಿಮೂತ್ರ ನಿವಾರಣೆಯಾಗಿ ಲೈಂಗಿಕ ಆಸಕ್ತಿ ಹೆಚ್ಚಾಗುವುದು.
2) ಏಲಕ್ಕಿ ಕಾಳುಗಳನ್ನು ಅಗಿಯುವುದರಿಂದ ಬಾಯಿಯ ದುರ್ನಾತ ದೂರವಾಗುವುದು ಮತ್ತು ತಿಂದ ಆಹಾರ ಚೆನ್ನಾಗಿ ಜೀರ್ಣವಾಗುವುದು.
3) ಟೀಯಲ್ಲಿ ಏಲಕ್ಕಿ ಪುಡಿಯನ್ನು ಹಾಕಿಕೊಂಡು ಕುಡಿಯುವುದರಿಂದ ಆಮಶಂಕೆ, ಅತಿಸಾರ ಮತ್ತು ಉರಿಮೂತ್ರದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುವುದು.
ಲವಂಗದ ಔಷದಿಯ ಗುಣಗಳು:-
1. ಲವಂಗವನ್ನು ಕಲ್ಲುಪ್ಪಿನ ಜೊತೆಯಲ್ಲಿ ಕೂಡಿಸಿ ಕಚ್ಚಿ ಚಪ್ಪರಿಸುವುದರಿಂದ ಅದರ ನೀರನ್ನು ಸ್ವಲ್ಪ ಸ್ವಲ್ಪವೇ ಗುಟುಕರಿಸುವುದರಿಂದ ಗಂಟಲು ಕೆರೆತ, ಕೆಮ್ಮು ನಿವಾರಣೆಯಾಗುತ್ತದೆ ಹಾಗೂ ಜೀರ್ಣಶಕ್ತಿ ಹೆಚ್ಚುವುದು.
2) ಲವಂಗದ ಕಷಾಯ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಉಪಶಮನವಾಗುವುದು.
3) ಹುಳುಕು ಹಲ್ಲಿಗೆ ಲವಂಗದ ಎಣ್ಣೆ ಹನಿಗಳನ್ನು ಬಿಡುವುದರಿಂದ ಅಥವಾ ಲವಂಗದ ಎಣ್ಣೆಯನ್ನು ಹತ್ತಿಯಲ್ಲಿ ನೆನೆಸಿ ನೋವಿನ ಹಲ್ಲು ಹಚ್ಚಿಕೊಂಡಿದ್ದಾರೆ ನೋವು ಕೂಡಲೇ ನಿವಾರಣೆಯಾಗುವುದು.
4) ಲವಂಗವನ್ನು ಬಾಯಲ್ಲಿಟ್ಟುಕೊಂಡು ಅಗೆಯುತ್ತಿದ್ದಾರೆ ಬಾಯಿಯ ದುರ್ನಾತ ದೂರವಾಗುವುದು ಹಾಗೂ ವಸಡು ನೋವು ಉಂಟಾಗುವುದಿಲ್ಲ.
ಇದನ್ನು ಓದಿ: ಉಪ್ಪು ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಬೇಕು; ಉಪ್ಪಿನ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾದ್ರೆ ಬಳಸೋಕೆ ಶುರು ಮಾಡ್ತೀರಾ