ಬೆಣ್ಣೆಯ ಅದ್ಬುತ ಉಪಯೋಗಗಳು:-
1) ಬೆಣ್ಣೆಯನ್ನು ತಿಂದರೆ ಆಯಾಸ ಪರಿಹಾರವಾಗುತ್ತದೆ, ಕೆಮ್ಮು ಮತ್ತು ಬಾಯಾರಿಕೆ ಹೋಗುವುದು.
2) ಬೆಣ್ಣೆಯಿಂದ ಕಣ್ಣುಕಪ್ಪು ಮಾಡಿ ಪ್ರತಿದಿನ ಕಣ್ಣಿಗೆ ಹಚ್ಚುವುದರಿಂದ ಕಣ್ಣಿನ ನೋವು ಇಲ್ಲವಾಗುತ್ತದೆ.
3) ಕೂದಲಿಗೆ ಬೆಣ್ಣೆಯನ್ನು ಹಚ್ಚಿ ತಿಕ್ಕುವುದರಿಂದ ಅಪ್ರಾಪ್ತ ವಯಸ್ಸಿನ ಕೂದಲು ನೆನೆಯುವುದಿಲ್ಲ ಮತ್ತು ಕೂದಲಿನ ಕಾಂತಿ ಹೆಚ್ಚುವುದು.
4) ಹಸುವಿನ ತಾಜಾ ಬೆಣ್ಣೆ ತಿಂದರೆ ಕೆಮ್ಮು, ದಮ್ಮು ಮತ್ತು ಕ್ಷಯ ರೋಗಗಳು ನಿವಾರಣೆಯಾಗುವುದು.
5) ತಾಜಾ ಬೆಣ್ಣೆ ಸೇವನೆಯಿಂದ ಮೂಲವ್ಯಾಧಿ ವಾಸಿಯಾಗುವುದು.
ತುಪ್ಪದ ಅದ್ಬುತ ಉಪಯೋಗಗಳು:-
1) ಹಳೆಯ ತುಪ್ಪಕ್ಕೆ ಇಂಗನ್ನು ಬೆರೆಸಿ ಮೂರ್ಛಿತರಾದವರು ಮತ್ತು ಉನ್ಮಾದದಿಂದ ಬಡಬಡಿಸುವವರಿಗೆ ಮೂಸಿದರೆ ತಕ್ಷಣ ಗುಣವಾಗುತ್ತಾರೆ.
2) ಒಂದು ಚಮಚ ಹಸುವಿನ ತುಪ್ಪವನ್ನು ಕೋಳಿ ಮೊಟ್ಟೆಯೊಂದಿಗೆ ಬೆರೆಸಿ, ಬಿಳಿ ಈರುಳ್ಳಿ ರಸ ಒಂದು ಚಮಚ ಮತ್ತು ಜೇನುತುಪ್ಪ ಒಂದು ಚಮಚ ಎಲ್ಲವನ್ನು ಮಿಶ್ರ ಮಾಡಿ ಪ್ರತಿದಿನ ಬೆಳಿಗ್ಗೆ ಕುಡಿದರೆ ಲೈಂಗಿಕ ಸಾಮರ್ಥ್ಯ ಅಧಿಕವಾಗುವುದು.
3) ಅಂಗೈ, ಅಂಗಾಲು ಉರಿಯುತ್ತಿದ್ದರೆ ತುಪ್ಪವನ್ನು ಹಚ್ಚಿ ತಿಕ್ಕುವುದರಿಂದ ಉರಿ ನಿಲ್ಲುವುದು.
4) ಅಪ್ಪಟ ಹಸುವಿನ ತುಪ್ಪ ಕರಿ ಎಳ್ಳು, ಅರಿಶಿನ ಮತ್ತು ಬೇವಿನ ಸೊಪ್ಪನ್ನು ಅರೆದು ಗಾಯಕ್ಕೆ ಹಚ್ಚುವುದರಿಂದ ಗಾಯಗಳು ಬೇಗ ವಾಸಿಯಾಗುವುದು.
ಇದನ್ನು ಓದಿ: ಹಲವು ಸಮಸ್ಯೆಗಳಿಗೆ ರಾಮಬಾಣದ ಹರಳೆಣ್ಣೆಯ ಔಷಧೀಯ ಗುಣಗಳು