ಅರೋಗ್ಯ ಮಾಹಿತಿ: ಈ ಸೊಪ್ಪನ್ನು ಉಪಯೋಗಿಸಿ ಹಲವು ರೋಗಗಳಿಂದ ಮುಕ್ತರಾಗಿ!

ನುಗ್ಗೆ ಸೊಪ್ಪನ್ನು ಉಪಯೋಗಿಸುವುದರಿಂದ ಸಿಗುವ ಉಪಯೋಗಗಳು:- 1) ನುಗ್ಗೆ ಸೊಪ್ಪಿನ ರಸವನ್ನು ಕಿವಿಗೆ ತೊಟ್ಟು ತೊಟ್ಟಾಗಿ ಹಾಕುತ್ತಿದ್ದರೆ ತಲೆನೋವು ನಿವಾರಣೆಯಾಗುತ್ತದೆ. 2) ನುಗ್ಗೆ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ರಸ ತೆಗೆದು ಅದಕ್ಕೆ ಅಡುಗೆ ಉಪ್ಪು,…

ನುಗ್ಗೆ ಸೊಪ್ಪನ್ನು ಉಪಯೋಗಿಸುವುದರಿಂದ ಸಿಗುವ ಉಪಯೋಗಗಳು:-

1) ನುಗ್ಗೆ ಸೊಪ್ಪಿನ ರಸವನ್ನು ಕಿವಿಗೆ ತೊಟ್ಟು ತೊಟ್ಟಾಗಿ ಹಾಕುತ್ತಿದ್ದರೆ ತಲೆನೋವು ನಿವಾರಣೆಯಾಗುತ್ತದೆ.

2) ನುಗ್ಗೆ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ರಸ ತೆಗೆದು ಅದಕ್ಕೆ ಅಡುಗೆ ಉಪ್ಪು, ನಿಂಬೆರಸ ಮತ್ತು ಕಾಳು ಮೆಣಸಿನ ಪುಡಿಯನ್ನು ಬೆರೆಸಿಕೊಂಡು ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಸಂಭೋಗ ಶಕ್ತಿ ವೃದ್ಧಿಯಾಗುತ್ತದೆ.

Vijayaprabha Mobile App free

3) ನುಗ್ಗೆಸೊಪ್ಪನ್ನು ನುಣ್ಣಗೆ ರುಬ್ಬಿ ಮೂಲವ್ಯಾಧಿ ಮೊಳಕೆಗಳಿಗೆ ಹಚ್ಚುತ್ತಿದ್ದರೆ ಮೊಳಕೆಗಳು ನಶಿಸಿ ಹೋಗುವುವು.

4) ಹುರಿದ ನುಗ್ಗೆಸೊಪ್ಪನ್ನು ಊತ ಬಂದಿರುವ ಭಾಗಕ್ಕೆ ಕಾಪು ಟ ಕೊಟ್ಟರೆ ಯಾತನೆ ಕಡಿಮೆಯಾಗಿ ಊತ ಇಳಿಯುವುದು.

5) ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸಿದರೆ ರಕ್ತ ಶುದ್ಧಿಯಾಗುತ್ತದೆ.

6) ನುಗ್ಗೆ ಸೊಪ್ಪನ್ನು ಬೇಯಿಸಿ ರಸ ತೆಗೆದು ಅದಕ್ಕೆ ನಿಂಬೆ ರಸ ಹಿಂಡಿ ಒಂದು ವಾರಗಳ ಕಾಲ ಸೇವಿಸಿದರೆ ತಲೆ ಸುತ್ತುವಿಕೆ ಉಪಶಮನವಾಗುವುದು.

7) ಹುರಿದ ನುಗ್ಗೆಸೊಪ್ಪನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಊದಿರುವ ಭಾಗಕ್ಕೆ ಬಿಸಿ ಬಿಸಿಯಾಗಿ ಶಾಕ ಕೊಟ್ಟರೆ ‘ಊತ ಕಡಿಮೆ ಯಾಗುವುದು ಹಾಗೂ ನೋವು ಉಪಶಮನವಾಗುವುದು.

ಇದನ್ನು ಓದಿ: ಕರಿಬೇವಿನ ಸೊಪ್ಪಿನ ಮಹತ್ವ ಮತ್ತು ದಿನ ಬಳಸುವುದರಿಂದ ಸಿಗುವ ಉಪಯೋಗಗಳೇನು ಗೊತ್ತೇ? ನೀವು ತಿಳಿದುಕೊಳ್ಳಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.