ಉತ್ತಮ ಆರೋಗ್ಯಕ್ಕಾಗಿ ಬ್ರೆಕ್ ಫಾಸ್ಟ್‌ಗೆ ಮೊಳಕೆ ಕಾಳು ಬಹು ಮುಖ್ಯ:
ಉತ್ತಮ ಆರೋಗ್ಯಕ್ಕಾಗಿ ಮೊಳಕೆ ಕಾಳು ಬಹು ಮುಖ್ಯವಾಗಿದ್ದು, ಇದರಿಂದ ಮಾಡಿದ ತಿಂಡಿಯನ್ನು ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತಾಗಿ ಬೇಗ ಹಸಿವಾಗುವುದಿಲ್ಲ.
ಮೊಳಕೆ ಕಾಳಿನ ಜೊತೆ ದಾಳಿಂಬೆ ಕಾಳು, ಹಸಿ ಕ್ಯಾರೆಟ್, ಸೌತೆಕಾಯಿ, ನಿಂಬೆರಸ ಹಾಗು ಸ್ವಲ್ಪ ಉಪ್ಪು ಹಾಕಿ ತಿಂದರೆ ರುಚಿಯಾಗಿರುತ್ತದೆ.
ಅಷ್ಟೇ ಅಲ್ಲದೆ ಮೊಳಕೆ ಕಾಳುಗಳಲ್ಲಿ ಪಚನಕ್ರಿಯೆ ಸರಳಗೊಳಿಸುವ, ಸನ್ ಸ್ಟ್ರೋಕ್ ತಡೆಯುವ, ದೇಹ ತೂಕ ಇಳಿಸುವ, ಚರ್ಮದ ಕಾಂತಿ ಹೆಚ್ಚಿಸುವ, ಮೂಳೆಗಳನ್ನು ಗಟ್ಟಿಗೊಳಿಸುವ ಗುಣಗಳಿವೆ.
ಪುರುಷರ ಲೈಂಗಿಕ ಆರೋಗ್ಯಕ್ಕೆ ಬೇಳೆ ಕಾಳು ಸಹಕಾರಿ:
ಕಡಲೆ ಬೇಳೆ: ಮಧುಮೇಹವನ್ನು ನಿಯಂತ್ರಿಸುತ್ತದೆ.
ಹುರಳಿ ಕಾಳು: ಇದು ಶೀತ, ಕೆಮ್ಮು, ನೆಗಡಿ ಹಾಗೂ ಇತರ ಸಣ್ಣ ಪುಟ್ಟ ಕಾಯಿಲೆಗಳನ್ನು ಹಿಡಿತದಲ್ಲಿ ಇಡುತ್ತದೆ.
ತೊಗರಿ: ಇದರಲ್ಲಿರುವ ಪೋಷಕಾಂಶಗಳು ಗರ್ಭಿಣಿಯರಿಗೆ ಬಹಳ ಮುಖ್ಯ. ಇದರಿಂದ ಮಗುವಿನ ಬೌದ್ಧಿಕ ಬೆಳವಣಿಗೆ ಉತ್ತಮವಾಗಿರುತ್ತದೆ.
ಉದ್ದಿನ ಬೇಳೆ: ಹೃದಯದ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಮಾಂಸಖಂಡ ಬೆಳವಣಿಗೆಗೆ ಹಾಗೂ ಪುರುಷರ ಲೈಂಗಿಕ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿದೆ.
ಇದನ್ನು ಓದಿ: ತೂಕ ಕಡಿಮೆಗೆ ಗುಲಾಬಿ ಸಹಕಾರಿ; ಲವಂಗ ಟೀ ಸೇವನೆಯಿಂದ ಮೂಳೆಗಳ ಅರೋಗ್ಯ ಸುಧಾರಣೆ




