ತುಪ್ಪ ಸೇವನೆಯಿಂದಾಗುವ ಪ್ರಯೋಜನಗಳು:
ತುಪ್ಪದಲ್ಲಿ ಎ, ಸಿ, ಡಿ & ಕೆ ಅಂತಹ ವಿಟಮಿನ್ ಹೇರಳವಾಗಿರಲಿದ್ದು, ಒಂದು ಟೀ ಸ್ಪೂನ್ ನಲ್ಲಿ ಕಾರ್ಬೋಹೈಡ್ರೇಟ್, ಶುಗರ್, ಫೈಬರ್ ಮತ್ತು ಪ್ರೊಟೀನ್ ಶೂನ್ಯ ಪ್ರಮಾಣದಲ್ಲಿರಲಿದ್ದು, ಕೊಬ್ಬಿನಂಶ 5 ಗ್ರಾಮ್ ಇರಲಿದ್ದು ದೇಹದ ತೂಕ ಹೆಚ್ಚಿಸಿಕೊಳ್ಳಬಹುದಾಗಿದೆ.
ತುಪ್ಪವು ಎಲ್ಲಾ ತೆರನಾದ ಉರಿಯೂತ ಸಮಸ್ಯೆಗಳಿಗೆ ರಾಮಬಾಣವಾಗಿದ್ದು, ಹೃದಯ ಸಂಬಂಧಿ ಕಾಯಿಲೆಗಳನ್ನೂ ಕೂಡ ನಿಗ್ರಹಿಸಬಹುದಾಗಿದೆ. ಕರುಳು ಬೇನೆಗೂ ಕೂಡ ಉತ್ತಮ ಔಷಧೀಯ ಆಹಾರವಾಗಿದ್ದು, ನೆಗಡಿಯಿಂದ ಮೂಗು ಕಟ್ಟಿದ್ದರೆ ತುಪ್ಪ ತಿನ್ನಬಹುದು.
ಬೆಲ್ಲದೊಂದಿಗೆ ತುಪ್ಪ ಸೇರಿಸಿ ಸೇವಿಸಿದ್ರೆ ಎಷ್ಟೆಲ್ಲ ಪ್ರಯೋಜನಗಳು…
>>ಬೆಲ್ಲದೊಂದಿಗೆ ತುಪ್ಪವನ್ನು ಸೇರಿಸಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ, ದೇಹದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತವೆ.
>> ಬೆಲ್ಲದೊಂದಿಗೆ ತುಪ್ಪವನ್ನು ಸೇರಿಸಿ ಸೇವಿಸಿದರೆ ಚರ್ಮ, ಕೂದಲು & ಉಗುರುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
>>ಬೆಲ್ಲದೊಂದಿಗೆ ತುಪ್ಪವನ್ನು ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆ ನಿವಾರಣೆಯಾಗುವುದಲ್ಲದೆ, ಮಾನಸಿಕವಾಗಿ ಸದೃಢರಾಗುತ್ತಾರೆ. ಅಷ್ಟೇ ಅಲ್ಲದೆ ರಸದೂತಗಳ ಅಸಮತೋಲನವನ್ನು ಸರಿಪಡಿಸುತ್ತದೆ.