ಹಲಸಿನ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದ್ದು, ಇದರಂದ ಹಲವು ಬಗೆಯ ಸಿಹಿ ತಿಂಡಿಗಳನ್ನು ಮಾಡುವುದು ಮಾತ್ರವಲ್ಲದೆ ಸೌಂದರ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
*ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಹಲಸಿನ ಹಣ್ಣಿನ ಪೇಸ್ಟ್ ತಯಾರಿಸಿ ಮೊಡವೆಗಳಿಗೆ ಹಚ್ಚುವುದರಿಂದ, ಮೊಡವೆಗಳು ಮಾಯ ಏಳುವುದಿಲ್ಲ.
*ನೆರಿಗೆಗಳಿಂದ ದೂರಾಗಲು ಹಲಸಿನ ಹಣ್ಣಿನ ಪೇಸ್ಟ್ ಗೆ ಒಂದು ಚಮಚ ಹಾಲು ಸೇರಿಸಿ ಮಿಶ್ರಮಾಡಿ ನೆರಿಗೆಗಳ ಭಾಗಕ್ಕೆ ಹಚ್ಚಿ, 10 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆದು ಐಸ್ ನಿಂದ ಮಸಾಜ್ ಮಾಡಿ.
*ಮುಖದ ಮೇಲಿನ ಕಪ್ಪು ಕಲೆ ನಿವಾರಿಸಲು ಹಲಸಿನ ಹಣ್ಣು ಮತ್ತು ಬೀಜವನ್ನು ನುಣ್ಣಗೆ ಅರೆದು ಮೇಲ್ಮುಖವಾಗಿ ಕಪ್ಪು ಕಲೆಗಳ ಮೇಲೆ ಹಚ್ಚುವುದರಿಂದ ಕಪ್ಪುಕಲೆ ಕ್ರಮೇಣ ಕಡಿಮೆಯಾಗುತ್ತದೆ