Alcohol : ನೀವು ಆಲ್ಕೊಹಾಲ್ ಸೇವಿಸಿದಾಗ, ಆಲ್ಕೋಹಾಲ್ ಅನ್ನು ಜೀರ್ಣಿಸಿಕೊಳ್ಳುವುದಿಲ್ಲ. ಇದು ನಿಮ್ಮ ರಕ್ತಪ್ರವಾಹಕ್ಕೆ ತ್ವರಿತವಾಗಿ ಹಾದುಹೋಗುವುದಲ್ಲದೆ, ದೇಹದ ಪ್ರತಿಯೊಂದು ಭಾಗಕ್ಕೂ ಚಲಿಸುತ್ತದೆ. ಆಲ್ಕೋಹಾಲ್ ಮೊದಲು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ, ನಂತರ ನಿಮ್ಮ ಮೂತ್ರಪಿಂಡಗಳು, ಶ್ವಾಸಕೋಶಗಳು ಮತ್ತು ಯಕೃತ್ತು.
ನಿಮ್ಮ ದೇಹದ ಮೇಲಿನ ಪರಿಣಾಮವು ನಿಮ್ಮ ವಯಸ್ಸು, ಲಿಂಗ, ತೂಕ ಮತ್ತು ಮದ್ಯದ ಪ್ರಕಾರವನ್ನು ಅವಲಂಬಿಸಿರುತ್ತದೆ. ಆಲ್ಕೋಹಾಲ್ ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ.
ಮದ್ಯಪಾನದಿಂದ ದೇಹದ ಈ ಭಾಗಗಳಿಗೆ ಹಾನಿ (alcohol effects on body)
- ಲಿವರ್ ಡ್ಯಾಮೇಜ್
- ಮೆದುಳಿನ ಕಾರ್ಯ ಕುಂಠಿತ
- ಹಾರ್ಮೋನು ಅಸಮತೋಲನ
- ದೇಹ ದೌರ್ಬಲ್ಯ
- ಫೋಲಿಕ್ ಆಮ್ಲ ಮಾತ್ರೆ
ಇದನ್ನೂ ಓದಿ: Iodine deficiency | ಅಯೋಡಿನ್ ಕೊರೆತೆಯನ್ನು ನೀಗಿಸಲು ಸೇವಿಸಬೇಕಾದ ಆಹಾರಗಳು
1. ಲಿವರ್ ಡ್ಯಾಮೇಜ್ (alcohol effects on liver)
ಲೀವರ್ ದೇಹದಲ್ಲಿನ ವಿಷದ ಅಂಶ ತೆಗೆದುಹಾಕುತ್ತದೆ. ಗೈಕೋಜನ್ ಸಂಗ್ರಹಣೆ, ಕೆಂಪು ರಕ್ತಕಣಗಳ ವಿಭಜನೆ, ಪ್ಲಾಸ್ಮಾ ಪ್ರೋಟಿನ್ ಸಂಶ್ಲೇಷಣೆ, ಹಾರ್ಮೋನ್ ಉತ್ಪಾದನೆ ನಿಯಂತ್ರಿಸುತ್ತದೆ. ಆದರೆ ಮದ್ಯಪಾನವು ಯಕೃತ್ತಿನ ಕಾರ್ಯವೈಖರಿ, ಚಪಾಪಚಯ ಪ್ರಕ್ರಿಯೆ ಬದಲಾಗಿ ಸಿರೋಸಿಸ್ ಅಥವಾ ಫ್ಯಾಟಿ ಲಿವರ್ ನಂತ ಗಂಭೀರ ಸಮಸ್ಯೆ ಉಂಟಾಗುತ್ತದೆ.
2. ಮೆದುಳಿನ ಕಾರ್ಯ ಕುಂಠಿತ (alcohol effects on brain)
ಆಲ್ನೋಹಾಲ್ ಮೆದುಳಿನ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದ ಖಿನ್ನತೆ ಹಾಗೂ ಮರೆವು ಉಂಟಾಗುತ್ತದೆ. ಆದ್ದರಿಂದ ದೀರ್ಘಕಾಲದಿಂದ ಮದ್ಯಪಾನ ಮಾಡುವವರು ಒಮ್ಮೆಲೆ ಅದನ್ನು ಬಿಡದೇ ವೈದ್ಯರ ಸಲಹೆ ಪಡೆದು ನಿಧಾನಗತಿಯಲ್ಲಿ ಸಂಪೂರ್ಣವಾಗಿ ಬಿಡುವುದು ಉತ್ತಮ.
ಇದನ್ನೂ ಓದಿ: Sugar consumption | ಸಕ್ಕರೆ ಸೇವನೆಯಿಂದ ದೇಹದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಗೊತ್ತಾ? ಇಲ್ಲಿದೆ ನೋಡಿ
3. ಹಾರ್ಮೋನು ಅಸಮತೋಲನ
ಮದ್ಯಪಾನ ಸೇವೆನೆ ಅತಿಯಾದರೆ ಪುರುಷರು ಹಾಗೂ ಮಹಿಳೆ ಇಬ್ಬರಲ್ಲೂ ಬಂಜೆತನದ ಸಮಸ್ಯೆ ಶುರುವಾಗುತ್ತದೆ. ಪುರುಷರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನು ಕಡಿಮೆಯಾಗಿ ನಪುಂಸಕತ್ವ ಉಂಟಾಗುತ್ತದೆ.
4. ದೇಹ ದೌರ್ಬಲ್ಯ
ಮದ್ಯಪಾನ ಅತಿಯಾದರೆ ಇದ್ದಕ್ಕಿಂದತೆ ದೇಹದಲ್ಲಿ ತೂಕದಲ್ಲಿ ಏರಿಳಿತವಾಗುತ್ತದೆ. ತೂಕ ಹೆಚ್ಚಾಗುವದರಿಂದ ಅನೇಕ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ತೂಕ ಕಡಿಮೆಯಿಂದಾಗಿ ದೇಹದಲ್ಲಿ ದೌರ್ಬಲ್ಯ ಉಂಟಾಗುತ್ತದೆ. ಮದ್ಯಪಾನ ಅತಿಯಾದಷ್ಟೂ ಹಸಿವು ಕಡಿಮೆಯಾಗಿ ವಾಕರಿಕೆ, ಶಕ್ತಿಹೀನತೆ ಎದುರಾಗಬಹುದು.
ಇದನ್ನೂ ಓದಿ: Sapota Fruit | ದಿನಕ್ಕೊಂದು ಸಪೋಟಾ ತಪ್ಪದೆ ತಿನ್ನಬೇಕು. ಯಾಕೆ ಗೊತ್ತಾ?
5. ಫೋಲಿಕ್ ಆಮ್ಲ ಮಾತ್ರೆ
ಮದ್ಯಪಾನದಿಂದ ಆಗುವ ಹಾನಿಗಳನ್ನು ಆದಷ್ಟು ತಡೆಯಲು ಆಲ್ನೋಹಾಲಿಗೆ ನೀರು ಬೆರೆಸಿ ಕುಡಿಯಿರಿ. ಮದ್ಯಪಾನ ಮಾಡುವ ಮುನ್ನ ಸರಿಯಾಗಿ ಆರೋಗ್ಯಕರ ಊಟ ಮಾಡಿ, ಒಮ್ಮೆಲೆ ಕುಡಿಯದೇ ಸ್ವಲ್ಪ ಸ್ವಲ್ಪ ನಿಧಾನವಾಗಿ ಕುಡಿಯಿರಿ. ಮದ್ಯದ ದುಷ್ಪರಿಣಾಮ ತಡೆಯಲು ಫೋಲಿಕ್ ಆಮ್ಲದ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳಿ.