ಹೆಚ್ಚು ನೀರು ಕುಡಿಯುವುದರಿಂದ ಆಗುವ ಅನುಕೂಲಗಳು:
> ಹೆಚ್ಚು ನೀರು ಕುಡಿಯುವುದರಿಂದ ಚಯಾಪಚಯ ವೇಗ ವೃದ್ಧಿಸುವುದಲ್ಲದೆ, ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ.
> ಹೆಚ್ಚು ನೀರು ಕುಡಿಯುವುದರಿಂದ ಹೊಟ್ಟೆ ಶುಚಿಗೊಳಿಸುವುದಲ್ಲದೆ, ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
>ಹೆಚ್ಚು ನೀರು ಕುಡಿಯುವುದರಿಂದ ಮೈಗ್ರೇನ್ ತಡೆಯಲು, ತೂಕ ಇಳಿಕೆಗೆ ಸಹಕಾರಿಯಾಗುವುದಲ್ಲದೆ, ದೇಹದ ಅಂಗಾಂಶಗಳ ಆರೋಗ್ಯವನ್ನು ರಕ್ಷಿಸುತ್ತದೆ.
> ಇನ್ನು ಹೆಚ್ಚು ನೀರು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದಲ್ಲದೆ, ದೇಹದ ಎಲ್ಲಾ ಜೀವಕೋಶಗಳು ಆರೋಗ್ಯವಾಗಿರುತ್ತವೆ.
> ಅಷ್ಟೇ ಅಲ್ಲದೆ, ಮೆದುಳು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರಿಸುತ್ತದೆ.
ಹೆಚ್ಚು ನೀರು ಸೇವನೆಯಿಂದ ದುಷ್ಪರಿಣಾಮ?:
>ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ, ವಾಕರಿಕೆ, ವಾಂತಿ, ಸೆಳೆತ, ಆಯಾಸ ಕಾಣಿಸಿಕೊಳ್ಳುತ್ತದೆ.
>ಹೆಚ್ಚು ನೀರು ಸೇವನೆಯಿಂದ ರಕ್ತದಲ್ಲಿ ಉಪ್ಪಿನಂಶ ಕಡಿಮೆಯಾಗಿ ದೇಹದ ಅಂಗಗಳು ಊದಿಕೊಳ್ಳಲಾರಂಭಿಸುತ್ತವೆ.
>ಎಲೆಕ್ಟ್ರೋಲೈಟ್ ಮಟ್ಟ ಕುಸಿದು ಸ್ನಾಯು ಸೆಳೆತ ಆರಂಭವಾಗುವುದಲ್ಲದೆ, ದೇಹ ಬಳಲುವ ಜೊತೆಗೆ ಬೊಜ್ಜು ಬೆಳೆಯುತ್ತದೆ.
>ಪೊಟ್ಯಾಶಿಯಂ ಕಡಿತವಾಗಿ ಕಾಲು ಮತ್ತು ಎದೆನೋವು ಕಾಣಿಸಿಕೊಳ್ಳುತ್ತದೆ.
>ಇನ್ನು ಹೆಚ್ಚು ನೀರು ಸೇವನೆಯಿಂದ ಹೆಚ್ಚು ಮೂತ್ರ ವಿಸರ್ಜನೆ ಮಾಡುವ ಕಾರಣ ದ್ರವರೂಪದ ಪ್ರೊಟೀನ್ ರಕ್ತ ಸೇರದು.