ration card: ಪಡಿತರ ಚೀಟಿಯ ಅರ್ಜಿಗಳನ್ನು ಮಾ.31ರೊಳಗೆ ಪರಿಶೀಲನೆ ನಡೆಸಿ, ಏಪ್ರಿಲ್ 1 ರಿಂದ ವಿತರಿಸುತ್ತೇವೆಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಇದನ್ನು ಓದಿ: ಒಂದಕ್ಕಿಂತ ಹೆಚ್ಚು EPF ಖಾತೆಗಳನ್ನು ಹೊಂದಿರುವಿರಾ? ವಿಲೀನಗೊಳಿಸುವ ಸರಳ ಪ್ರಕ್ರಿಯೆ ಇಲ್ಲಿದೆ!
ಹೌದು, ವಿಧಾನಸಭೆಯ ಪ್ರಶ್ನೋತ್ತರ ವೇಳೆ ಶಾಸಕಿ ನಯನಾ ಮೋಟಮ್ಮ & ವಿಪಕ್ಷ ನಾಯಕ ಆರ್.ಅಶೋಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಹಿಂದಿನ ಸರ್ಕಾರ 2.95 ಲಕ್ಷ ಕಾರ್ಡ್ ಉಳಿಸಿಕೊಂಡಿತ್ತು. ಈವರೆಗೆ ನಾವು 57 ಸಾವಿರ ಕಾರ್ಡ್ ನೀಡಿದ್ದೇವೆ. ಮುಂದೆ ನೀಡುವ ಬಗ್ಗೆ ಆದೇಶಿಸಲಾಗಿದ್ದು, ಶೀಘ್ರ BPL & APL ಕಾರ್ಡ್ಗಳನ್ನು ಕೊಡುತ್ತೇವೆಂದು ಹೇಳಿದ್ದಾರೆ.
![ration card: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ration card](https://vijayaprabha.com/wp-content/uploads/2024/02/ration-card.webp)
ration card: ಮಾರ್ಚ್ 30ರ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ
ಇನ್ನು, ಹೊಸ ರೇಷನ್ ಕಾರ್ಡ್ ಗಾಗಿ (ration card) ರಾಜ್ಯಾದ್ಯಂತ ಭಾರೀ ಬೇಡಿಕೆಯಿದ್ದು ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ಸಚಿವ ಮುನಿಯಪ್ಪ ಅವರು ಉತ್ತರಿಸಿ, ಮಾರ್ಚ್ 30ರ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನು ಓದಿ: ರೈತರಿಗೆ ಕೇಂದ್ರ ಸರ್ಕಾರದ ಯೋಜನೆಗಳು.. ಯಾವ ಯೋಜನೆಯಿಂದ ಏನು ಲಾಭ?
ಈಗಾಗಲೇ ಸಲ್ಲಿಕೆ ಆಗಿದ್ದು, ಬಾಕಿ ಇರುವ 2500 ಅರ್ಜಿ ವಿಲೇವಾರಿಗೆ ಸದಸ್ಯರಿಂದ ಒತ್ತಾಯ ಕೇಳಿಬಂದಿದ್ದು, ಇದಕ್ಕೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ, ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |