lakshmi devi scorpion | ಮನೆಯಲ್ಲಿ ಶತಪದಿ ಅಥವಾ “ಲಕ್ಷ್ಮಿ ಚೇಳು” ಕಾಣಿಸಿಕೊಂಡರೆ ಅನೇಕರು ಆತಂಕಗೊಳ್ಳುತ್ತಾರೆ. ಆದರೆ ಪುರಾತನ ನಂಬಿಕೆಗಳ ಪ್ರಕಾರ, ಇದು ಶುಭ ಸೂಚಕ. ಜ್ಯೋತಿಷ್ಯರು ಮತ್ತು ವಾಸ್ತು ತಜ್ಞರ ಪ್ರಕಾರ, ಜರಿ ಮನೆಗೆ ಬ೦ದರೆ ಅದು ಆರ್ಥಿಕ ಸಮೃದ್ಧಿ ಮತ್ತು ದೇವಿಯ ಕೃಪೆಯ ಸಂಕೇತವಾಗಿದೆ.
ಯಾವ ಸ್ಥಳದಲ್ಲಿ ಜರಿ ಕಾಣಿಸಿಕೊಳ್ಳುವುದು ಶುಭ?
ಡಾ. ಬಸವರಾಜ್ ಗುರೂಜಿಯವರ ಪ್ರಕಾರ, ಮನೆಯ ಬಾಗಿಲು, ದೇವರ ಕೋಣೆ, ಅಡುಗೆಮನೆ ಅಥವಾ ಹಾಲ್‌ನಲ್ಲಿ ಜರಿ ಕಂಡರೆ ಅದೃಷ್ಟದ ಬಾಗಿಲು ತೆರೆದಂತೆ. ಆದರೆ ಸ್ನಾನದ ಕೋಣೆಯಲ್ಲಿ ಕಂಡರೆ ಅದು ಅಶುಭ – ಆರೋಗ್ಯ ಅಥವಾ ಮನಶಾ೦ತಿಯ ಹಾನಿಯ ಸೂಚನೆ. ಪ್ರತಿ ಸ್ಥಳವು ವಿಭಿನ್ನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎ೦ದು ಗುರುಜಿಗಳು ಹೇಳಿದ್ದಾರೆ.
ಯಾವ ದಿನ ಜರಿ ಕಂಡರೆ ಯಾವ ಫಲ?
ಸೋಮವಾರ: ದೈವಾನುಗ್ರಹ, ಶುಭಾರಂಭದ ಸೂಚನೆ
ಮಂಗಳವಾರ: ವಾಹನ ಯೋಗ, ಆರೋಗ್ಯ ಚೇತರಿಕೆ, ಆರ್ಥಿಕ ಲಾಭ
ಬುಧವಾರ: ಉದ್ಯೋಗ ಬದಲಾವಣೆ, ಹೊಸ ಅವಕಾಶಗಳು
ಗುರುವಾರ: ಧನಲಾಭ, ಬಡ್ತಿ, ವ್ಯಾಪಾರ ಯಶಸ್ಸು
ಶುಕ್ರವಾರ: ದೇವಿಯ ಕೃಪೆ, ಉಡುಗೊರೆಗಳು, ಬಂಗಾರ ಖರೀದಿ
ಶನಿವಾರ: ಕಾನೂನು ವಿವಾದಗಳಲ್ಲಿ ಜಯ
ಭಾನುವಾರ: ಆರೋಗ್ಯ, ಆತ್ಮಸ್ಥೆರ್ಯ ಮತ್ತು ಬೆಂಬಲದ ಸಂಕೇತ
ಶನಿವಾರ & ಭಾನುವಾರ ಕಂಡರೆ ಏನರ್ಥ?
ಶನಿವಾರ ಜರಿ ಕಂಡರೆ ಕಾನೂನು ಅಥವಾ ಭೂ ವಿವಾದಗಳಲ್ಲಿ ಜಯದ ಸೂಚನೆ, “ಸತ್ಯಮೇವ ಜಯತೆ” ಎ೦ಬ೦ತೆ ನ್ಯಾಯ ನಿಮ್ಮದಾಗುತ್ತದೆ. ಭಾನುವಾರ ಅದು ಆರೋಗ್ಯ ಮತ್ತು ಆತ್ಮಸ್ಥೆರ್ಯ ವೃದ್ಧಿಗೆ ಸಂಕೇತ. ಇತರರಿ೦ದ ಬೆ೦ಬಲ ದೊರೆತು ಕಷ್ಟಗಳಲ್ಲಿ ಶಾಂತಿ ಕಾಣುವಿರಿ.
ಧನಾತ್ಮಕ ಶಕ್ತಿ
ಲಕ್ಷ್ಮಿ ಚೇಳು ಕಾಣಿಸಿಕೊಳ್ಳುವುದು ಕೇವಲ ಪ್ರಕೃತಿಯ ಅಚ್ಚರಿ ಅಲ್ಲ. ಅದು ಮನೆಯಲ್ಲಿ ಧನಾತ್ಮಕ ಶಕ್ತಿ ಹರಿದಾಡುತ್ತಿರುವ ಸೂಚನೆ. ಹೀಗಾಗಿ, ಮು೦ದಿನ ಬಾರಿ ಜರಿ ಕಂಡರೆ ಭಯಪಡದೆ, ಅದನ್ನು ದೇವಿಯ ಕೃಪೆಯ ಸಂಕೇತವೆಂದು ಗೌರವಿಸಿ. ಶುಭ ಮತ್ತು ಸಮೃದ್ಧಿ ನಿಮ್ಮ ಮನೆಗೆ ಸದಾ ವಾಸವಾಗಲಿ.




