ಶನಿ ಜಯಂತಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ವರ್ಷ ಜೇಷ್ಠ ಮಾಸದ ಅಮಾವಾಸ್ಯೆ ತಿಥಿಯ೦ದು ಶನಿ ಜಯಂತಿ (Shani Jayanti) ಹಬ್ಬವನ್ನು ಆಚರಿಸಲಾಗುವುದು. ಈ ದಿನ ಶನಿ ದೇವನನ್ನು ಪೂಜಿಸುವುದರಿಂದ ಸಾಕಷ್ಟು ಶುಭವಾಗುತ್ತದೆ ಎ೦ದು ಹೇಳಲಾಗುತ್ತದೆ. ಈ ದಿನ ಶುಭ ಯೋಗಗಳ ನಿರ್ಮಾಣವಾಗಲಿದೆ ಹಾಗಾಗಿ ಈ ಶನಿ ಜಯಂತಿಯು ಯಾವೆಲ್ಲ ರಾಶಿಯವರಿಗೆ ಸಂತೋಷವನ್ನು ತರಲಿದೆ ಎ೦ದು ಇಲ್ಲಿ ತಿಳಿಯಿರಿ.
ಅಮಾವಾಸ್ಯೆ ತಿಥಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಮಾವಾಸ್ಯೆ ತಿಥಿಯ ಆರಂಭವು 2025ರ ಮೇ 26ರ ಮಧ್ಯಾಹ್ನ 12.11ಕ್ಕೆ ಶುರುವಾಗಲಿದ್ದು, ಮರುದಿನ ಅಂದರೆ ಮೇ 27ರ ಬೆಳಗ್ಗೆ 8:37ಕ್ಕೆ ಕೊನೆಗೊಳ್ಳಲಿದೆ. ಹಾಗಾಗಿ ಉದಯ ತಿಥಿಯ ಪ್ರಕಾರ ಈ ವರ್ಷ 2025 ರ ಮೇ 27ರಂದು ಶನಿ ಜಯಂತಿ ಹಬ್ಬವನ್ನು ಆಚರಿಸಲಾಗುವುದು. ಶುಭ- ಶುಕ್ಲ ಯೋಗಗಳ ನಿರ್ಮಾಣದಿಂದ ಶನಿ ಜಯಂತಿಯ ಹಬ್ಬವು ಈ ಮೂರು ರಾಶಿಗೆ ಸಾಕಷ್ಟು ಪ್ರಯೋಜನ ನೀಡುತ್ತದೆ.
ಮಿಥುನ ರಾಶಿ
ಈ ವರ್ಷದ ಶನಿ ಜಯಂತಿಯ ದಿನ ರೂಪಗೊಳ್ಳುವ ಶುಭ ಯೋಗದಿ೦ದಾಗಿ ಮಿಥುನ ರಾಶಿಗೆ ಸೇರಿದ ಜನರಿಗೆ ಕರ್ಮಫಲದಾತನಾದ ಶನಿಯ ವಿಶೇಷ ಕೃಪೆ ಪ್ರಾಪ್ತಿಯಾಗುವುದು. ಈ ಅವಧಿಯಲ್ಲಿ ಹಣ ಗಳಿಕೆ ಹೆಚ್ಚಾಗುತ್ತದೆ. ವಿವಾದಗಳಲ್ಲವೂ ಶಾಂತಿಯುತವಾಗಿ ಬಗೆಹರೆದು, ಮನಸ್ತಾಪಗಳು ಕೂಡ ದೂರವಾಗುವುದು. ವಿವಾಹ ಯೋಗ ಕೂಡಿ ಬರಲಿದ್ದು, ಆದಷ್ಟು ಬೇಗ ಮದುವೆಯಾಗುವುದು.
ತುಲಾ ರಾಶಿ
12 ರಾಶಿಗಳಲ್ಲಿ ತುಲಾ ರಾಶಿಯು ಶನಿಗೆ ಅತ್ಯಂತ ಪ್ರಿಯವಾದ ರಾಶಿಯಾಗಿದೆ. ಶುಭ-ಶುಕ್ಲ ಯೋಗಗಳ ಮಹಾ ಸಂಯೋಗದಿಂದಾಗಿ ತುಲಾ ರಾಶಿಗೆ ಸೇರಿದ ಜನರಿಗೆ ಅತ್ಯಂತ ಹೆಚ್ಚಿನ ಲಾಭ ದೊರಕಲಿದ್ದು, ವಿವಾಹಿತ ತುಲಾ ರಾಶಿಗೆ ಸೇರಿದ ಜನರ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಆರೋಗ್ಯ, ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ.
ಮಕರ ರಾಶಿ
ಶನಿ ಜಯ೦ತಿಯ ಶುಭ ದಿನ ರೂಪಗೊಳ್ಳಲಿರುವ ಶುಭ-ಶುಕ್ಲ ಯೋಗದಿಂದಾಗಿ ಮಕರ ರಾಶಿಗೆ ಸೇರಿದ ಜನರು ತಮ್ಮ ವೃತ್ತಿ ಜೀವನಕ್ಕೆ ಸಂಬ೦ಧಿಸಿದಂತೆ ಸಂತೋಷದ ಸುದ್ದಿಯನ್ನು ಪಡೆಯುವಿರಿ. ಸಮಾಜದಲ್ಲಿ ಉತ್ತಮ ಹೆಸರು & ಧನ ಲಾಭ ಪಡೆಯುವಿರಿ. ಶುಭ-ಶುಕ್ಲ ಸಂಯೋಗದಿಂದಾಗಿ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಯಾಗುವುದು. ಹಣಕಾಸಿನ ವಿಚಾರದಲ್ಲೂ ಉತ್ತಮ ಲಾಭ ಪಡೆಯುವಿರಿ.